ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೮೭.] ದಶಮಸ್ಕಂಧವು. ೨೩೩೧ ಹಿಸತಕ್ಕ ಜ್ಞಾನಬಲವುಳ್ಳವನಾದುದರಿಂದ ಸತ್ವಜ್ಞನು, ಕರವಶ್ಯನಲ್ಲದ ಸ್ವತಂತ್ರನು. ಕರ್ತೃ, ಕರ್ಮ, ಆಧಿಕರಣ, ಮೊದಲಾದ ಕಾರಕಶಕ್ತಿಗಳೆಲ್ಲಕ್ಕೂ ನೀನೇ ಆಧಾರನು, ಪ್ರಕೃತಿಗೆ ವಶರಾದ, ವಾಯು, ಅಗ್ನಿ, ಸೂರ್, ಇಂದ್ರ, ಮೊದಲಾದ ದೇವತೆಗಳೂ, ಪ್ರಜಾಧಿಪತಿಗಳೂ, ಮತ್ತು ಬೇರೆ ಯಾರು ಯಾರು ಯಾವಯಾವ ಅಧಿಕಾರಗಳಲ್ಲಿರುವರೋ, ಅವರೆಲ್ಲರೂ ನಿನಗೆ ಭಯ ಪಟ್ಟು, ಪ್ರಜೆಗಳು ತಮ್ಮ ಚಕ್ರವರ್ತಿಯಲ್ಲಿ ಹೇಗೋಹಾಗೆ,ನಿನ್ನ ಸೇವಾರೂ ಪವಾಗಿಯೇ ತಮ್ಮ ತಮ್ಮ ಕಾವ್ಯಗಳನ್ನು ಸಿಲ್ವಹಿಸುತ್ತಿರುವರು. ಅವರೂ ನಿನ್ನ ಅನುಗ್ರಹದಿಂದ ಲಭಿಸಿದ ಭೋಗಗಳನ್ನೇ ಅನುಭವಿಸುತ್ತಿರುವರು. ಸ್ಥಾವರಜಂಗಮರೂಪವಾದ ಸಮಸ್ತ ಜಗತ್ತೂ ಪ್ರಕೃತಿಬದ್ಧವಾಗಿ, ದುಃಖಾಶ್ರಯವಾದ ಶರೀರಗಳಿಂದ ಕೂಡಿರುವುದೇಹೊರತು, ಯಾವ ಪ್ರಾ ಣಿಯ ಆ ಪ್ರಕೃತಿಸಂಬಂಧವನ್ನು ತಪ್ಪಿಸಿಕೊಳ್ಳಲಾರದು, ಕೆಲವರು ಆ ಪ್ರಕೃತಿಸಂಬಂಧವನ್ನು ತಪ್ಪಿಸಿಕೊಂಡವರಾಗಿದ್ದರೂ,ಅದೂ ನಿನ್ನ ಕಟಾಕ್ಷ ಒಂದಲ್ಲದೆ ಬೇರೆ ಉಪಾಯದಿಂದಲ್ಲ ! ದೋಷವಿಮುಕ್ತನಾದ ಓ ಸ್ವಾಮೀ ! ಪರಮಕಾರುಣಿಕಾ ! ನಿನಗೆ ತನ್ನ ವನೆಂಬ ಅಭಿಮಾನಕ್ಕೆ ಪಾತ್ರನಾದವ ನೊಬ್ಬನಿಲ್ಲ ! ಇತರರೆಂದು ಅಲಕ್ಷ್ಯಕ್ಕೀಡಾದವನೂ ಇಲ್ಲ: ಆಕಾಶದಂತೆ ಎಲ್ಲಾ ವಸ್ತುಗಳಲ್ಲಿಯ.೧ ವ್ಯಾಪಿಸಿದ್ದು, ಆ ವ್ಯಾಪ್ಯಗತದೋಷಗಳಿಗೆ ಸ್ವಲ್ಪ ಮಾತ್ರವೂ ಈಡಾಗದೆ ಬೆಳಗುತ್ತಿರುವೆ. ನಿನಗೆ ಸರಿಸಮಾನವಾದುದು ಬೇರೊಂದು! ಹೀಗೆ ಚರಾಚರಾತ್ಮಕಗಳಾದ ಸ್ಕೂಲಸೂಕ್ಷ್ಮಶರೀರಗಳ ಲೆಲ್ಲಾ ಪ್ರವೇಶಿಸತಕ್ಕ ಈ ಆಣಸ್ವರೂಪವು ಜೀವಾತ್ಮಗಳಿಗೂ ಸಹಜ ವಾಗಿದ್ದರೂ, ಅವುಗಳಿಗೆ ಎಲ್ಲೆಲ್ಲಿಯೂ ವ್ಯಾಪಿಸತಕ್ಕ ವಿಭುತ್ವವಿಲ್ಲ! ಆ ಜೀ ವಾತ್ಮಗಳು ಆಸಂಖ್ಯಾತವಾಗಿಯೂ, ನಿತ್ಯವಾಗಿಯೂ ಇದ್ದರೂ ಅವುಗಳಿಗೆ ಸತ್ವಗತತ್ವವಿಲ್ಲ ! ಹಾಗಿಲ್ಲದೆ ಜೀವಗಳೂ ಸತ್ವಗತಗಳಾಗಿದ್ದ ಪಕ್ಷದಲ್ಲಿ, ಒಂದು ಜೀವವನ್ನು ಮತ್ತೊಂದು ಜೀವವಾಗಲಿ, ಪರಮಾತ್ಮನಾಗಲಿ ನಿಯ ವಿಸುವುದಕ್ಕೆ ಅವಕಾಶವಿಲ್ಲದೆ, ಎಲ್ಲವೂ ಸಮಸ್ಥಿತಿಯಲ್ಲಿಯೇ ಇರುತಿದು