ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೭೮ ಶ್ರೀಮದ್ಭಾಗವತವು - [ಅಧ್ಯಾ, ೮೬, ಏಕೆಂದರೆ ಅದು ಅನಂತವಾದುದು, ನಿನ್ನ ಒಂದೊಂದು ರೋಪಕಪದಲ್ಲಿ ಯೂ ಆಕಾಶದಲ್ಲಿ ರೇಣುಗಳು ಹೇಗೋಹಾಗೆ ಸಪ್ಪಾವರಣಗಳೊಡಗೂಡಿ ದ ಕೋಟಿಕೋಟೆಬ್ರಹ್ಮಾಂಡಗಳು ಅಡಗಿರುವುವು. ನೀನು ಇಂತಹ ಅಪಾ ರಮಹಿಮೆಯುಳ್ಳವನಾದುದರಿಂದಲೇ ಶ್ರುತಿಗಳು ತಮ್ಮ ಶಬ್ದ ವೃತ್ತಿಯಿಂದ ನಿನ್ನ ನ್ನು ಪ್ರಕೃತಿಪುರುಷರಿಗಿಂತಲೂ ವಿಲಕ್ಷಣನೆಂದು ಬೋಧಿಸುತ್ತಿರುವುವು. ಹೀಗೆ ನಿನ್ನನ್ನು ಚೇತನಾಚೇತನಗಳಿಗೆ ಸಜಾತೀಯನೆಂಬುದನ್ನು ಖಂ ಡಿಸಿ, ಅವಕ್ಕಿಂತಲೂ ನಿನ್ನನ್ನು ವಿಲಕ್ಷಣವೆಂಬುದನ್ನು ಬೋಧಿಸುವುದರಲ್ಲಿ ಮಾತ್ರವೇ ಅವು ಕೃತಾರ್ಥಗಳಾಗುವುವು, ಅದಕ್ಕಿಂತಲೂ ಹೆಚ್ಚಾಗಿ ನಿನ್ನ ಸ್ಪ. ರೂಪಸ್ವಭಾವಗಳನ್ನು ಬೋಧಿಸುವುದಕ್ಕೆ ಅವುಗಳಿಗೂ ಸಾಧ್ಯವಲ್ಲ.” ಎಂದು ಸ್ತುತಿಸಿದುವು. ಹೀಗೆ ಶ್ರುತಿಗಳು ಭಗವಂತನನ್ನು ಸ್ತುತಿಸಿದುದಾಗಿ ಸನಂದನನು ಹೇಳಿದ ಆತ್ಮತತ್ವವನ್ನು, ಬ್ರಹ್ಮಪುತ್ರರಾದ ಮರಿಚ್ಯಾದಿಗಳೆಲ್ಲರೂ ಕೇಳಿ, ಪರಮಾತ್ಮನ ನಿಜಸ್ಥಿತಿಯನ್ನು ತಿಳಿದು ಕೃತಾಧ್ಯರಾಗಿ, ಆ ಸನಂದನನನ್ನು ವಿಶೇಷವಾಗಿ ಪೂಜಿಸಿದರು. ಓ ಪರೀಕ್ಷಿದ್ರಾಜಾ !* ಇದೇ ವಿಚಾರವನ್ನು ಬದರಿಕಾಶ್ರಮದಲ್ಲಿದ್ದ ಲೋಕಗುರುವಾದ ಶ್ರೀ ನಾರಾಯಣ ಮುನಿಯು, ನಾರದನಿಗೆ ತಿಳಿಸಲು, ನಾರದನು ಆದನ್ನು ಶ್ರದ್ಧೆಯಿಂದ ಗ್ರಹಿಸಿ, ಅದನ್ನೇ ಮನಸ್ಸಿನಲ್ಲಿ ಧಾರಣಮಾಡಿಕೊಂಡು, ತನ್ನ ಸಂಶಯಗ ಬೆಲ್ಲವೂ ನೀಗಿದುದರಿಂದ ಪೂರ್ಣಮನೋರಥನಾಗಿ,«ಸಮಸ್ತ ಭೂತಗಳ ಆಪ ವರ್ಗಸಿದ್ಧಿಗಾಗಿ, ಇಂತಹ ಸಕ್ಕೋತ್ತ ಮಗಳಾದ ವಿದ್ಯೆಗಳನ್ನು ಪದೇಶಿಸಿ ಸಮಸ್ತಲೋಕಕ್ಕೂ ಸುಖವನ್ನುಂಟುಮಾಡತಕ್ಕ ಪುಣ್ಯಶ್ಲೋಕನಾದ ಆ ಭಗವಂತನಿಗೆ ನಮಸ್ಕರಿಸುವೆನು” ಎಂದು ಹೇಳುತ್ತ, ಆದಿಋಷಿಯಾದ ಆ ನಾರಾಯಣಮುನಿಗೂ, ಅವನ ಶಿಷ್ಯರಾದ ಇತರಮಹಾತ್ಮರಿಗೂ ನಮಸ್ಕ ರಿಸಿ, ಅವರ ಅನುಮತಿಯನ್ನು ಪಡೆದು, ಅಲ್ಲಿಂದ ಹಿಂತಿರುಗಿ,ನನ್ನ ತಂದೆಯಾ ದ ವ್ಯಾಸಮುನಿಯ ಆಶ್ರಮಕ್ಕೆ ಬಂದನು, ನನ್ನ ತಂದೆಯು ಅವನನ್ನು ಯ ಥೋಚಿತವಾಗಿ ಪೂಜಿಸಿ, ಆಸನವನ್ನು ಕೊಟ್ಟು ಸತ್ಕರಿಸಿದಮೇಲೆ, ನಾರದನು ತನಗೆ ನಾರಾಯಣಮಹರ್ಷಿಯಿಂದುಪದೇಶಿಸಲ್ಪಟ್ಟ ಆಶ್ರುತಿಗೀತೆಗಳನ್ನೇ