ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

මළ තීර ಶ್ರೀಮದ್ಭಾಗವತವು [ಅಧ್ಯಾ, ೮೯ ರಿಸಿ ತಿಳಿಸಿದನು. ಅದನ್ನು ಕೇಳಿ ಮಹರ್ಷಿಗಳೆಲ್ಲರೂ ಆಶ್ಚಯ್ಯಪಡುತ್ಯ, ತಾಳ್ಮೆ ಮತ್ತು ಅಪರಾಧಿಗಳಲ್ಲಿಯೂ ಪ್ರೀತಿ, ಮುಂತಾದ ಎಣೆಯಿಲ್ಲದ ಗುಣಗ ಳಿಂದ, ವಿಷ್ಣುವೇ ತ್ರಿಮೂರ್ತಿಗಳಲ್ಲಿ ಅಧಿಕನೆಂದು ಐಕಕಂಠದಿಂದ ನಿಶ್ಚ ಯಿಸಿಕೊಂಡರು. ಲೋಕಕ್ಕೆ ಧಕ್ಕೆ ಜ್ಞಾನ ವೈರಾಗ್ಯಗಳಾಗಲಿ, ಅಣಿಮಾ - .ದೃಷ್ಟಸಿದ್ಧಿಗಳಾಗಲಿ, ಯಾವನಿಂದಲೇ ಲಭಿಸುವವೋ, ಯಾವನ ಕೀರ್ತಿ 'ಯು ಲೋಕಕ್ಕೆ ಸಮಸ್ಯಪಾಪಗಳನ್ನೂ ನೀಗಿಸುವುದೋ, ಪ್ರಾಣಿಹಿಂಸಾ ವಿಮುಖರಾಗಿಯೂ, ಶಾಂತರಾಗಿಯೂ, ಸಮಚಿತ್ತರಾಗಿಯೂ, ವಿರಕ್ತರಾ ಗಿಯೂ ಇರುವ ಮಹರ್ಷಿಗಳಿಗೆ ಯಾವನು ಪರಮಗತಿಯೆನಿಸಿರುವನೋ, `ಶುದ್ಯಸತ್ವವೇ ಯಾವನಿಗೆ ಪ್ರಿಯವಾದ ಮೂರಿಯೆನಿಸಿರುವುದೋ, ಬ್ರಾಹ್ಮಣರೇ ಯಾವನಿಗೆ ಇಷ್ಟದೇವತೆಗಳಂತಿರುವರೋ, ವಿವೇಕಿಗಳು ಬೇರೊಂದರಲ್ಲಿಯೂ ಆಸೆಯಿಡದೆ, ಯಾವನ ಪಾದಸೇವೆಯೇ ತಮಗೆ ಪರಮಭಾಗ್ಯವೆಂದೆಣಿಸಿರುವರೋ, ಅಂತಹ ಭಗವಂತನು, ತನ್ನ ಯೋಗ ಮಾಯೆಯಿಂದ ಸತ್ಯಾದಿಗುಣಗಳನ್ನು ಕೈಕೊಂಡಾಗ,ದೇವ ದಾನವ ಮನು ಷ್ಯರೆಂಬ ಮೂರುಬಗೆಯ ಆಕಾರಗಳಿಂದ ತೋರುವನು. ಶುದ್ದ ಸಮಯ ವಾದ ಆತನ ಮೂರ್ತಿಯೇ ಆತ್ಮಶುದ್ಧಿಗೆ ಸಾಧನವೆನಿಸಿರುವುದು."ಹೀಗೆಂದು ಸರಸ್ವತೀ ನದೀತೀರದಲ್ಲಿ ಬ್ರಹ್ಮ ಸತ್ರಕ್ಕಾಗಿ ನೆರೆದಿದ್ದ ಋಷಿಗಳೆಲ್ಲರೂ ಲೋಕಕ್ಕೆ ಸಂದೇಹಸಿವೃತ್ತಿಯಾಗುವಂತೆ ನಿರ್ಣಯವನ್ನು ಮಾಡಿ,ಆ ಪರ ಮಪುರುಷನ ಪಾದಾರವಿಂದವನ್ನು ಧ್ಯಾನಿಸುತ್ತಿದ್ದು ಕೊನೆಗೆ, ಸದ್ಧತಿಯನ್ನು ಹೊಂದಿದರು.” ಹೀಗೆಂದು ಶುಕಮುನಿಯು ಪರೀಕ್ಷಿದ್ರಾಜನಿಗೆ ಹೇಳಿದ ತ್ರಿಮೂರ್ತಿಗಳ ಗುಣತಾರತಮ್ಯವನ್ನು , ಸೂತಪರಾಣಿಕನು ನೈಮಿಶಾರಣ್ಯ ವಾಸಿಗಳಾದ ಋಷಿಗಳಿಗೆ ತಿಳಿಸುತ್ತ,ಅವರನ್ನು ಕುರಿತು, “ಓ ಮಹರ್ಷಿಗಳೆ ! ವ್ಯಾಸಪುತ್ರನಾದ ಶುಕಮುನಿಯ ಮುಖಾರವಿಂದಸುಗಂಧದಿಂದ ಮಿಶ್ರವಾಗಿಯೂ, ಸಂಸಾರಭಯವನ್ನು ನೀಗಿಸತಕ್ಕುದಾಗಿಯೂ ಇರುವ ಪರಮಪುರುಷನ ಕಥಾಮೃತವನ್ನು ,ಆಗಾಗ ಕರ್ಣಪಟಗಳಿಂದ ಪಾನಮಾಡ ತಕ್ಕವನಿಗೆ, ಸಂಸಾರಮಾರ್ಗದಲ್ಲಿ ಬಹುಕಾಲದಿಂದ ಸುತ್ತಿದ ಶ್ರಮವೆಲ್ಲವೂ .ಕ್ಷಣಮಾತ್ರದಲ್ಲಿ ನೀಗುವುದು.” ಎಂದನು.