ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೪ ಶ್ರೀಮದ್ಭಾಗವತವು | [ಅಧ್ಯಾ, ೮೮. ವುದಕ್ಕೆ.ಹೋದನು.ಆಗ ರುದ್ರನು ಭಯಪಟ್ಟು ಓಡುವುದಕ್ಕಾರಂಭಿಸಿದನು. ರಾಕ್ಷಸನೂ ಅವನನ್ನು ಬೆನ್ನಟ್ಟಿದನು. ರುದ್ರನು ಗಡಗಡನೆ ನಡುಗುತ್ತ, ಭೂಮ್ಯಾಕಾಶಗಳ, ಮತ್ತು ದಿಕ್ಕುಗಳ ಎಲ್ಲೆ ಯವರೆಗೂ ಓಡಿದನು ಊ ರ್ಧ್ಯಾಧೋಲೋಕಗಳೆಲ್ಲವನ್ನೂ ಸುತ್ತಿಬಂದನು.ಕಂಡಕಂಡವರನ್ನೆಲ್ಲಾ ಮರೆ ಹೊಕ್ಕನು, ಬ್ರಹ್ಮಾದಿದೇವತೆಗಳೂ ಅದಕ್ಕೆ ಪ್ರತಿಕ್ರಿಯೆಯೇನೆಂದು ತಿಳಿ ಯದೆ,ಭಯಗ್ರಸ್ತರಾಗಿ ಸುಮ್ಮನಿದ್ದರು. ಕೊನೆಗೆ ರುದ್ರನು, ದಿವ್ಯತೇಜೋ' ವಿಶಿಷ್ಟವಾಗಿಯೂ, ಅಪ್ರಾಕೃತವಾಗಿಯೂ ಇರುವ * ವೈಕುಂಠಕ್ಕೆ ಹೋ ದನು. ಅಲ್ಲಿ ಶ್ರೀಮನ್ನಾರಾಯಣನು, ಸತ್ವಭೂತದಯಾಪರರಾಗಿಯೂ, ಶಾಂತರಾಗಿಯೂ ಇರುವ ಭಕ್ತರ ಸೇವೆಯನ್ನು ಕೈಕೊಳ್ಳುತ್ತ ವಿನೋದ ದಿಂದಿರುತಿದ್ದನು. ಓ ! ಪರೀಕ್ಷಿದ್ರಾಜಾ ! ಅಲ್ಲಿದ್ದ ಶ್ರೀಮನ್ನಾರಾಯಣನು ಭಯದಿಂದ ತನ್ನ ಬಳಿಗೆ ಓಡಿ ಬರುತ್ತಿರುವ ರುದ್ರನನ್ನೂ, ಅವನನ್ನು ಬೆನ್ನ ಟ್ಟಿ ಬರುತಿದ್ದ 'ಅಸುರನನ್ನೂ ಕಂಡೊಡವೆನಿಜಸ್ಥಿತಿಯನ್ನು ತಿಳಿದುಕೊಂಡು, ತನ್ನ ಯೋಗಮಾಯಾಪ್ರಭಾವದಿಂದ ಒಂದು ವಟುವೇಷವನ್ನು ಧರಿಸಿದನು. ಮೌಂಜಿ, ಕೃಷ್ಣಾಜಿನ, ದಂಡ, ಪದ್ಮಾಕ್ಷಮಾಲಿಕೆ, ಮುಂತಾದುವುಗಳನ್ನು ಧರಿಸಿ, ತೇಜಿಸ್ಸಿನಿಂದ ಅಗ್ನಿ ಯಂತೆ ಜ್ವಲಿಸುತ್ತ, ದೂರದಿಂದಲೇ ಆ ರಾಕ್ಷಸ ನನ್ನು ಇದಿರುಗೊಂಡು ಬಂದನು, ಕೈಯಲ್ಲಿರುವ ಪವಿತ್ರದೊಡನೆ ಬಹಳ ವಿನಯದಿಂದ ಆ ರಾಕ್ಷಸನಿಗೆ ನಮಸ್ಕರಿಸಿ ಹೀಗೆಂದು ಹೇಳುವನು. ಓ ? ಶಕುನಿಪಾ! ಇದೇನು ! ನೀನು ಬಹಳ ಆಯಾಸಪಟ್ಟಂತೆ ತೋರುವುದು. ಬಹುದೂರದಿಂದ ನಡೆದು ಬಂದಹಾಗಿದೆ, ಸ್ವಲ್ಪ ಹೊತ್ತು ವಿಶ್ರಮಿಸಿಕೊಳ್ಳ ಬಹುದಲ್ಲವೆ ! ನಿನ್ನ ಶರೀರವನ್ನು ಅಷ್ಟು ಆಯಾಸಕ್ಕೆ ಗುರಿಪಡಿಸಬಹುದೆ ? ಮನುಷ್ಯನಿಗೆ ದೇಹಕ್ಕಿಂತಲೂ ಪ್ರಿಯವಾದುದಿಲ್ಲ! ಸಾಭೀಷ್ಟ್ರಗಳಿಗೂ ಈ ದೇಹವೇ ಮೂಲವು, ಓ ! ರಾಕ್ಷಸಸಾಲ್ವಭೌಮಾ ! ನೀನು ಇಷ್ಟು ಶ್ರಮಪಟ್ಟು ಇಲ್ಲಿಗೆ ಬಂದ ಕಾರವೇನೋ ಅದನ್ನು ನನಗೆ ತಿಳಿಸಬಹುದಾ ಗಿದ್ದರೆ ತಿಳಿಸು! ಮನುಷ್ಯನು, ತಾನು ನಡೆಸಬೇಕಾದ ಕಾವ್ಯವನ್ನು ತನ್ನ

  • ಈ ವೈಕುಂಠವೆಂಬುದು ಮುಕ್ತರಿಗೆ ಪ್ರಾತ್ಯವಾದ ಪರಮಾಕಾಶವಲ್ಲ. ಅಂಡಗಳಲ್ಲಿಯೇ ಸೇರಿದ ಒಂದಾನೊಂದು ವಿಷ್ಣುಲೋಕವೆಂದು ಗ್ರಾಹನ,