ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೬೮ ಶ್ರೀಮದ್ಭಾಗವತವು [ಅಧ್ಯಾ, ಆ೭. ಆ ನಿನ್ನ ಅವತಾರಚರಿತ್ರೆಗಳೆಂಬ ಅಮೃತಸಮುದ್ರದಲ್ಲಿ ಓಲಾಡುತ್ತ, ಆಧ್ಯಾತ್ಮಿಕಾದಿತಾಪಗಳನ್ನು ನೀಗಿ, ನಿನ್ನ ಪಾದಸೇವೆಯಲ್ಲಿ ರುವ ಭಾಗವತರ ಸಹವಾಸಸುಖದಲ್ಲಿರುವವನು, ಅದರಿಂದ ಆಪ ವರ್ಗವನ್ನೂ ಕೂಡ ಅಪೇಕ್ಷಿಸಲಾರನು. ಜೀವನಿಗೆ ಪಂಜರದಂತಿರುವ ಈ ಮನುಷ್ಯ ಶರೀರವು ನಿನ್ನ ಪಾದಕ್ಕೆಂಕಯ್ಯಕ್ಕಾಗಿಯೇ ಉಪಯೋಗಿಸಲ್ಪ “ ಪಕ್ಷದಲ್ಲಿ, ಆ ಶರೀರವೂ, ಜೀವಾತ್ಮಾನಿಗಳಿಗೆ ಸಮಾನವಾಗಿ ಸಾರ್ಥಕ್ಯ ವನ್ನು ಹೊಂದುವುದು, ಆದರೆ ಕೆಲವರು ಇಂತಹ ದೇಹವನ್ನು ಹೊಂದಿಯೂ, ಪ್ರಿಯನಾಗಿಯೂ, ಹಿತನಾಗಿಯೂ, ಪರಮಾತ್ಮ ನಾಗಿಯ ಇರುವ ನಿನ್ನಲ್ಲಿ ವಿಮುಖರಾಗುವರು. ಆ ದೇಹವೇ ಅಸತ್ತುಗಳಾದ ಶಬ್ದಾದಿವಿಷಯಗ ಳನ್ನು ಸೇವಿಸುವುದರಿಂದ, ತನ್ನೊಳಗಿನ ಜೀವನಿಗೂ ಸ್ಥಾವರತ್ವವನ್ನುಂಟು ಮಾಡುವುದು, ಈ ಎಚಾರಗಳನ್ನು ಯೋಚಿಸದೆ, ಅಖಂಡಾನಂದಸ್ವರೂಪ ನಾದ ನಿನ್ನಲ್ಲಿ ವಿಮುಖರಾಗಿ, ಯಾರು ವಿಷಯಾಸಕ್ತಿಯಲ್ಲಿ ಬೀಳುವರೋ ಅಂತವರನ್ನು ತಮ್ಮನ್ನೇ ತಾವು ಕೆಡಿಸಿಕೊಳ್ಳತಕ್ಕ ಆತ್ಮಘಾತುಕರೆಂದು ಹೇಳುವುದಕ್ಕೆ ತಡೆ ಯೋನಿದೆ? ಅಂತವರ ಸ್ಥಿತಿಯು ಬಹಳ ಶೋಚನೀಯವು! ಅವರು ತಮ್ಮ ಪ್ರಾರಬ್ಧ ಕರ್ಮಶೇಷದಿಂದ ಮೇಲೆಮೇಲೆ ತಮ್ಮ ಜೀವಾ ತ್ಮನಿಗೆ ನಾನಾಬಗೆಯ ದೇಹಗಳನ್ನುಂಟುಮಾಡಿ, ಮಹಾಭಯಂಕರವಾದ ಸಂಸಾರದಲ್ಲಿ ಭ್ರಮಿಸುವರು. ಓ ದೇವಾ ? ಪ್ರಾಣಗಳು, ಇಂದ್ರಿಯಗಳು, ಮನಸ್ಸು, ಇವೆಲ್ಲವನ್ನೂ ನಿಗ್ರಹಿಸಿ, ದೃಢವಾದ ಉಪಾಸನಾಯೋಗದಲ್ಲಿ ರುವ ಮಹರ್ಷಿಗಳು, ಯಾವ ನಿನ್ನ ಸ್ವರೂಪವನ್ನು ತಮ್ಮ ಹೃದಯದಲ್ಲಿ ಹೊಂದಿರುವರೋ, ಅದನ್ನು ನಿನ್ನ ಶತ್ರುಗಳು,ದ್ವೇಷಬುದ್ಧಿಯಿಂದಲೇ ಹೊಂ ದಿರುವರು ಹಾಗೆಯೇ ಗೋಪಸಿಯರು, ನಿನ್ನ ಭುಜ ಸೌಂದಠ್ಯದಲ್ಲಿರುವ ಮೋಹದಿಂದ ಪಡೆದಿರುವರು. ಹೆಚ್ಚೇಕೆ ? ವೇದಾಭಿ ಮಾಸಿದೇವತೆಗಳಾದ, ನಾವೂ, ನಿನ್ನ ಪಾದಾರವಿಂದವನೇ ಅಮೃತದಂತೆ ಆದರಿಸತಕ್ಕ ಇತರರೆಲ್ಲ ರೂ, ಮಹಾಯೋಗಿಗಳೊಡನೆ ಸಮಕಕ್ಷೆಯಲ್ಲಿ ನಿನ್ನ ಸಾನ್ನಿಧ್ಯಸುಖವನ್ನನು ಭವಿಸುವೆವು. ಓ !! ಪ್ರಭ ! ಸೃಷ್ಟಿಗೆಮೊದಲು, ಸೂಕ್ಷಚೇತನಾಚೇ ತನಗಳೊಡನೆ ಜಗತ್ಕಾರಣರೂಪದಲ್ಲಿದ್ದ ನಿನ್ನ ಆ ಸ್ವರೂಪವನ್ನು , ಈ