ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೬ಣ ಅಧ್ಯಾ, ೮೭.] ದಶಮಸ್ಕಂಧವು. `ರೂಪವನ್ನು ಬೋಧಿಸಬೇಕು, ಶಬ್ದಗಳ ಪ್ರವೃತ್ತಿನಿಮಿತ್ತವೇ ಇದು! ಮೇಲೆ ಹೇಳಿದ ವಿಶೇಷಣಗಳ ಮೂಲಕವಾಗಿ, ಆ ಗುಣಗಳಿಲ್ಲದ ಒತರವಸ್ತುವನ್ನು ಬೋಧಿಸುವುದೂ ಅಸಂಭವವಲ್ಲವೆ ? ಬ್ರಹ್ಮ ವೆಂಬುದು ಚೇತ ತಾಚೇತನಗ ಲೆರಡಕ್ಕಿಂತಲೂ ವಿಲಕ್ಷಣವಾದುದು ! ಅದನ್ನು ಹೀಗೆಂದು ಸಿರ್ದೆಶಿಸು ವುದೇ ಸಾಧ್ಯವಿಲ್ಲ. ಚೇತನಾಚೇತನಗಳನ್ನು ತೋರಿಸುವುದಕ್ಕೆ ನಿಮಿತ್ತವಾ ದ ಜಾತಿ, ಗುಣ, ಕ್ರಿಯಾದಿಗಳೊಂದೂ ಆ ಬ್ರಹ್ಮನಲ್ಲಿ ಸಂಭವಿಸಲಾರವು. ಹೀಗಿರುವಾಗ, ಚೇತನಾ ಚೇತನಗಳನ್ನು ನಿರ್ದೇಶಿಸತಕ್ಕ ಶ್ರುತಿಗಳು, ಜಾತ್ಯಾ ದಿಭೇದಗಳೊಂದೂ ಇಲ್ಲದ ಪರಬ್ರಹ್ಮನಲ್ಲಿ ಹೇಗೆ ವರ್ತಿಸುವುವು ? ಶ್ರುತಿಗಳಲ್ಲಿರುವ ಒಂದೊಂದು ಶಬ್ದವೂ ಆ ಪರಬ್ರಹ್ಮವನ್ನೇ ನಿರ್ದೇಶಿಸುವ ದೆಂದೂ ಆ ವೇದವಾಕ್ಯದಿಂದಲೇ ಹೇಳಲ್ಪಟ್ಟಿರುವುದು, ಒಂದುವೇಳೆ ಆ ಬ್ರಹ್ಮನನ್ನು ಸತ್ಯಜ್ಞಾನಾನಂದಸ್ವರೂಪವಾಗಿಯೂ, ಸುಜ್ಞತ್ವ ಸಶಕ್ಕಿತ್ಯಾದಿಗುಣಗಳಿಂದ ಕೂಡಿದುದಾಗಿಯೂ ಹೇಳತಕ್ಕ ಶ್ರುತಿಗಳು, ಆ ಬ್ರಹ್ಮ ಸ್ವರ ಪವನ್ನು ತಿಳಿಸುವುದಕ್ಕೆ ಪ್ರಮಾಣವೆನಿಸಿದ್ದರೂ, ಚೇತನಾ ಚೇತನಗಳೆಲ್ಲವನ್ನೂ ಬ್ರಹ್ಮವೆಂದು ಹೇಳತಕ್ಕ ಶ್ರುತಿಗಳಿಗೆ ಪ್ರಮಾಣವು ಹೇಗೆ ? ಚೇತನಾ ಚೇತನಗಳ ಜಾತಿಗುಣಾಡಿಗಳೆಂದೂ ಇಲ್ಲದ ಬ್ರಹ್ಮ ನಲ್ಲಿ, ಆ ಶ್ರುತಿಗಳು ವಾಚ್ಯಾರ್ಥದಿಂದ ವರ್ತಿಸುವುದು ಹೇಗೆಂಬುದನ್ನು ನನಗೆ ತಿಳಿಸಬೇಕು” ಎಂದನು. ಆರ್ದಾ ಶುಕನ ರಾಜೇಂವಾ ! ಕೇಳು. ಭಗವಂತನು ಜೀವಗಳಲ್ಲಿ ಅಂತರಾತ್ಮನಾಗಿದ್ದು ಅವುಗಳಿಗೆ ನೀ ಮರೋಪಗ ಳನ್ನು ನಿರ್ವಹಿಸುವುದಕ್ಕಾಗಿ, ಬುದ್ಧಿ, ಇಂದ್ರಿಯಗಳು, ಮನಸ್ಸು, ಪ್ರಾಣ ಗಳು, ಮೊದಲಾದುವುಗಳಿಂದ, ಮಹಾಭಎತಗಳವರೆಗೆ ಜಗತ್ತನ್ನು ಸೃ ಷ್ಟಿಸಿ, ಅವುಗಳನ್ನು ತನಗೆ ಶರೀರವಾಗಿ ಮಾಡಿಕೊಂಡು, ಆ ಶರೀರಸಂಬಂ ಧದಿಂದ ತಾನೇ ಅವುಗಳ ಹೆಸರಿನಿಂದ ವ್ಯವಹರಿಸಲ್ಪಡುವನು, ಅಸತ್ಪಾ. ಯವಾಗಿರುವ ಜೀವಗಳಿಗೆ, ತನ್ನ ಆರಾಧನಕ್ಕೆ ಸಾಧನವಾದ ದೇಹಾದಿಗಳನ್ನು ಕೊಟ್ಟು, ಅದರಿಂದ ತನ್ನ ನ್ನಾ ರಾಥಿಸತಕ್ಕವರಿಗೆ ಶ್ರೇಯಸ್ಸನ್ನು ಕೈಗೂಡಿ ಸುವುದಕ್ಕಾಗಿಯೂ, ಮುಕ್ತಿ ಸಾಧನವಾದ ಅಧ್ಯಾತ್ಮಜ್ಞಾನವನ್ನು ಪಡೆ ಯುವುದಕ್ಕೆ ಅವಕಾಶವನ್ನು ಕಲ್ಪಿಸಿಕೊಡುವುದಕ್ಕಾಗಿಯೂ, ಜ್ಞಾನ