ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೫೧.] ದಶಮಸ್ಕಂಧವು. ೨೧೦೫ ದರ ಆಸೆಯಿಂದ ತಾನು ಅನುಭವಿಸಬಹುದಾದ ಭೋಗಗಳನ್ನೂ ಬಿ ಟ್ಟು, ಉಪವಾಸ, ಅಧಶ್ಚಯ್ಕೆ, ಮೊದಲಾದ ನಿಯಮಗಳಿಂದ ದೇಹದಂಡನ ವನ್ನು ಮಾಡುತ್ತಿರುವನು. ಅದರ ಫಲದಿಂದ ಮುಂದಿನ ಜನ್ಮದಲ್ಲಿ ಸಾಧ್ಯಭಾಮಪದವಿಯನ್ನು ಪಡೆದವನೂಕೂಡ, ಅದಕ್ಕೆ ಮುಂದಿನ ಜನ್ಮದಲ್ಲಿ ಇನ್ನೂ ಉತ್ತಮಪದವಿಯನ್ನು ಪಡೆಯಬೇಕೆಂಬ ಆಸೆಯಿಂದ ತಿರುಗಿ ವತೋಪವಾಸಗಳಿಂದ ಕಷ್ಟಪಡುವನು. ಆದುದರಿಂದ ಮನಸ್ಸಿನಲ್ಲಿ. ಆಸೆಯಿರುವವರೆಗೂ ಕಷ್ಟಪಡುತ್ತಿರುವನೇಹೊರತು, ಲೇಶಮಾತ್ರವಾದ ರೂ ಸುಖವನ್ನನುಭವಿಸಲಾರನು, (ಹಾಗಿದ್ದರೆ ಮನುಷ್ಯನು ಎಂದಿಗೆ ಸುಖಿ ಯಾಗಬೇಕು?” ಎಂದರೆ, ದುಃಖಪ್ರಚುರವಾದ ಈ ಸಂಸಾರವು ಬಿಟ್ಟು ಹೋ ದಾಗಲೇ ಮನುಷ್ಯನು ಸುಖಿಯಾಗುವನು. ಭಾಗವತೋತ್ತಮರಾದ ಸತ್ತು ರುಷರ ಸಹವಾಸದಿಂದಲ್ಲದೆ ಮನುಷ್ಯನಿಗೆ ಸಂಸಾರಸಂಬಂಧವು ಬಿಟ್ಟು ಹೋಗಲಾರದು. ಏಕೆಂದರೆ,ಸಹವಾಸಬಲದಿಂದಲೇ ಮನುಷ್ಯನಿಗೆ ೮ ಕಿಕವಿಷಯಗಳಲ್ಲಿ ಆಸೆಯು ಬಿಟ್ಟು ಹೋಗಿ, ಸಲ್ವೇಶ್ವರನಾದ ನಿನ್ನಲ್ಲಿ ಬುದ್ದಿ ಯು ಪ್ರವರ್ತಿಸುವುದು.ಆದುದರಿಂದ ಓ ಭಗವಂತಾ! ಈಗ ನೀನು ನನ್ನನ್ನು ಅನುಗ್ರಹಿಸುವುದಕ್ಕಾಗಿ ಈ ಗುಹೆಗೆ ಬಂದೆನೆಂದು ಹೇಳಿದೆಯಲ್ಲವೆ ? ಈಗ ಮಾತ್ರವೇನು? ಇದಕ್ಕೆ ಮೊದಲು ದೇವತೆಗಳಿಗೆ ಸಹಾಯಮಾಡಿಸುವನೆವ ದಿಂದ, ನನಗೆ ನೀನು ರಾಜ್ಯಾಧಿಕಾರವೆಂಬ ಪಾಶವನ್ನು ಬಿಡಸಿದಾಗಲೇ, ನೀ ನು ನನ್ನಲ್ಲಿ ಎಷ್ಟೋ ಅನುಗ್ರಹವನ್ನು ತೋರಿಸಿದಂತಾಯಿತು. ಅಖಂಡವಾ ದ ಏಕಚ್ಛಕ್ರಾಧಿಪತ್ಯದಲ್ಲಿರುವ ರಾಜರೂಕೂಡ, ವಿವೇಕಿಗಳಾದಪಕ್ಷದಲ್ಲಿ, ಮೊದಲು ಆ ರಾಜ್ಯಾಧಿಕಾರವೆಂಬ ಪಾಶವನ್ನು ತೊರೆದು, ಒಂಟಿಯಾಗಿ ತ ಪೋವನಕ್ಕೆ ಹೋಗುವುದನ್ನೇ ಅಪೇಕ್ಷಿಸುವರು. ಓ ಪ್ರಭ ! ಅನನ್ಯಪ್ರ ಯೋಜನರಾದ ಮಹರ್ಷಿಗಳೆಲ್ಲರೂ ಅತ್ಯಾಶೆಯಿಂದ ಪ್ರಾರ್ಥಿಸತಕ್ಕ ನಿನ್ನ ಪಾದಸೇವೆಗಿಂತಲೂ ಈಗ ನಾನು ನಿನ್ನಿಂದ ಬೇರೆ ಯಾವ ವರವನ್ನೂ ಅಪೇ ಕ್ಷಿಸತಕ್ಕವನಲ್ಲ. ಲೋಕದಲ್ಲಿ ವಿವೇಕಿಯಾದ ಯಾವನುತಾನೇ ನಿನ್ನನ್ನು ಆ ರಾಧಿಸಿ,ನೀನು ಪ್ರಸನ್ನ ನಾದಮೇಲೆ, ನಿನ್ನ ಪಾದಸೇವೆಯನ್ನು ಬಿಟ್ಟು, ಆತ್ಮ ವನ್ನು ಕೆಡಿಸತಕ್ಕ ಬೇರೆ ಲೌಕಿಕಸುಖವನ್ನ ಪೇಕ್ಷಿಸುವನು? ಆದುದರಿಂದ ಓ