ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.೨೬೮೩ ಶ್ರೀಮದ್ಭಾಗವತವು [ಅಧ್ಯಾ, ೮೯ ಈ ದುರಾತ್ಮನಿಗೆ ಈ ಸ್ಥಿತಿಯುಂಟಾದುದು ನ್ಯಾಯವೇ” ಎಂದನು. ಓ ! ಪರೀಕ್ಷೆ ದ್ರಾಜಾ ! ಹೀಗೆ - ಪರಾತ್ಪರನಾಗಿಯೂ, ಸಮಸ್ಯಯೋಗಶಕ್ತಿ ಗಳಿಗೂ ಸಮುದ್ರನಂತೆ ಆಧಾರನಾಗಿಯೂ, ಸಾಕ್ಷಾತ್ಪರಮಾತ್ಮನಾ ಗಿಯೂ ಇರುವ ಶ್ರೀ ಹರಿಯು, ರುದ್ರನ ಕಷ್ಟವನ್ನು ಬಿಡಿಸಿದ ಈ ಚರಿತ್ರ ವನ್ನು ಹೇಳತಕ್ಕವನೂ, ಕೇಳತಕ್ಕವನೂ, ಸಂಸಾರದುಃಖದಿಂದಲೂ, ಶತ್ರು ಭಯದಿಂದಲೂ ಮುಕ್ತನಾಗುವನು. ಇದು ಎಂಬತ್ತೆಂಟನೆಯ ಅಧ್ಯಾಯವು. w+ ತ್ರಿಮೂರ್ತಿ ತಾರತಮ್ಯ ಪರೀಕ್ಷೆ ww ಓ ! ಪರೀಕ್ಷಿದ್ರಾಜಾ ! ಸರಸ್ವತೀ ನದೀತೀರದಲ್ಲಿ ಒಮ್ಮೆ ಋಷಿಗಳು ಸತ್ರಯಾಗವನ್ನು ನಡೆಸುತ್ತಿದ್ದರು.ಆಗ ಆಋಷಿಗಳ ಗೋಷ್ಠಿಯಲ್ಲಿ,ತ್ರಿಮೂ ರ್ತಿಗಳಲ್ಲಿ ಯಾರು ಮೇಲೆಂಬ ವಿಚಾರವು ಹುಟ್ಟಿತು. ಆಗ ಋಷಿಗಳೆಲ್ಲರೂಸೇರಿ ಬ್ರಹ್ಮಪುತ್ರನಾದ ಭಗುಮಹರ್ಷಿಯನ್ನು ಕುರಿತು ಈ ವಿಚಾರವನ್ನು ಪರೀ .ಕಿಸಿ ತಿಳಿದುಬರಬೇಕೆಂದು ಪ್ರಾರ್ಥಿಸಿದರು, ಒಡನೆಯೇ ಬೃಗುವು ಅಲ್ಲಿಂದ ಹೊರಟು, ಮೊದಲು ಬ್ರಹ್ಮ ಸಭೆಗೆ ಹೋದನು, ಅಲ್ಲಿ ಬ್ರಹ್ಮನ ಗುಣವನ್ನು ಪರೀಕ್ಷಿಸಬೇಕೆಂಬ ಉದ್ದೇಶದಿಂದ, ಆ ಸಭೆಗೆ ಬಂದಾಗಲೂ ಅವನಿಗೆ ಕೈ ಮುಗಿಯದೆ,ಅವನನ್ನು ಸ್ತೋತ್ರಮಾಡದೆ ಸುಮ್ಮನೆ ನಿಂತನು.ಅದನ್ನು ನೋ ಡಿ ಬ್ರಹ್ಮನಿಗಾದರೋ ಮನಸ್ಸಿನಲ್ಲಿ ಅತ್ಯಾಕೋಶವು ಹುಟ್ಟಿತು. ತೇಜ ಸ್ಸಿನಿಂದ ಜ್ವಲಿಸುವಂತೆ ಕೋಪದಿಂದ ಆತನನ್ನು ನೋಡಿದನು, ಆದರೆ ತನ್ನ ಮಗನಾದ ಆ ಭಗುವಿನಲ್ಲಿ ಉಕ್ಕಿಬರುತ್ತಿರುವ ಆ ಕೋಪವನ್ನು ಉಪಯೋ ಗಿಸಲಾರದೆ, ಜಲದಿಂದ ಅಗ್ನಿಯನ್ನು ಹೇಗೋಹಾಗೆ, ವಿವೇಕದಿಂದ ಕೋಪ ನನ್ನ ಡಗಿಸಿ ಶಾಂತಿಯನ್ನು ವಹಿಸಿ ಸುಮ್ಮನಿದ್ದನು, ಆಮೇಲೆ “ಗುವು ಅಲ್ಲಿಂ ದ ಹೊರಟು ಕೈಲಾಸಕ್ಕೆ ಹೋಗಿ, ರುದ್ರ ಸಭೆಯನ್ನು ಪ್ರವೇಶಿಸಿದನು, ಈ ಮಹರ್ಷಿಯನ್ನು ಕಂಡೊಡನೆ ಮಹೇಶ್ವರನು, ಎಷ್ಟೇ ಗೌರವದಿಂದ ಇದಿ ರೆದ್ದು, ಮುಂದೆ ಬಂದು, ಸಹೋದರಪ್ರೀತಿಯಿಂದ ಅವನನ್ನು ಆಲಿಂಗಿಸಿ ಕೊಳ್ಳುವುದಕ್ಕಾಗಿ ಬಂದನು. ಆಗ ಭಗುವು ರುದ್ರನನ್ನು ಕೋಪದಿಂದ ದು