ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೭೪ ಶ್ರೀಮದ್ಭಾಗವತವು | [ಅಧ್ಯಾ, ೮೭ . ನಿನ್ನ ಪಾದಾರವಿಂದಗಳೇ ಬೆಳಗುತ್ತಿರುವುವು, ಅಂತವರ ಪಾದತೀರ್ಥವೇ ಲೋಕಪಾವನವು, ಮನುಷ್ಯನ ಜ್ಞಾನವೈರಾಗ್ಯಾದಿಗಳನ್ನು ಕೆಡಿಸತಕ್ಕ ಗೃಹಾದಿಗಳಲ್ಲಿ ಅಂತವರಿಗೆ ಅಭಿಲಾಷೆಯೇ ಹುಟ್ಟದು, ಅವರು ದಾಂಪತ್ಯ ಸುಖದಲ್ಲಿ ಸಂಚರಿಸುವುದನ್ನು ಬಿಟ್ಟು, ಭೂಮಿಯಲ್ಲಿರುವ ಗಂಗಾದಿ ಪುಣ್ಯ ತೀರ್ಥಗಳನ್ನೂ, ಪುಣ್ಯಕ್ಷೇತ್ರಗಳನ್ನೂ ತಮ್ಮ ಸಂಬಂಧದಿಂದ ಮತ್ತಷ್ಟು ವಿಶೇಷವಾಗಿ ಪಾವನಮಾಡುವುದಕ್ಕಾಗಿ ಭೂಸಂಚಾರಮಾಡುತ್ತಿರುವರು. (ಸತ್ತೆನಿಸಿಕೊಂಡ (ಪರಮಾರ್ಥಭೂತವಾದ) ಪರಬ್ರಹ್ಮದಿಂದ ಹುಟ್ಟಿದ ಈ ಜಗತ್ತೂ ಸತ್ತೆನಿಸಿಯೇ ಇರಬೇಕಲ್ಲವೆ ? ಆದುದರಿಂದ ಮ ಇು, ಬಂಗಾರ, ಮುಂತಾದುವುಗಳಿಂದ ನಿರ್ಮಿತವಾದ ವಸ್ತುಗಳೂ, ಅವು ಗಳ ಸ್ವರೂಪವೇ ಆಗಿರುವಂತೆ,ಬ್ರಹ್ಮದಿಂದ ಹುಚ್ಚೆದ ಜಗತ್ತೂ ಆ ಬ್ರಹ್ಮ ನಂತೆ ಸತ್ತೆನಿಸಬೇಕೆಂಬುದು ಯುಕ್ತವಲ್ಲ : ಚೇತನನಾದ ಪುರುಷರಿಂದ ಹುಟ್ಟಿದ ಕೂದಲು, ಹಲ್ಲು, ಉಗುರು, ಮುಂತಾದುವು ಅಚೇತನಗಳಾ ಗಿಯೂ, ಆಚೇತನವಾದ ಸಗಣಿ ಮುಂತಾದುವುಗಳಲ್ಲಿ ಹುಟ್ಟಿದ ಚೇಳು ಮುಂತಾದುವುಗಳು ಚೇತನಗಳಾಗಿಯೂ ಇರುವುದನ್ನು ನೋಡಿದರೆ, ಕಾರ ಣದಲ್ಲಿರುವ ಲಕ್ಷಣಗಳೇ ಕಾರದಲ್ಲಿರಬೇಕೆಂಬ ನಿಯಮವಿಲ್ಲ. ಇದರಂತೆಯೇ ಸ್ವಪ್ರ ವೆಂಬುದು ನಿಜವಾಗಿದ್ದರೂ, ಅದರಲ್ಲಿ ಕಾಣುವ ಗಜತುರಗಾದಿ ವಸ್ತುಗಳು ನಿಜವಲ್ಲ. ಆದುದರಿಂದ ಬ್ರಹ್ಮವು ಸತ್ಯಸಿಸಿದರೂ, ಅದರಿಂದುಂ ಟಾಗತಕ್ಕೆ ಕಾವ್ಯರೂಪವಾದ ಪ್ರಪಂಚವೂ ಸತ್ಯವಾಗಿರಬೇಕೆಂಬ ನಿಯ ಮವು ಯುಕ್ತಿಯಿಂದ ಪರಿಹರಿಸಲ್ಪಡುವುದು. ಆದುದರಿಂದ ಕಾಗ್ಯರೂಪ ವಾದ ಜಗತ್ತು ಮಿಥೈಯೇ (ಸುಳ್ಳ) ಆಗಿರಬೇಕೆಂದು ಕೆಲವರು ಹೇಳು ವರು, ಇದು ಸಮಂಜಸವಲ್ಲ! ಕಾ ರಣದಂತೆ ಕಾರವೆಂಬ ನಿಯಮಕ್ಕೆ ಎಲ್ಲಿಯೂ ಲೋಪವಿರದು. ಹಿಂದೆ ಹೇಳಿದ ಕೇಶಪುರುಷಾಟ ನಿದರ್ಶ ನಗಳಿಂದಲೇ 'ಈ ಅಭಿಪ್ರಾಯವನ್ನು ಸ್ಥಿರಪಡಿಸಬಹುದು. ಏಕೆಂದರೆ, ಪುರುಷನು ಚೇತನನಾದರೂ, ಆ ಪುರುಷದೇಹವು ಅಚೇತನವಾದುದರಿಂದ ಆಚೇತನವಾದ ದೇಹದಿಂದ ಹುಟ್ಟಿದ ಕೂದಲೂ ಅಚೇತನವೇ ! ಹಾಗೆಯೇ ಕಾರವೆಂಬುದೂ ಎಲ್ಲಿಯೂ ಸುಳ್ಳಾಗದು, ಹಿಂದೆ ಹೇಳಿದ ಸ್ವಪ್ನ ದೃಷ್ಟಾಂ