ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೬೭ ಅಧ್ಯಾ, ೮೭.) ದಶಮಸ್ಕಂಧವು. ವಾಗಲೂ ಸ್ವಯಂಪ್ರಕಾಶನಾಗಿ ಬೆಳಗುತ್ತ ಸಮಸ್ತಲೋಕಗಳಿಂದಲೂ ಪೂಜಿಸಲ್ಪಡುವೆ ? ಓ ! ದೇವಾ ! ಮನಸ್ಸನ್ನು ಸ್ಥಿರವಾಗಿ ನಿಲ್ಲಿಸಬಲ್ಲ ಮುನಿ ಗಳಾಗಿದ್ದರೂ, ತಮ್ಮ ಹೃದಯದಲ್ಲಿ ರೂಢಮೂಲವಾಗಿರುವ ಕಾಮಮ ಲಕವಾದ ಕರ್ಮವಾಸನೆಯನ್ನು ಕಿತ್ತುಹಾಕದಿದ್ದ ಪಕ್ಷದಲ್ಲಿ, ನೀವು ಅವರ ಹೃದಯದಲ್ಲಿಯೇ ಇರತಕ್ಕವನಾಗಿದ್ದರೂ, ತನ್ನ ಕಂಠದಲ್ಲಿರುವ ಪದಕ ವನ್ನೇ ಮರೆತು ಕಳವಳಿಸುವ ಮನುಷ್ಯನ ಭಾಗಕ್ಕೆ ಅದು ಇಲ್ಲದಹಾಗೆಯೇ ತೋರುವಂತೆ, ಅವರ ಭಾಗಕ್ಕೆ ನೀನೂ ಇಲ್ಲದಂತೆಯೇ ಆಗುವೆ.ಓ ಭಗವಂತಾ! ಕೇವಲ ಪ್ರಾಣೇಂದ್ರಿಯತೃಪ್ತಿಪರಾಯಣರಾದ ಆ ಯೋಗಿಗಳಿಗೆ, ಇಹ ದಲ್ಲಿಯಾಗಲಿ,ಪರದಲ್ಲಿಯಾಗಲಿ ಮೃತ್ಯುಭಯವು ಎಂದೂ ತಪ್ಪದು, ಅವರು ತಮ್ಮ ಕರ್ಮಬಲದಿಂದ ಇಹಲೋಕದಲ್ಲಿ ಎಷ್ಟೇ ಪುಷ್ಕಲವಾದ ಭೋಗ ಗಳನ್ನನುಭವಿಸುತ್ತಿದ್ದರೂ, ಮರಣಭಯವು ಅವರನ್ನು ಬಾಧಿಸುತ್ತಲೇ ಇರುವುದು, ಪರಲೋಕದಲ್ಲಿಯೋ ಯಮರೂಪನಾದ ನಿನ್ನಿಂದ ತಮ್ಮ ಪಾಪಗಳಿಗಾಗಿ ಅವರು ಶಿಕ್ಷೆಯನ್ನೂ ಹೊಂದುವರು. ನಿನ್ನ ನಿಜಸ್ಥಿತಿಯನ್ನು ತಿಳಿದ ಜ್ಞಾನಿಗಳು, ಸಂಸಾರದಲ್ಲಿ ತನ್ನ ಪುಣ್ಯಪಾಪಕರ್ಮಗಳಿಂದುಂಟಾದ ಸುಖದುಃಖಗಳಿಗಾಗಲಿ, ಇತರರ ನಿಂದಾಸ್ತುತಿಗಳಿಗಾಗಲಿ, ಲಕ್ಷಮಾಡ ಲಾರರು, ಅಂತವರು ನಿನ್ನನ್ನೇ ಮುಕ್ತಿಕಾರಣನೆಂದು ತಿಳಿದಿರುವುದ ರಿಂದ, ಈ ಲೋಕದಲ್ಲಿ ನಿನ್ನ ಭಕ್ತರ ಸಹವಾಸದಲ್ಲಿದ್ದು, ನಿನ್ನ ಕಥಾ ಮೃತಗಳನ್ನು ಕಿವಿಯಿಂದ ಪಾನಮಾಡುತ್ತ, ಅನವರತವೂ ಅದನ್ನೇ ಮನಸ್ಸಿನಲ್ಲಿ ಧಾರಣಮಾಡುತ್ತ, ಆ ಅಮೃತಪಾನದಿಂದ ಮತ್ತೇರಿದಂ ತಿರುವರು. ಅದರಿಂದಲೇ ಅವರಿಗೆ ಬೇರೆಯವರ ನಿಂದಾಸ್ತುತಿಗಳಾಗಲಿ, ತಮ್ಮ ಮೇಲೆ ಬೀಳುವ ಸುಖದುಃಖಗಳಾಗಲಿ ಯಾವುದೂ ತಿಳಿಯಲಾರದು. ಸ್ವರ್ಗಾದಿಲೋಕಪಾಲಕರಾದ ಮಹೇಂದ್ರಬ್ರಹ್ಮಾದಿಗಳೂ, ನಿನ್ನ ಸ್ವರೂ ಪಸ್ವಭಾವಗಳನ್ನು ಪೂರ್ಣವಾಗಿ ತಿಳಿಯಲಾರದಿರುವಾಗ, ಈ ಸಾಮಾನ್ಯ ಮನುಷ್ಯರ ಮಾತೇನು?ಅಷ್ಟೇಕೆ?*ಕೊನೆಗೆ ನೀನೂ ಅದನ್ನು ತಿಳಿಯಲಾರೆ.

  • ಇದರಿಂದ ಭಗವಂತನ ಸರಜ್ಞತ್ಯಕ್ಕೆ ಲೋಪವೆಂದು ಗ್ರಹಿಸಬಾರದು. ವಾಸ್ತವಸ್ಥಿತಿಯನ್ನು ತಿಳಿಯುವುದೇ ಸರೈಜ್ಞತ್ವದ ಲಕ್ಷಣವು ಅಪರಿಚ್ಛಿನ್ನವಾದು ದನ್ನು ಪರಿಚ್ಛಿನ್ನವೆಂದು ತಿಳಿದುಕೊಳ್ಳುವುದೇ ಅಜ್ಞತೆಯೆನಿಸುವುದೆಂದು ಭಾವವು'