ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೮೨ ಶ್ರೀಮದ್ಭಾಗವತವು [ಅಧ್ಯಾ. ಆ೮, ನೆಗೆ ತಮಗೆ ವರಪ್ರದರಾದ ಆ ದೇವತೆಗಳನ್ನೇ ಲಕ್ಷಮಾಡದೆ, ಗರ್ವದಿಂದ ಬೀಗುವರು.” ಎಂದನು. ಓ : ರಾಜಾ ! ಹೀಗೆ ಕೃಷ್ಣನು ತನ್ನ ಬಾಯಿಂದ ಲೇ ಧರ್ಮರಾಜನಿಗೆ ತಿಳಿಸಿರುವನು. ಇದೇ ವಿಚಾರದಲ್ಲಿ ಮತ್ತೊಂದುವಿಷಯ ವನ್ನು ತಿಳಿಸುವೆನು ಕೇಳು, ಬ್ರಹ್ಮ, ವಿಷ್ಣು, ಶಿವಾದಿದೇವತೆಗಳೆಲ್ಲರೂ, ಇತ ರರನ್ನು ಅನುಗ್ರಹಿಸುವುದಕ್ಕಾಗಲಿ,ನಿಗ್ರಹಿಸುವುದಕ್ಕಾಗಲಿ, ಸಮರರು. ಆ ವರ ನಿಗ್ರಹವಾಗಲಿ ಅನುಗ್ರಹವಾಗಲಿ ವಿಫಲವಾಗುತಕ್ಕುದಲ್ಲ, ಆದರೆ ಈ ತ್ರಿಮೂರ್ತಿಗಳಲ್ಲಿ ಬ್ರಹ್ಮರುದ್ರರಿಬ್ಬರೂ ಬಹುಶೀಘ್ರ ಕಾಲದಲ್ಲಿ ತಮ್ಮ ಕೊಪಪ್ರಸಾದಗಳನ್ನು ತೋರಿಸಿಬಿಡುವರು. ಶ್ರೀವಿಷ್ಣು ವಾದರೋ ಹಾಗಲ್ಲ. ಎಂತವನ್ನೂ ಅನುಗ್ರಹಿಸಬೇಕೆಂಬುದೇ ಅವನ ಸ್ವಭಾವ ವು. ಅವನು ತೋರಿಸತಕ್ಕ ಸಿಗ್ರಹವೂ ಕೊನೆಗೆ ಅನುಗ್ರಹರೂಪವಾಗಿ ಯೇ ಪರಿಣಮಿಸುವುದು. ಇದೇ ವಿಷಯವಾಗಿ ಹಿಂದೆ ರುದ್ರನು ವೃಕಾಸುರನಿಗೆ ವರವನ್ನು ಕೊಟ್ಟು, ಅದರಿಂದ ತಾನು ಅಪಾಯಕ್ಕೆ ಸಿಕ್ಕಿ ಬಿದ ಒಂದಾನೊಂದು ಸಣ್ಣ ಇತಿಹಾಸವುಂಟು, ಶಕುನಿಯ ಮಗನಾದ ವ್ಯಕನೆಂಬ ಅಸುರನೊಬ್ಬನಿದ್ದನು. ಅವನು ಒಮ್ಮೆ ದಾರಿಯಲ್ಲಿ ಸಂಚಾರವಶ ದಿಂದ ಬರುತಿದ್ದ ನಾರದ ಮಹರ್ಷಿಯನ್ನು ಕಂಡು,ತ್ರಿಮೂರ್ತಿಗಳಲ್ಲಿ ಶೀಘ್ರ ಸಂತೋಷಿಗಳಾರೆಂದು ಪ್ರಶ್ನೆ ಮಾಡಿದನು. ಆಗ ನಾರದನು ಅವನನ್ನು ಕುರಿತು. <<ಓ ! ಅಸುರೇಂದಾ ! ನೀನು ರುದ್ರನನ್ನು ಭಜಿಸು: ಅವನು ಶೀಘ್ರದಲ್ಲಿ ಸಂತೋಷಪಡತಕ್ಕವನು, ಅತ್ಯಲ್ಪವಾದ ಗುಣದೋಷಗಳನ್ನು ನೋಡಿದಾಗಲೇ, ತನ್ನ ಸಂತೋಷ ಎನ್ನೂ, ಕೋಪವನ್ನೂ ತೋರಿಸಿಬಿಡು ವನು. ಹಿಂದೆ ೬ ವನು ರಾವಣನ ಮುಖಸ್ತುತಿಗೆ ಮರುಳಾಗಿ, ಅವನಿಗೆ ಕೇಳಿದ ಮರಗಳನ್ನು ಕೊಟ್ಟು, ಕೊನೆಗೆ ಆ ರಾವಣನು ವೀರಮದದಿಂದ ತಾನಿದ್ಯ ಕೈಲಾಸವನ್ನು ಕಿತ್ತೆಸೆಯುವಾಗ, ಎಷ್ಟೋ ಕಷ್ಟಪಟ್ಟನು. ಬಾಣಾಸುರನೆ ಮುಖಸ್ತುತಿಗೆ ಮರುಳಾಗಿ, ಅವನ ಪಟ್ಟಣವನ್ನು ಕಾಯುವ ಕೆಲಸದಲ್ಲಿ ಎಷ್ಟೋ ಸಂಕಟಪಟ್ಟನು. ಆದುದರಿಂದ ನೀನು ಅವನನ್ನು ಭಜಿ ಸಿದರೆ, ಶೀಘ್ರದಲ್ಲಿ ನಿನ್ನ ಕೋರಿಕೆಯನ್ನು ಪಡೆಯಬಹುದು.” ಎಂದನು. ಈ ಮಾತನ್ನು ಕೇಳಿದೊಡನೆ ವೃಕಾಸುರನು, ಕೇದಾರಕ್ಷೇತ್ರಕ್ಕೆ ಹೋಗಿ, ಅಲ್ಲಿ ಅಗ್ನಿ ಮುಖವಾಗಿ ತನ್ನ ದೇಹದ ಮಾಂಸವನ್ನು ಹೋಮಮಾಡುತ್ತ,