ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೩೦ ಶ್ರೀಮದ್ಭಾಗವತವು [ಅಧ್ಯಾ, ೮೭. ಹ್ಮಣರಿಗಿಂತಲೂ ಹೆಚ್ಚು ಪ್ರಿಯವಲ್ಲ ! ಏಕೆಂದರೆ, ಬ್ರಾಹ್ಮಣನು ಸರೈ ವೇದಮಯನು, ನಾನು ಸತ್ವದೇವಮಯನು, ವೇದವೇ ನನ್ನ ನಿಜಸ್ಥಿತಿಗೆ ಪ್ರಮಾಣವಾದುದರಿಂದ, ದೇವಮಯವಾದ ನನ್ನ ದೇಹಕ್ಕಿಂತಲೂ, ವೇದ ಮಯರಾದ ಬ್ರಾಹ್ಮಣರೇ ನನಗೆ ವಿಶೇಷಪ್ರಿಯತಮರು. ದೇಹಾತ್ಯಾಭಿ ಮಾನದಿಂದ ಅಜ್ಞರಾದ ಕೆಲವರು, ಈ ತತ್ವವನ್ನು ತಿಳಿಯದೆ, ಅರಾ ವಿಗ್ರ ಹಗಳಲ್ಲಿ ವಿಶೇಷಪೂಜ್ಯತಾಬುದ್ಧಿಯನ್ನಿಟ್ಟು, ನನ್ನ ಸ್ವರೂಪದಿಂದ ಜ್ಞಾ ನೋಪದೇಶಕರಾದ ಗುರುಗಳನ್ನೂ , ನನ್ನ ಆತ್ಮಭೂತರಾದ ಬ್ರಾಹ್ಮಣ ರನ್ನೂ ಅಸೂಯೆಯಿಂದ ಅಲಕ್ಷಮಾಡುವುದುಂಟು. ಜ್ಞಾನಿಯಾದ ಬ್ರಾಹ್ಮಣನು, ಚರಾಚರಾತ್ಮಕವಾದ ಸಮಸ್ತಪ್ರಪಂಚವನ್ನೂ , ಅದಕ್ಕೆ ಕಾರಣಭೂತಗಳಾದ ಮಹದಾಹಿ ತತ್ವಗಳನ್ನೂ, ಇತರ ಸಮಸ್ತಭಾವ ಗಳನ್ನೂ ನನ್ನ ಸ್ವರೂಪದಿಂದಲೇ ತಿಳಿಯುತ್ತಿರುವನು. ಆದುದರಿಂದ ಓ ವಿಪ್ರೋತ್ತಮಾ ! ಬ್ರಹ್ಮಕುಲೋತ್ಪನ್ನ ರಾದ ಈ ಮಹರ್ಷಿಗಳೆಲ್ಲರನ್ನೂ ನೀನು ನನ್ನ ಸ್ವರೂಪದಿಂದಲೇ ಭಾವಿಸಿ, ಭಕ್ತಿಯಿಂದ ಆರಾಧಿಸು ! ಆದ ರಿಂದ ನಾನು ತೃಪ್ತನಾಗುವೆನು. ಹಾಗಿಲ್ಲದೆ ನನ್ನನ್ನು ಎಷ್ಟೇ ಪುಷ್ಕಲ ವಾದ ಉಪಚಾರಗಳಿಂದ ಸತ್ಕರಿಸಿದರೂ ನನಗೆ ತೃಪ್ತಿಯಿರದು.” ಎಂದನು. ಹೀಗೆ ಭಗವಂತನಾದ ಕೃಷ್ಣನು ಆಜ್ಞಾಪಿಸಲು, ಆ ಶ್ರುತದೇವನು, ಶ್ರೀ ಕೃಷ್ಣನೊಡನೆ ಆ ಬ್ರಾಹ್ಮಣರೆಲ್ಲ ನಾ ಪರಮಾತ್ಮ ಬುದ್ಧಿಯಿಂದಲೇ ಆರಾಧಿಸುತಿದ್ದು, ಕೊನೆಗೆ ಉತ್ತಮಗತಿಯನ್ನು ಪಡೆದನು. ಓ ಪರೀಕ್ಷೆ ದ್ರಾಜಾ ! ಭಕ್ತರಿಗೆ ಭಕ್ತನಾದ ಕೃಷ್ಣನು, ಶ್ರುತದೇವನಿಗೂ, ಬಹುಲಾ ಶ್ವನಿಗೂ, ಸಾಧುಗಳು ಅನುಷ್ಠಿ ಸತಕ್ಕ ನ್ಯಮಾರ್ಗಗಳನ್ನು ತಿಳಿಸಿ, ಅಲ್ಲಿ ಯೇ ಕೆಲವುದಿನವಿದ್ದು, ಆಮೇಲೆ ದ್ವಾರಕೆಗೆ ಹಿಂತಿರುಗಿದನು. ಇದು ಎಂಬತ್ತಾರನೆಯ ಅಧ್ಯಾಯವು. ++ ಶ್ರು ತಿ ಗೀತೆ. wwತಿರುಗಿ ಪರೀಕ್ಷಿದ್ರಾಜನು ಪ್ರಶ್ನೆ ಮಾಡುವನು (ಓ ಮುನೀಂದ್ರಾ ! ಶಬ್ಬಗಳೆಲ್ಲವೂ ಜಾತಿ, ಗುಣ, ಕ್ರಿಯಾದಿವಿಶೇಷಣಗಳಿಂದಲ್ಲವೇ ವಸ್ತುಸ್ವ