ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೦೩ ಅಧ್ಯಾ, ೫೧ ದಶಮಸ್ಕಂಧವು ಹಿಸಿ, ಲೌಕಿಕಸುಖಗಳಲ್ಲಿ ಸೇರಿಸುವುದಕ್ಕೆ ಯತ್ನಿಸಬಹುದೆ ? ಆದರೆ ಇದರಿಂದ ನಿನ್ನನ್ನು ನಿರ್ದಯನೆಂದೂ, ವಂಚಕನೆಂದೂ ಹೇಳುವುದಕ್ಕಿಲ್ಲ. ಅವರವರ ಕರ್ಮವಾಸನೆಯೇ ಅವರಿಗೆ ಈ ವಿಧವಾದ ಬುದ್ಧಿಯನ್ನುಂಟು ಮಾಡುವುದು ನೀನೇನೋ ಅನುಗ್ರಹಬುದ್ದಿಯಿಂದಲೇ ಚೇತನರಿಗೆ ಈ ಕರ ಕ್ಷೇತ್ರದಲ್ಲಿ ದುರ್ಲಭವಾದ, ಮತ್ತು ನಿನ್ನನ್ನು ಆರಾಧಿಸುವುದಕ್ಕೆ ಅನುಕೂಲ ವಾದ ಮನುಷ್ಯ ಜನ್ಮವನ್ನು ಕೊಡುತ್ತಿರುವೆ. ಚೇತನರು ತಮ್ಮ ಪ್ರಯತ್ನ ಪಿಲ್ಲದೆ ಸಿರ್ಪೆತುಕವಾದ ನಿನ್ನ ಅನುಗ್ರಹದಿಂದ ಈ ಉತ್ತಮದೇಹವನ್ನು ಪಡೆದಿರುವಾಗಲೂ, ಕರ್ಮವಾಸನೆಯಿಂದ ಬುದ್ಧಿಗೆಟ್ಟವರಾಗಿ, ನಿನ್ನ ಪಾ ಬಾರವಿಂದಧಾನವನ್ನೇ ಮರೆತುಬಿಡುವರು, ಮತ್ತು ದೇಹವನ್ನೆ ಆತ್ಮವೆಂದು ಭಾವಿಸಿ, ಹಸುಗಳು ಮೇವಿನಾಸೆಯಿಂದ ಹುಲ್ಲು ಮುಚ್ಚಿದ ಹಾಳು ಬಾವಿಯಲ್ಲಿ ಬೀಳುವಂತೆ,ಸಂಸಾರಸಾಗರದಲ್ಲಿ ಬಿದ್ದು ತಮ್ಮಳಿಸುವರು. ಓ ದೇವಾ ! ಅದರಂತೆಯೇ ಈಗ ನಾನು, ಇಂದೋ, ನಾಳೆಯೋ ಮರಣ ಹೋಂವತಕ್ಕೆ ಈ ದೇಹವನ್ನೇ ಆತ್ಮವೆಂದು ಭ್ರಮಿಸಿ, ಹೆಂಡಿರುಮಕ್ಕಳ ಸ್ತ್ರೀಯ, ರಾಜ್ಯಕೋಶಗಳಲ್ಲಿಯೂ ಮೋಹಗೊಂಡು, ಅವುಗಳನ್ನು ರಕ್ಷಿಸುವು ದಕ್ಕಾಗಿ ಕೊನೆಮೊದಲಿಲ್ಲದ ಚಿಂತೆಯಿಂದ ಕಳವಳಿಸುತ್ತಿದ್ದೆನು. ಹೀಗೆ ಆಹಂಕಾರಮಮಕಾರಗಳಲ್ಲಿ ಸಿಕ್ಕಿಬಿದ್ದು, ಐಶೂ-ಮದದಿಂದ ಮುಂಗಾಣದೆ ವಿಷಯಾಭಿಲಾಷೆಯಲ್ಲಿ ಬುದ್ಧಿಗೆಟ್ಟಿದ್ದನು. ಇದರಿಂದ ನಾನು ಇದುವರೆಗೂ ನಿಷ್ಟ್ರಯೋಜನವಾಗಿಯೇ ನನ್ನ ಜೀವನಕಾಲವನ್ನು ಕಳೆದಂತಾಯಿತು. ಮಣ್ಣಿನ ಗೋಡೆಯಂತೆಯೂ, ಮಡಿಕೆಯಂತೆಯೂ ನಶ್ವರವಾದ ಈ ಶರೀರ ದಲ್ಲಿ ವಿಶೇಷಾಭಿಮಾನವನ್ನಿಟ್ಟು, ರಥ, ಗಜ, ತುರಗ, ಪದಾತಿಗಳೆಂಬ ಚತು ರಂಗಸೈನ್ಯಗಳಿಂದಲೂ, ಆಯಾಸೈನ್ಯಾಧಿಪತಿಗಳಿಂದಲೂ ಪರಿವೃತನಾಗಿ, ರಾಜ್ಯಾಧಿಕಾರಮದದಿಂದ ಭೂಮಿಯೆಲ್ಲವನ್ನೂ ತಿರುಗುತಿದ್ದೆನು. ಆ ಅಧಿ ಕಾರಮದದಿಂದ ಕುರುಡನಂತೆ ನಿನ್ನ ನ್ಯೂ ಕಾಣದಿದ್ದೆನು. ಹೀಗೆ ಐಶ್ವದ್ಯಮ ದರಿಂದಲೂ, ಅಧಿಕಾರಮದದಿಂದಲೂ ಮುಂದುಗಾಣದೆ, ಮೇಲೆಮೇಲೆ ನಾನಾಬಗೆಯ ಮನೋರಥಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಶಬ್ಬಾದಿ ವಿಷಯಗಳ ಲೋಭಬುದ್ಧಿಯಿಂದ ಮೈ ಮರೆತಿರುವವರನ್ನು ನೋಡಿದಾಗ, ನೀ 133 IB,