ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೩೪ .ಶ್ರೀಮದ್ಭಾಗವತವು {ಅಧ್ಯಾ, ೮೬, ಗೆ ಮೊದಲು, ಆತನ ನಿಶ್ಯಾಸರೂಪವಾಗಿ ಶ್ರುತಿಗಳು ಹೊರಟು, ಮೂರ್ತಿ ವಿಶಿಷ್ಟಗಳಾಗಿ ನಿಂತು,ಸ್ತುತಿಪಾಠಕರು ನಿದ್ರೆಯಲ್ಲಿರುವ ರಾಜನನ್ನು ಪ್ರಾತಃ ಕಾಲದಲ್ಲಿ ಆತನ ಗುಣವರ್ಣನರೂಪವಾದ ಮಂಗಳಶೈಕೆಗಳಿಂದ ಎಚ್ಚರ ಗೊಳಿಸುವಂತೆ, ಆತನನ್ನು ಸ್ತೋತ್ರಮಾಡುತ್ತ ಹೀಗೆಂದು ಹೇಳುವುವು. 44ದೇವಾ ! ಜಯ!ವಿಜಯೀಭವ ! ಸಮಸ್ತ ಜಗತ್ತನ್ನೂ ಜಯಿಸತಕ್ಕ ಪ್ರಕೃತಿ ಯೂಕೂಡ ನಿನ್ನನ್ನು ಜಯಿಸಲಾರದು. ಆದುದರಿಂದಲೇ ಸೀನು ಅಜಿತನೆಂದು ಹೇಳಲ್ಪಡವೆ. ಓ ! ಪ್ರಭೂ ! ಈಗ ನಿನ್ನಲ್ಲಿ ಸೂಕ್ಷ್ಮಾವಸ್ಥೆಯಿಂದ ಲೀನವಾ ಗಿರುವ ಜೀವಗಳಿಗೆ, ಸಂಸಾರಹೇತುವಾದ ಪ್ರಕೃತಿಸಂಬಂಧವನ್ನು ಬಿಡಿಸು ವುದಕ್ಕಾಗಿ ನೀನು ಎಚ್ಚರಗೊಳ್ಳುವನಾಗು, ನಿನ್ನಲ್ಲಿ ಅಪರಾಧಿಗಳಾದ ಜನಗ ಭಕ್ತಿಯ, ನೀನು ಎಷ್ಮೆ ದೋಷಗಳಿದ್ದರೂ ಮನಸ್ಸಿಗೆ ತಂದುಕೊಳ್ಳದೆ ಆವರಲ್ಲಿರತಕ್ಕ ಅಲ್ಪಸ್ವಲ್ಪಗುಣವನ್ನೆ ಅಭಿನಂಖಸತ ಕವನಾದುದರಿಂದ ಜೀವಾತ್ಮರಿಗೆ ಸಂಸಾರಮೂಲಕವಾದ ಪ್ರಕೃತಿಯನ್ನು ತೊಲಗಿಸು, ನಿನ ಗೆ ಈ ಕಾಠ್ಯಕ್ಕೆ ತಕ್ಕ ಜ್ಞಾನಶಕ್ತಿ ಮೊದಲಾದುವುಗಳು ಇಲ್ಲವೆಂದು ಹೇಳುವು ದಕ್ಕಿಲ್ಲ. ನೀನು ಸ್ನೇಚ್ಛೆಯಿಂದಲೇ ಜ್ಞಾನ, ಶಕ್ತಿ, ಬಲ, ಐಶ್ವಯ್ಯ, ಮೊದ ಲಾದ ಷಡ್ಗುಣಗಳನ್ನೂ ಕೈಕೊಂಡಿರತಕ್ಕವನು. * ಚೇತನಾಚೇತನ ಶರೀರ ರೂಪವಾಗಿ ಏರ್ಪಡುವ ಪ್ರಕೃತಿಗುಣಗಳಿಗೂ, ಅಂತಹ ಶರೀರವನ್ನು ಆಶ್ರ ಯಿಸತಕ್ಕ ಜೀವಗಳಿಗೂ ಇರುವ ಶಕ್ತಿಗಳೆಲ್ಲವನ್ನೂ , ಆಯಾ ಕಾರೊ ನ್ಮುಖವಾಗುವಂತೆ ಎಚ್ಚರಗೊಳಿಸತಕ್ಕವನು ನೀನೇ ! ಅಂತಹ ಪ್ರಕೃತಿ ಪುರುಷರೊಡಗೂಡಿ ಜಗತ್ತಿನ ಆಕಾರದಿಂದ ಪರಿಣಪಿಸತಕ್ಕವನೂ ನೀನೇ ಆದುದರಿಂದ, ನಿನ್ನನ್ನು ವೇದಗಳು (ಎಂದರೆ ವೇದದಲ್ಲಿ ಚಿದಚಿದ್ಘಾಚಕಗ ಳಾದ ಶಬ್ದಗಳೆಲ್ಲವೂ) ವಾಚ್ಯಾರ್ಥದಿಂದಲೇ ವ್ಯವಹರಿಸುವುವು. ಪ್ರಳಯ ಕಾಲದಲ್ಲಿ ಬ್ರಹ್ಮನಿಂದ ಸಮಸ್ತ ಜಗತ್ತೂ ಉಪಸಂಹರಿಸಲ್ಪಟ್ಟಿದ್ದರೂ, ಸೃಷ್ಟಿ ಕಾಲದಲ್ಲಿ ಉತ್ಪನ್ನವಾಗುವ ಈ ಜಗತ್ತೂ ಬ್ರಹ್ಮ ಎಂದೇ ವ್ಯವಹರಿಸ ಜೀವಾತ್ಮಗಳಿಗೆ ಪ್ರಳಯದಶೆಯಲ್ಲಿ ಚಿಚ್ಛಕ್ತಿಯು ಸಂಕುಚಿತವಾಗಿ, ಮೂ ಢವಾಗಿರುವುದರಿಂದ ಅದನ್ನು ವಿಕಾಸಗೊಳಿಸುವುದೇ ಆ ಜೀವಾತ್ಮರನ್ನು ಎಚ್ಚರ ಸAಳಿಸುವುದೆಂದು ಗ್ರಾಹ್ಯವು.