ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9181 ಅಧ್ಯಾ, ೮೭.) ದಶಮಸ್ಕಂಧವು. ಇಲ್ಲ ! ನಿನ್ನ ಕೋಪಸೂಚಕವಾದ ಭ್ರುಕುಟಿಗಳಂತೆ, ಶೀತೋಷ್ಟವರ್ಷಗ ಳಿಂದ ಕೂಡಿದ ಸಂವತ್ಸರರೂಪವಾದ ಕಾಲವು, ಅವರಿಗೆ ಸಂಸಾರಭಯವ ನ್ನುಂಟುಮಾಡದೆ ಬಿಡದು. ಮನಸ್ಸೆಂಬುದು ದುಷ್ಟ ಶ್ವದಂತೆ ಯಥೇಚ್ಛವಾ ಗಿ ಸಿಕ್ಕಿದಕಡೆಗೆ ಓಡುತ್ತಿರುವುದು ಮತ್ತು ಬಹಳ ಚಂಚಲ ಸ್ವಭಾವವುಳ್ಳುದು. ಪ್ರಾಣಗಳನ್ನೂ, ಇಂದ್ರಿಯಗಳನ್ನೂ ಜಯಿಸಲಾರದವರಿಗೆ, ಆದನ್ನು ನ್ಯಾ ಧೀನದಲ್ಲಿಡುವುದೂ ಸಾಧ್ಯವಲ್ಲ ! ಈ ಮನಸ್ಸೆಂಬ ದುಷ್ಮಾಸ್ವವನ್ನು ನಿಯ ಮಿಸಿಡುವುದಕ್ಕೆ ಗುರುಪರಿಚಯೇ ಉತ್ತಮವಾದ ಉಪಾಯವು, ಅದನ್ನು ಬಿಟ್ಟು ಬೇರೆ ಉಪಾಯದಿಂದ ಅದನ್ನು ನಿಗ್ರಹಿಸುವುದಕ್ಕೆ ಕಷ್ಟಪಡತಕ್ಕ ವರು, ಅನೇಕವ್ಯಸನಪರಂಪರೆಗಳಿಗೆ ಗುರಿಯಾಗುವರಲ್ಲದೆ, ನಾವಿಕರ ಸಹಾಯವಿಲ್ಲದೆ ಹಡಗನ್ನು ನಡೆಸಿಕೊಂಡು ಹೋಗುವ ಸಮುದ್ರವ್ಯಾಪಾ ರಿಗಳಂತೆ, ಸಂಸಾರವೆಂಬ ಮಹಾಸಮುದ್ರದಲ್ಲಿ ಮುಳುಗಿ ದುಃಖಕ್ಕೀಡಾಗು ವರು. ಸನಿದಸುಖಮಯನಾಗಿಯ, ಸಜೀವಪ್ರಿಯತಮನಾ ಗಿಯೂ ಇರುವ ನಿನ್ನನ್ನು ಯಾವನು ದೃಢವಿಶ್ವಾಸಮಂದ ಭಜಿಸುವನೋ ಅಂತಹಪುರುಷಸಿಗೆ ಸ್ವಜನರಿಂದಾಗಲಿ, ಹೆಂಡಿರುಮಕ್ಕಳಿಂದಾಗಲಿ, ಮನೆ ಮಠಗಳಿ೦ತಾಗಲಿ, ಹಣಕಾಸುಗಳಿಂದಾಗಲಿ, ದೇಶಕೋಶವಾಹನಾದಿಗಳಿಂ ಬಾಗಲಿ,ಕೊನೆಗೆ ತನ್ನ ದೇಹಬಂಗಲಿ,ಪಾಣಗಳಿಂದಾಗಲಿ ಆಗಬೇಕಾದು ದೇನು ? ಅವು ಅವನಿಗೆ ಸ್ವಲ್ಪ ಮಾತ್ರವೂ ಸುಖಸಾಧನಗಳು ! ಹೀಗೆ ಸೀನೇ ನಿರತಿಶಯಪುರುಷಾ‌ಭೂತನೆಂಬುದನ್ನು ತಿಳಿಯಲಾರದೆ, ಮಿಥುನಸುಖನೇ ಪುರುಷಾಧ್ಯವೆಂದು ತಿಳಿದು ಅದರಲ್ಲಿಯೇ ವರ್ತಿಸತಕ್ಕವರು, ಪ್ರಕೃತಿಯೆಂಬ ತೆರೆಯ ಮೇಲೆ ಕವಿಯುವುದರಿಂದ, ತಮ್ಮ ಆತ್ಮಕ್ಕೆ ಹಜವಾದ ಜ್ಞಾನೈ ಶ್ವರಾದಿಸ್ವರೂಪವನ್ನೂ ಕಾಣದೆ ಹೋಗುವರು, ಅಂತವರಿಗೆ ಈ ಲೋಕ ದಲ್ಲಿ ಅರ್ಥ ಕಾಮಗಳಿಂದುಂಟಾದ ಸುಖವು ಎಷ್ಟು ಮಾತ್ರವಾಗಿರುವುದು? ಅದೊಂದು ಸುಖವೇ ಅಲ್ಲ. ಓ : ದೇವಾ ! ನಿತ್ಯಸುಖಸ್ವರೂಪನಾದ ನಿನ್ನಲ್ಲಿ ಒಂದಾವರ್ತಿಯಾದರೂ ಮನಸ್ಸಿಟ್ಟವರಿಗೆ, ಸ್ಯಾತ್ಮ ಪರಮಾತ್ಮಸ್ವರೂಪವು ತಿಳಿದು ಹೋಗುವುದರಿಂದ,ದೇಹಾತ್ಮಾಭಿಮಾನರೂಪವಾದ ಮದವು ಅವರ ಮನಸ್ಸನ್ನು ಬಿಟ್ಟು ಹೋಗುವುದು, ಅವರ ಮನಸ್ಸಿನಲ್ಲಿ ಯಾವಾಗಲೂ