ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೦೬ ಶ್ರೀಮದ್ಭಾಗವತವು [ಅಧ್ಯಾ, ೫೧. ಸತ್ಯೇಶ್ವರಾ ! ಸತ್ವರಜಸ್ತಮೋಗುಣಗಳ ಸಂಬಂಧದಿಂದುಂಟಾಗುವ ಕಾ ಮಕ್ರೋಧಾದಿಗಳನ್ನೇ ಹಿಂದಿಟ್ಟುಕೊಂಡು ಬರುತ್ತಿರುವ ಬೇರೆ ಯಾವ ವಿಷ ಯಸುಖಗಳನ್ನೂ ನಾನು ನಿನ್ನಿಂದ ಅಪೇಕ್ಷಿಸತಕ್ಕವನಲ್ಲ. ಕರ್ಮರಹಿತನಾ ಗಿಯೂ, ಸತ್ಯಾದಿಗುಣಗಳ ಸಂಬಂಧವಿಲ್ಲದವನಾಗಿಯೂ, ಅಸಮಾನನಾಗಿ ಯೂ, ಪರಮಪುರುಷನಾಗಿಯೂ, ಈ ಮನುಷ್ಯಾವತಾರದಿಂದ ಸರೈಸುಲ ಭನಾಗಿಯೂ, ಜ್ಞಾನೈಕಸ್ವರೂಪನಾಗಿಯೂ ಇರುವ ನಿನ್ನ ಪಾದಸಾನ್ನಿ ಧ್ಯವೊಂದನ್ನೇ ನಾನು ಬಯಸುವೆನು, ಈ ಸಂಸಾರದಲ್ಲಿ ಬಹುಕಾಲದಿಂದ ತಾಪತ್ರಯಗಳಿಗೆ ಸಿಕ್ಕಿಬಿದ್ದು, ಅಪಾರದುಃಖಗಳನ್ನನುಭವಿಸುತ್ತ, ಕಾಮ ಕೊಧಗಳೇ ಮೊದಲಾದ ಅರಿಷಡ್ವರ್ಗಗಳನ್ನೂ ಜಯಿಸಲಾರದೆ, ಮನಸ್ಸಿ ನಲ್ಲಿ ಶಾಂತಿಯೂ ಇಲ್ಲದೆ, ಸಂಸಾರದಲ್ಲಿ ಸಿಕ್ಕಿ ನರಳುತ್ತಿದ್ದ ನಾನು, ನಿಹFತು ಕವಾದ ನಿನ್ನ ಕೃಪೆಯಿಂದ, ಈಗ ನಿನ್ನ ಪಾದಸಾನ್ನಿಧ್ಯವನ್ನು ಸೇರಿರುವೆನು. ಸಂಸಾರಭಯವನ್ನು ನೀಗಿಸತಕ್ಕುದಾಗಿಯೂ, ಸಮಸ್ತದುಃಖನಿವಾರಕವಾ ಗಿಯೂ, ನಿತ್ಯವಾಗಿಯೂ ಇರುವ ನಿನ್ನ ಪಾದಾರವಿಂದಗಳಲ್ಲಿ ಮರೆಹೊಕ್ಕಿ ರುವೆನು. ಶರಣಾಗತನಾದ ನನಗೆ ಇನ್ನು ಮೇಲೆ ಸಂಸಾರಭಯವಿಲ್ಲ ದಂತೆ ಕಾಪಾಡಬೇಕು. ಇದೊಂದೇ ಈಗ ನಿನ್ನಲ್ಲಿ ಪ್ರಾರ್ಥಿಸತಕ್ಕ ವರವು” ಎಂದನು. ಆಗ ಕೃಷ್ಣನು ಆ ಮುಚಕುಂದನ ಭಕ್ತಿಗೆ ಸಂತೋಷಪಟ್ಟು, ಓ ಸಾಲ್ವಭೌಮಾ! ಮಹಾರಾಜಾ! ನಿನ್ನ ಭಕ್ತಿಯು ದೃಢವಾಗಿರುವುದು, ಈಗ ನಿನ್ನ ಬುದ್ದಿಯು ವಿಷಯಾಭಿಲಾಷೆಯನ್ನು ಬಿಟ್ಟು ಶುದ್ಧವಾಗಿರುವುದು, ನಾನು ಇಲ್ಲಿ ನಿನಗೆ ಪ್ರತ್ಯಕ್ಷನಾಗಿನಿಂತು ಬೇಕಾದ ವರಗಳನ್ನು ಕೇಳುವಂತೆ ಪ್ರೇರಿಸಿ ದರೂ, ನೀನು ಬೇರೆಯಾವ ಸುಖಗಳನ್ನೂ ಅಪೇಕ್ಷಿಸದೆ, ನನ್ನ ಸಾನ್ನಿಧ್ಯವೊಂ ದನೆ ಬಯಸುತ್ತಿರುವೆಯಲ್ಲವೆ.ನಿನ್ನಂತಹ ಧೀರರಿಗೆ ಇದು ಯುಕ್ತವಾಗಿಯೇ ಇರುವುದು ಉತ್ತಮವಾದ ವಸ್ತುಗಳನ್ನು ತಂದು ಮುಂದಿಟ್ಟು, ಆಸೆಯನ್ನು ತೋರಿಸಿದಾಗ ಎಂಥವರಿಗಾದರೂ ಬುದ್ಧಿಯು ಕದಲುವುದುಂಟು. ಆದರೆ ನಿನ್ನಂತೆ ಅವನ್ಯಪ್ರಯೋಜನರಾಗಿ ನನ್ನಲ್ಲಿ ಭಕ್ತಿಯನ್ನು ಮಾಡತಕ್ಕವರಿಗೆ ಎಂದಿಗೂ ಮನಸ್ಸು ಚಲಿಸಲಾರದು. ಎಷ್ಟೆಷ್ಟವಿಧದಿಂದ ಆಸೆಯನ್ನು