ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೫ ಅಧ್ಯಾ, ೮೮.] ದಶಮಸ್ಕಂಧನ, ಆಪ್ತರೊಡನೆ ಆಲೋಚಿಸಿಯೇ ನಡೆಸುವುದು ಮೇಲಲ್ಲವೆ” ಎಂದನು. ಹೀಗೆ ಮಾಯಾವಟುವಾದ ಭಗವಂತನು, ಅಮೃತದಂತೆ ಮಧುರವಾದ ಮಾತಿ. ನಿಂದ ಕೇಳಲು, ವೃಕಾಸುರನು ಆ ಮಾತಿಗೆ ಮರುಳಾಗಿ, ಸ್ವಲ್ಪ ಹೊತ್ತು ದಣುವಾರಿಸಿಕೊಂಡು, ಹಿಂದೆ ನಡೆದ ಸಂಗತಿಗಳೆಲ್ಲವನ್ನೂ ಯಥಾವತ್ತಾಗಿ, ತಿಳಿಸಿದನು. ಅದನ್ನು ಕೇಳಿದೊಡನೆ ಭಗವಂತನು ಅಟ್ಟಹಾಸದಿಂದ ನಕ್ಕು, ( ಅಸುರೇಂದ್ರಾ! ಇಷ್ಟೆ ಅಲ್ಲವೆ ? ಈ ರುದ್ರನ ಮಾತನ್ನು ನಾವು ಎಷ್ಟು. ಮಾತ್ರವೂ ನಂಬಲಾರೆವ, ಅವನ ರೂಪವನ್ನು ನೋಡಿದರೆ ನಿನಗೆ ತಿಳಿಯು. ವುದಿಲ್ಲವೆ ? ಈತನು ಆಮಂಗಳಸ್ವರೂಪನಾಗಿ, ಭೂತ ಪ್ರೇತಪಿಶಾಚು ಗಳಿಗೆ ತಾನೇ ಅಧಿಪತಿಯೆನಿಸಿಕೊಂಡಿರುವನು. ಪಿಶಾಚದ ಮಾತನ್ನು ಯಾ ರಾದರೂ ನಂಬುವರೆ ! ದಾನವೇಂದ್ರಾ! ನೀನು ಇವನನ್ನು ಜಗದ್ಗುರುವೆಂದು ತಿಳಿದು, ಇವನ ಮಾತನ್ನೇ ನಂಬುವುದಾದರೆ, ಇನ್ನು ನಾವು ಹೇಳತಕ್ಕದ್ದೇ ನಿದೆ? ಅಷ್ಟೇಕೆ ? ನಿನ್ನ ತಲೆಯಮೇಲೆ ನಿನ್ನ ಕೈಯಿಟ್ಟು ನೋಡಿದರೆ ಅವನ ಮಾತು ನಿಜವೋ ಸುಳ್ಳೋ ಎಂಬುದನ್ನು ಸುಲಭವಾಗಿ ತಿಳಿಯಬಹುದ ಲ್ಲವೆ ? ಅವನ ಮಾತು ಸುಳ್ಳೆಂಬುದು ನಿನಗೆ ಈಗಲೇ ಸ್ಪಷ್ಟವಾಗುವುದು. ಆಗ ನೀನು ಅವನನ್ನು ಹಿಡಿದು ತಿರುಗಿ ಅವನು ಹೀಗೆ ಮತ್ತೊಬ್ಬನನ್ನು ಸುಳ್ಳಾಡಿ ವಂಚಿಸದಂತೆ ತೀರಿಸಿಬಿಡಬಹುದು” ಎಂದನು. ಹೀಗೆಭಗವಂತನು ಮಂದಹಾಸಪೂರೈಕವಾದ ಮಧುರವಾಕ್ಯಗಳಿಂದ ಅವನನ್ನು ಮೋಹಗೊಳಿ ಸಲು ಅಲ್ಪ ಬುದ್ಧಿಯುಳ್ಳ ಆ ವೃಕಾಸುರನು, ತನ್ನನ್ನೇ ತಾನು ಮರೆತು ತನ್ನ ತಲೆಯಮೇಲೆಯೇ ಕೈಯಿಟ್ಟನು, ಆ ಕ್ಷಣವೇ ವಜಾಹತವಾದ ಪತದಂತೆ ಅವನ ತಲೆಯು ಸೀಳಿ ಹೋಯಿತು, ಆಗ ಆಕಾಶದಲ್ಲಿ ನಾನಾಕಡೆಯಿಂದ ಜ ಯಶಬ್ದಗಳೂ, ನಮಶ್ಯಬ್ದಗಳೂ, ಸಾಧುವಾದಗಳೂ ಹೊರಟವು. ದೇವತೆ ಗಳೂ, ಋಷಿಗಳೂ ಪುಷ್ಪವರ್ಷವನ್ನು ಕರೆದರು. ರುದ್ರನೂ ಸಂಕಟದಿಂದ ಮುಕ್ತನಾದನು, ಆಗ ವಿಷ್ಣುವು ಶಿವನನ್ನು ಕುರಿತು, «ಓ ದೇವೋತ್ತಮಾ ! ಮಹಾದೇವಾ ! ಈ ಪಾಪಿಯು ತನ್ನ ಪಾಪದಿಂದಲೇ ಹತನಾದನು. ದೊಡ್ಡ ವರಲ್ಲಿ ಅಪರಾಧಮಾಡಿದಮೇಲೆ ಯಾವಪ್ರಾಣಿಯುತಾನೇ ಕ್ಷೇಮದಿಂದಿರು ವುದು? ಲೋಕಗುರುವಾಗಿ,ವಿಶ್ವೇಶ್ವರನೆನಿಸಿಕೊಂಡ ನಿನ್ನಲ್ಲಿ ಅಪರಾಧಿಯಾದ.