ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೭೯ ಅಧ್ಯಾ, ೮೮.] ದಶಮಸ್ಕಂಧವು. ನನ್ನ ತಂದೆಗೂ ಉಪದೇಶಿಸಿದನು. ಅದನ್ನೇ ನನ್ನ ತಂದೆಯು ನನಗೆ ಉಪದೇ ಶಿಸಿದನು. ಓ ಪರೀಕ್ಷಿದ್ರಾಜಾ ! ನೀನು ನನ್ನನ್ನು ಕೇಳಿದ ಪ್ರಶ್ನೆಗೆ ಉತ್ತರ ವಾಗಿ, ಆ ಶ್ರುತಿವಚನಗಳನ್ನೆ ನಿನಗೆ ಉಪದೇಶಿಸಿದೆನು.ಇದರಿಂದ ನೀನು,ಪರ ಬ್ರಹ್ಮವೆಂಬುದು ನಿರ್ಗುಣವಾಗಿ ಅನಿರ್ಬೇಶ್ಯವಾಗಿದ್ದರೂ, ಆ ಬ್ರಹ್ಮನಲ್ಲಿ ಶ್ರುತಿಗಳು ಮುಖ್ಯವೃತ್ತಿಯಿಂದಲೇ ಪ್ರವರ್ತಿಸುವುವೆಂಬುದನ್ನು ನಿಸ್ಸಂದೇಹ ವಾಗಿ ತಿಳಿಯಬಹುದು, ಯಾವನು ತನ್ನ ಸಂಕಲ್ಪ ಮಾತ್ರದಿಂದಲೇ ಈ ಜಗ ತಿನ ಸೃಷ್ಟಿಸ್ಥಿತಿಲಯಗಳನ್ನು ನಿಲ್ವಹಿಸುವನೋ, ಕಾರಣಾವಸ್ಥೆಯಲ್ಲಿದ್ದ ಪ್ರಕೃತಿಪುರುಷರಿಗೆ ಅಂತರಾಮಿಯಾಗಿ ಪ್ರೇರಿಸತಕ್ಕವನೋ, ಯಾವನು ಮಹತ್ತು ಮೊದಲಾಗಿ ಪೃಥಿವಿಯವರೆಗಿನ ಸಮಷ್ಟಿ ತತ್ವ ಸಮೂಹವನ್ನು ಸೃ ಹಿಸಿ,ಚತುರುಖನೆಂಬ ಜೀವನನ್ನು ತನಗೆ ಶರೀರವನ್ನಾಗಿ ಮಾಡಿಕೊಂಡು, ಅದರಲ್ಲಿ ಪ್ರವೇಶಮಾಡಿ, ಆ ಮೂಲಕವಾಗಿ ದೇವಮನುಷ್ಯಾದಿಶರೀರಗಳನ್ನು ಸೃಷ್ಟಿಸಿ ಪಾಲಿಸಿದನೋ, ಕರವಶ್ಯನಾದ ಜೀವನು, ಯಾವನ ಆಶ್ರಯದಿಂ ದಲೇ, ಗೂಡಿನಲ್ಲಿ ಮಲಗಿದ್ದ ಹಕ್ಕಿಯು ಅದನ್ನು ಬಿಟ್ಟು ಹೋಗು ೦ತೆ, ತನ್ನ ನ್ನು ಮುಚ್ಚಿಕೊಂಡಿರುವ ಪ್ರಕೃತಿ ಸಂಬಂಧವನ್ನು ಬಿಟ್ಟು, ತನಗೆ ಸಹಜ ವಾದ ಆಗುಣಗಳೊಡನೆ ಮುಕ್ತನಾಗುವನೋ, ಯಾವನು ಸಂಸಾರಿ ಗಳಿಗೆ ಮೋಕ್ಷಪ್ರದನಾಗಿ, ಅವರಿಗೆ ಜನನಮರಣರೂಪವಾದ ಭಯವನ್ನು ತಪ್ಪಿಸುವನೋ, ಅಂತಹ ಆರ್ತಾರ್ತಿಕರನಾದ ಶ್ರೀಮನ್ನಾರಾಯಣನನ್ನು ಅನವರತವೂ ಧ್ಯಾನಿಸುವೆನು.” ಎಂದನು. ಇದು ಎಂಬತ್ತೇಳನೆಯ ಅಧ್ಯಾ ಯವು. wwತ್ರಿಮೂರ್ತಿಗಳಲ್ಲಿ ಮೋಕ್ಷಪ್ರದನಾರೆಂಬ ವಿಚಾರವು. ++ - ತಿರುಗಿ ಪರೀಕ್ಷೆ ಪ್ರಾಜನು ಪ್ರಶ್ನೆ ಮಾಡುವನು. « ಓ ಮುನೀಂ ದ್ರಾ ! ದೇವದಾನವಮನುಷ್ಯರಲ್ಲಿ ಯಾರು (ರುಂಡ ಮಾಲೆ, ಸ ರ್ಪಾಭರಣ, ಚಾಂಬರ ಮುಂತಾದ ಅಮಂಗಳವೇಷವುಳ್ಳ) ಶಿವನ ನ್ನು ಭಜಿಸುವರೋ, ಅವರು ಪ್ರಾಯಕವಾಗಿ ಶ್ರೀಮಂತರಾಗಿಯೂ, ಭೋ ಗಿಗಳಾಗಿಯೂ ಇರುವರು. ಸಾಕ್ಷಾಧ್ಯಕ್ಷೆ ಪ್ರತಿಯಾಗಿ, ಸಕಲ ವಿಭೂತಿನಾ