ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ. ಆ೮.] ದಶಮಸ್ಕಂಧವು. ೨೪೮ು ಅದರಿಂದ ರುದ್ರನನ್ನು ಆರಾಧಿಸತೊಡಗಿದನು. ಹೀಗೆ ಆರುದಿನಗಳ ವರೆಗೆ ತನ್ನ ಅವಯವಗಳನ್ನೆಲ್ಲಾ ಕತ್ತರಿಸಿ ಹೋಮಮಾಡಿದರೂ, ರುದ್ರನು ಪ್ರತ್ಯಕ್ಷನಾಗಲಿಲ್ಲ, ಆ ಧಾನವನಿಗಾದರೋ ಮನಸ್ಸಿನಲ್ಲಿ ಬಹಳ ಸಂಕಟ ವುಂಟಾಯಿತು. ಏಳನೆಯದಿನದಲ್ಲಿ ಸ್ನಾನಮಾಡಿ, ಆದ್ರ್ರಕೇಶ (ಒದ್ದೆ ತಲೆ) ದೊಡನೆಯೇ ಬಂದು, ಕೊಡಲಿಯಿಂದ ಮೊತ್ತಕ್ಕೆ ತನ್ನ ತಿರಸ್ಸನ್ನೇ ಕತ್ತರಿಸಿ ಹೋಮಮಾಡುವುದಕ್ಕೆ ಯತ್ನಿ ಸಿದನು. ಆಗ ಪರಮಕಾರುಣಿಕನಾದ ಧೂರ್ಜಟಿಯು, ಆರಣಿಯಿಂದ ಅಗ್ನಿ ಯು ಹೇಗೋಹಾಗೆ,ಆ ಹೋಮಕುಂಡ ದಿಂದ ಮೇಲೆದ್ದು ಬಂದು, ತನ್ನ ಎರಡುಕೈಗಳಿಂದಲೂ ಆ ವೃಕಾಸುರನ ಕೈಗಳನ್ನು ಹಿಡಿದು, ಆತನ ಕೂರಪ್ರಯತ್ನವನ್ನು ತಪ್ಪಿಸಿದನು. ರು ದ್ರನ ಹಸ್ತಸ್ಪರ್ಶದಿಂದ ಆ ರಾಕ್ಷಸನ ಮೈಯಕ್ತದ ವ್ರಣಗಳೆಲ್ಲವೂ ಆರಿ, ಅವನು ಮೊದಲು ಕತ್ತರಿಸಿದ ಅವಯವಗಳೆಲ್ಲವೂ ಪೂರ್ಣವಾದುವು. ಆಗ ರುದ್ರಮ, ಅವನನ್ನು ಪ್ರಸನ್ನ ದೃಷ್ಟಿಯಿಂದ ನೋಡಿ, ದಾನವೋ ತಮಾ ! ಇನ್ನು ಸಾಕು ಬಿಡು ! ನಾನು ಸಂತೋಷಪಟ್ಟೆನು, ನಿನಗೆ ಬೇಕಾದ ವರವನ್ನು ಕೊಡುವೆನು, ಕೇಳು!ನನ್ನಲ್ಲಿ ಮರೆಹೊಕ್ಕ ಜನರು, ಜಲ ಮಾತ್ರದ ಪೂಜೆಯನ್ನೊಪ್ಪಿಸಿದರೂ ನಾನು ಸಂತೋಷಪಡತಕ್ಕವನು. ನೀನು ಅದನ್ನು ಯೋಚಿಸದೆ ವ್ಯರ್ಥವಾಗಿ ನಿನ್ನ ದೇಹವನ್ನು ಕತ್ತರಿಸಿ ಕೊಡುವುದಕ್ಕಾಗಿ ಯತ್ನಿ ಸಿದೆಯಾ!” ಎಂದನು. ಆಗ ಪಾಪಬುದ್ಧಿಯುಳ್ಳ ಆ ರಾಕ್ಷಸನು, ರುದ್ರನಿಗೆ ಕೈಮುಗಿದು ಪ್ರಭೂ ! ನಾನು ಯಾರೆಯಾರ ತಲೆ ಯಮೇಲೆ ಕೈಯಿಡುವೆನೋ, ಅವರು ಸಾಯಬೇಕು, ಇಷ್ಟೇ ನನ್ನ ಕೋ ರಿಕೆ”ಎಂದನು. ಹೀಗೆ ಆ ವೃ ಕಾಸುರನು ಸತ್ವಿಕ ಭಯಂಕರವಾದ ವರ ವನ್ನು ಕೇಳಿದೊಡನೆ, ರುದ್ರಸಿಗೆ ಮನಸ್ಸಿನಲ್ಲಿ ಅಕೋಶವು ಹುಟ್ಟಿತು. ಹಾಗಿದ್ದರೂ ಆ ಕೋಪವನ್ನು ಹೊರಕ್ಕೆ ತೋರಿಸದೆ, ಸ್ವಲ್ಪ ಹೊತ್ತಿನ ವರೆಗೆ ಮನಸ್ಸಿನಲ್ಲಿಯೇ ಪರಿತಪಿಸಿ,ಆಡಿದ ಮಾತನ್ನು ತಪ್ಪಲಾರದ ನಿರ್ಬಂಧ ದಲ್ಲಿ ಸಿಕ್ಕಿಬಿದ್ದು,ಹಾವಿಗೆ ಹಾಲೆರೆದಂತೆ ಆ ವರವನ್ನೇ ಕೊಟ್ಟು ಬಿಟ್ಟರು.ಕೃತ ಘ್ನು ನಾದ ಆದಾನವನು,ರುದ್ರನು ತನಗೆ ಕೊಟ್ಟ ವರವು ನಿಜವೋ ಸುಳ್ಳೋ ಎಂಬುದನ್ನು ಪರೀಕ್ಷಿಸಬೇಕೆಂದು,ಆ ರುದ್ರನ ತಲೆಯಮೇಲೆಯೇ ಕೈಯಿಡು