ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೬೩ ಶ್ರೀಮದ್ಭಾಗವತವು [ಅಧ್ಯಾ, ೮೭, ವಾಗಿರುವುದು,ಗಾಳಿ ತುಂಬಿದ ಚರ್ಮದ ತಿತ್ತಿಯಂತೆ ಅವರ ಉಸಿರಾಟವೂ ನಿಷ್ಪಲವು ? ಮಹತ್ತು ಅಹಂಕಾರ ಮೊದಲಾದ ತತ್ವಗಳು ಮೊದಲು ನಿನ್ನ ದರ್ಶನರೂಪವಾದ ಸಂಕಲ್ಪದಿಂದಲೇ ಸತ್ತೆಯನ್ನು ಹೊಂದಿ, ಆಮೇಲೆ ನೀ ನು ಅಂತರಾಮಿಯಾಗಿ ಪ್ರೇರಿಸಿದುದರಿಂದಲೇ ಜಗತ್ಕಾರಣವಾದಆಂಡವನ್ನು ಸೃಷ್ಟಿಸಿದುವು. ನಿನ್ನ ಈ ಕ್ಷಾರೂಪವಾದ ಅನುಗ್ರಹವಿಲ್ಲದಿದ್ದರೆ ಅವುಗಳಿಗೆ ಜಗತ್ಕಾರಣತ್ವವೂ ಸಿದ್ಧಿಸದು. (ಅಚೇತನವಾದ ಪ್ರಕೃತಿಗೆ ಜಗತ್ಕಾರ ಇತ್ವವನ್ನು ಹೇಳುವುದಕ್ಕೆ ಸಾಧ್ಯವಿಲ್ಲದಿದ್ದರೂ, ಮೊದಲು ಆತ್ಮನಿಂದ ಆಕಾಶವುಂಟಾಯಿ ತೆಂಬ ಶ್ರುತಿವ: ಕ್ಯವನ್ನನುಸರಿಸಿ, ಆತ್ಮನಿಗೇ ಜಗತ್ಕಾರ ಣತ್ವವನ್ನು ಹೇಳಬಾರದೆ ?” ಎಂದರೆ, ಆ ಆತ್ಮ ಶಬ್ದವೂ ಸಾಮಾನ್ಯವಾದ ಪ್ರತ್ಯಗಾತ್ಮನಲ್ಲಿ ಅನ್ವಯಿಸಲಾರದು. ಆನಂದವಲ್ಲಿಯೆಂಬ ಉಪನಿಷದ್ವಾಕ್ಯ ದಲ್ಲಿ, ಅನ್ನ ಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಆನಂದಮಯಗಳೆಂಬ ಪುರುಷಭೇದಗಳಲ್ಲಿ ಕೊನೆಯದಾದ ಆನಂದಮಯ ಪುರುಷಾಕಾರವೇ ಸೃಷ್ಟಿ ಕಾರಣವೆನಿಸುವುದು. ಆ ಆನಂದಮಯಪುರ.ಷನು ನೀನೇ ಹೊರತು ಬೇರೆ ಪ್ರತ್ಯಗಾತ್ಮನಲ್ಲ. ಏಕೆಂದರೆ, ಸಮಸ್ತ ಚರಾಚರ ಗಳಿಗೂ ವಿಲಕ್ಷಣನಾಗಿ, ಅವುಗಳಲ್ಲಿ ಅಂತರಾತ್ಮನಾಗಿರತಕ್ಕವನೂ ನೀನೇ ! ಹಿಂದೆ ಹೇಳಿದ ಆನ್ನ ಮಯಾದಿತತ್ವಗಳು ನಾಲ್ಕ ಉಪಸಂಹೃತವಾದ ಮೇಲೆಯೂ, ನಿಗ್ವಿಕಾರವಾಗಿ ಉಳಿಯತಕ್ಕ ಅನಂದಮಯಪುರುಷತತ್ವವೂ ನೀನೇ ! ವೇದಾಂತವಿಹಿತಗಳಾದ ಬ್ರಹ್ಮಪಾಸನಮಾರ್ಗದಲ್ಲಿ ಸೂಕ್ಷ್ಮ ಬುದ್ಧಿಯುಳ್ಳ ಅರುಣವಂಶೀಯರಾದ ಕೆಲವು ಋಷಿಗಳು, ತಮ್ಮ ಹೃದಯ ಪುಂಡರೀಕದಲ್ಲಿ ದಹರವೆಂಬ ಆಕಾಶರೂಪದಿಂದ ನಿನ್ನನ್ನು ಪಾಸಿಸು ವರು, ವೈಶ್ವಾನರವಿದ್ಯಾನಿಷ್ಟರಾದವರು ಜಠರಾಗ್ನಿ ಶರೀರಕನಾದ ನಿನ್ನನ್ನು ಪಾಸಿಸುವರು, ಮತ್ತೆ ಕೆಲವರು ಸುಷುಮ್ಮಾನಾಡಿಯ ಮೂಲಕದಿಂದ ನಿನ್ನನ್ನು ಪಾಸಿಸುವರು. ಅನಂತಾ ! ಆ ಸುಷುಮ್ಮಾನಾಡಿಯು, ಹೃದಯ ದಿಂದ ಹಿಡಿದು ನಿನ್ನ ಉಪಾಸನಸ್ಥಾನಗಳಲ್ಲಿ ಉತ್ತಮವೆನಿಸಿದ ಭೂಮಧ್ಯದ ವರೆಗೆ ಊರ್ಧ್ವಮುಖವಾಗಿ ವ್ಯಾಪಿಸಿರುವುದು, ಮೇಲೆ ಹೇಳಿದಯಾವವಿಧ ದಿಂದಾದರೂ ನಿನ್ನನ್ನು ಉಪಾಸಿಸಿದವರು, ತಿರುಗಿ ಪ್ರಕೃತಿಮಂಡಲದಲ್ಲಿ