ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೭೦ ಶ್ರೀಮದ್ಭಾಗವತವು [ಅಧ್ಯಾ. ೮೩. ರೂಪನಾಗಿಯೂ ಇರುವ ನಿನ್ನ ನಿಜವನ್ನು ತಿಳಿದೊಡನೆ, ಆ ವಿಧವಾದ ಅಜ್ಞಾನವೂ, ಆ ವಾದಭೇದಗಳೂ ಉಂಟಾಗಲಾರವು. ಮನುಷ್ಯಜಾತಿಯ ವರೆಗಿನ ಸಮಸ್ತ ದೇಹಿಗಳಲ್ಲಿಯೂ ಇರುವ ತ್ರಿಗುಣಾತ್ಮಕವಾದ ಮನಸ್ಸು, ಬೇರೆ ಸಮಸ್ಯ ವಿಷಯಗಳಲ್ಲಿಯೂ, ಕಾಠ್ಯಕಾರಿಯಾಗುವಂತೆ ತೋರಿದರೂ, ನಿನ್ನಲ್ಲಿ ಅದರ ಕಾಠ್ಯವು ನಡೆಯಲಾರದು, ಚೇತನಾಚೇತನರೂಪವಾದ ಸಮಸ್ತ ಜಗತ್ತಿನೊಡಗೂಡಿ, ಆ ಜಗತ್ತಿಗೆ ಅಂತರಾತ್ಮನಾಗಿದ್ದರೂ ನಿನ್ನ ನ್ನು ಅದು ತಿಳಿಯಲಾರದು. ಓ ! ದೇವಾ ! ನಿನ್ನ ಉಪಾಸನಾರೂಪವಾದ ಯೋಗದಿಂದ ಪರಿಶುದ್ಧಾಂತಃಕರಣರಾದ ಯೋಗಿಗಳುಮಾತ್ರವೇ ಸಮಸ್ಯ ಜಗತ್ತನ್ನೂ ನಿನ್ನ ರೂಪದಿಂದಲೆ ತಿಳಿದು, ನಿನ್ನಂತೆ ಅದನ್ನೂ ಉಪಾಸ್ಯಕೋಟೆಯಲ್ಲಿಯೇ ಸೇರಿಸಿರುವರು. ಬಂಗಾರದಿಂದ ಬೇರೆಬೇರೆ ಆಕೃತಿಯುಳ್ಳ ಆಭರಣಗಳನ್ನು ಮಾಡಿಟ್ಟರೂ, ಆ ವಿಕಾರಗಳೆಲ್ಲವೂ, ಆ ಬಂಗಾರಕ್ಕಿಂತಲೂ ಬೇರೆಸಿಸದೆ, ಬಂಗಾರವೆಂದೇ ವ್ಯವಹರಿಸಲ್ಪಡು ವಂತೆ, ನಿನ್ನ ವಿಕಾರರೂಪವಾದ ಈ ಜಗತ್ತೂಕಡ ಬ್ರಹ್ಮಾತ್ಮಕವೆನಿಸಿರ ಬೇಕೇಹೊರತು, ಅದನ್ನು ಹೇಯವೆಂದೆಣಿಸುವುದಕ್ಕಿಲ್ಲ. ಆದುದರಿಂದ ನಿನ್ನ ವಿಕಾರರೂಪವಾದ ಈ ಜಗತ್ತೆಲ್ಲವೂ, ಪರಮಾತ್ಮ ಶಬ್ದವಾಚ್ಯವಾಗಿ ಉಪಾಸ್ಯವಸ್ತುವೆಂದೇ ನಿಶ್ಚಿತವಾಗಿರುವುದು. ಆದುದರಿಂದ ಯಾರು ನಿನ್ನನ್ನು ಅಖಿಲಾಂತರಾತ್ಮನೆಂದು ಉಪಾಸಿಸುವರೋ, ಅಂತವರೇ ಮೃತ್ಯು ವನ್ನೂ ಲಕ್ಷ್ಯಮಾಡದೆ,ಅದರ ತಲೆಯನ್ನು ಕಾಲಿಂದ ಮೆಟ್ಟಿ ನಿಲ್ಲತಕ್ಕವರು. ಹಾಗೆ ನಿನ್ನನ್ನು ಸಾತ್ಯಕನೆಂದು ತಿಳಿಯಲಾರದವರಿಗೆ, ಸೀನು, ಪಶುಗಳಿಗೆ ಮೂಗುದಾರವನ್ನು ಬಿಗಿದು ದಾರಿಗೆ ತರುವಂತೆ, ಶಾಸ್ತರೂಪವಾದ ಉಪ ದೇಶದಿಂದ ಬೋಧಿಸಿ, ಅವರನ್ನು ಸನ್ಮಾರ್ಗಕ್ಕೆ ತರುವೆ!ಆದರೆ ಆ ಶಾಸ್ತ್ರಾಥಿ ಕಾರವಿಲ್ಲದವರಿಗೂ ಅಬ್ಬರಿಗೂ ಗತಿಯೇನು? ” ಎಂದರೆ, ಅಂತವರು ನಿನ್ನ ಭಕ್ತರ ಸಹವಾಸದಿಂದಲೂ, ಸೇವೆಯಿಂದಲೂ ಉತ್ತಮಗತಿಯನ್ನು ಹೊಂ ದುವುದಕ್ಕೂ ಅವಕಾಶವನ್ನು ಕೊಟ್ಟಿರುವೆ ! ಶಾಸ್ತ್ರಾಧಿಕಾರವೂ ಇಲ್ಲದೆ, ಸಜ್ಜನಸೇವೆಯನ್ನೂ ಮಾಡದವರಿಗೆ, ಅಧೋಗತಿಯೇ ನಿಜವು, ದೇವಾ ! ನೀನು ಸಂಕಲ್ಪ ಮಾತ್ರದಿಂದಲೇ ಜಗತ್ತಿನ ಸೃಷ್ಟಿಸ್ಥಿತಿಲಯಗಳನ್ನು ನಿಲ್ಲ