ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9&起外 ಅಧ್ಯಾ, ಆ೭.] ದಶಮಸ್ಕಂಧವು. ತದಿಂದಲೇ ಇದನ್ನೂ ನಿರ್ಧರಿಸಬಹುದು. ಸ್ವಪ್ಪ ವು ನಿಜವಾಗಿರುವಾಗ, ಆ ಸ್ವಪ್ಪ ದಲ್ಲಿ ಕಾಣುವ ಪದಾರ್ಥಗಳೂ ಈಶ್ವರಸೃಷ್ಟಿಯಾದುದರಿಂದ, ಅವನ್ನೂ ಸುಳ್ಳೆಂದು ಹೇಳುವುದಕ್ಕಿಲ್ಲ! ಕಾರ್ ಕಾರಣಗಳೆಂಬ ಎರಡವಸ್ಥೆ ಯುಳ್ಳವುಗಳಲ್ಲಿಯೂ, ಆನಿಯಮಕ್ಕೆ ಭಂಗವುಂಟಾಗಲಾರದು, ಹೇಗೆಂದರೆ, ಮಣ್ಣು,ಬಂಗಾರ ಮುಂತಾದುವು ಕಾರಣಾವಸ್ಥೆಯಿಂದಲೂ, ಕಾಲ್ಯಾವಸ್ಥೆ ಯಿಂದಲೂ ಕಾಣುವುವು, ಅದರಂತೆಯೇ ಸತ್ಯಸಿಸಿದ ಬ್ರಹ್ಮವು ಜಗತ್ತೆಂಬ ಕಾಲ್ಯಾವಸ್ಥೆಯಲ್ಲಿಯೂ, ಸತ್ತೆನಿಸಿಯೇ ಇರಬೇಕಲ್ಲದೆ, ಈ ರೂಪಾಂತರದಲ್ಲಿ ಆದು ಮಿಥೈಯೆನಿಸಿಕೊಳ್ಳಲಾರದು, ಆದರೆ ಮೊದಲೇ ಸತ್ತೆನಿಸಿದ ವಸ್ತು ವಿಗೆ ಬೇರೊಂದು ವಿಧದಿಂದ ಉತ್ಪತಿಯು ವ್ಯರ್ಥವಲ್ಲವೆ?” ಎಂದರೆ,ಅದೂ ವ್ಯರ್ಥವಲ್ಲ!ಮಣ್ಣಿಗೆ, ಗಡಿಗೆ,ಹರವಿ, ಶ್ರಾವೆ,ಮುಂತಾದ ಅವಸ್ಥಾಭೇದಗಳು ಕೇವಲವ್ಯವಹಾರಕ್ಕಾಗಿ ಉಪಯೋಗಿಸಲ್ಪಡುವುದರಿಂದ, ಈ ಅವಸ್ಥಾಂತರ ಗಳೂ ಸಫಲವೇಹೊರತು ವ್ಯರ್ಥವಲ್ಲ. ಅದು ಹೋಗಲಿ!ಕಾರವು ಸತ್ಯಂ ಬುದು ಯುಕ್ತಿಯಿಂದ ತಪ್ಪಿ ಹೋಗದಿದ್ದರೂ « ನೇಹ ” ನಾನಾ” ಇತ್ಯಾದಿಶ್ರುತಿವಾಕ್ಯವೇ ಕಾರರೂಪವಾದ ವಸ್ತುವನ್ನು ವಿಧ್ಯೆಯೆಂದು ಹೇಳುತ್ತಿರುವುವಲ್ಲವೆ ? ಎಂದರೆ, ಆ ಶ್ರುತಿಗಳಿಗೂಕೂಡ, ಅನಾದಿ ಕರ್ಮವಾಸನೆಯಿಂದ ಬುದ್ದಿ ಮೋಹಗೊಂಡವರಿಗೆ, ಬ್ರಹ್ಮಾತ್ಮಕವಲ್ಲದ ಬೇರೆ ಸ್ವತಂತ್ರವಸ್ತುವೊಂದೂ ಇಲ್ಲವೆಂದೂ, ಬ್ರಹ್ಮ ಸ್ವರೂಪವಾದ ಪ್ರಪಂಚದಲ್ಲಿ ದೇವಮನುಷ್ಯಾದಿಭೇದಗಳಿಲ್ಲವೆಂದೂ ಬೋಧಿಸುವುದೇ ತಾತ್ಪಯ್ಯವು ಈ ವಾಕ್ಯವೇ ಆಂಧಪರಂಪರೆಯಿಂದ ಕುಬುದ್ಧಿಯುಳ್ಳವರಿಗೆ ಮಿಥ್ಯಾತ್ವವನ್ನು ಸೂಚಿಸುವಂತೆ ಭ್ರಮೆಗೊಳಿಸುವುದು, ಆದರೆ ಈ ಪ್ರ ಪಂಚವು ಸೃಷ್ಟಿಗೆ ಮೊದಲೂ ಇದ್ದುದಲ್ಲ ! ಪ್ರಳಯವಾದಮೇಲೆ ನಿಲ್ಲ ತಕ್ಕುದೂ ಅಲ್ಲ. ಈ ಆದ್ಯಂತಕಾಲಗಳಲ್ಲಿ ಸ್ಥಿರವಾಗಿರತಕ್ಕುದು ಬ್ರಹ್ಮ ವೊಂದೇ ಆದುದರಿಂದ, ಕೇವಲವಾದ ಆ ಬ್ರಹ್ಮನಲ್ಲಿ ಈನಡುವೆ ಕಣ ತಕ್ಕ ಪ್ರಪಂಚವು ವಿಧ್ಯೆಯಾಗಿಯೇ ಇರಬೇಕೆಂದು ನಿಶ್ಚಯಿಸಬಹುದಲ್ಲವೆ? ಇದನ್ನನುಸರಿಸಿಯೇ ಶ್ರುತಿವಾಕ್ಯಗಳಲ್ಲಿಯೂಕೂಡ, ಬ್ರಹ್ಮನಿಂದುಂ ಟಾದ ಈ ಪ್ರಪಂಚವೆಲ್ಲವೂ, ಮಣ್ಣು, ಬಂಗಾರ ಮೊದಲಾದ ದ್ರವ್ಯ 10 B.