ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಧ್ಯಾ, ಆ೯.] ದಶಮಸ್ಕಂಧವು. ೨೩೮೯ ತಿರುಗಿ ಶುಕನು ಪರೀಕ್ಷಿದ್ರಾಜನನ್ನು ಕುರಿತು «ಓ ರಾಜೇಂದ್ರಾ ಕೇಳು ! ಒಮ್ಮೆ ದ್ವಾರಕೆಯಲ್ಲಿ, ಒಬ್ಬಾನೊಬ್ಬ ಬ್ರಾಹ್ಮಣಪತ್ನಿಗೆ ಒಂದು ಗಂಡುಮಗುವು ಹುಟ್ಟಿ, ಅದು ಭೂಸ್ಪರ್ಶವಾದೊಡನೆ, ಪ್ರಾಣವನ್ನು ಬಿ ಟ್ಟಿತು. ಬ್ರಾಹ್ಮಣನು ಆ ತನ್ನ ಸತ್ತ ಮಗುವನ್ನು ತಂದು,ಅರಮನೆಯ ಬಾಗಿ ಲಲ್ಲಿಟ್ಟು, ಮಹಾವ್ಯಸನದಿಂದ ಹೀಗೆಂದು ವಿಲಪಿಸತೊಡಗಿದನು. ಅಯ್ಯೋ! ಈ ಅನ್ಯಾಯವುಂಟೆ? ಬ್ರಾಹ್ಮಣದ್ವೇಷಿಗಳಾಗಿಯೂ,ಮೂರ್ಖಬುದ್ಧಿಯುಳ್ಳ ವರಾಗಿಯೂ, ಬೇಡರಂತೆ ದಯಾಶೂನ್ಯರಾಗಿಯೂ, ವಿಷಯಲಂಪಟರಾ ಗಿಯೂ ಇರುವ ಕ್ಷತ್ರಿಯಾಧಮರು ರಾಜ್ಯಾಧಿಕಾರವನ್ನು ನಡೆಸುವುದರಿಂ ದಲ್ಲವೇ ಇಂತಹ ವಿಪರೀತಗಳೆಲ್ಲವೂ ನಡೆಯುವುವು. ಆ ಕ್ಷತ್ರಿಯರ ಕರ ದೋಷದಿಂದಲೇ, ನನ್ನ ಶಿಶುವು ಹುಟ್ಟಿದಾಗಲೇ ಸತ್ತಿತು, ಪ್ರಾಣಿಹಿಂಸೆ ಯಿಂದಲೇ ವಿನೋದಿಸತಕ್ಕವರಾಗಿಯೂ, ದುಶ್ಮೀಲರಾಗಿ ಯೂ, ಇಂದ್ರಿಯ ವನ್ನು ಜಯಿಸಲಾರದ ಕಾಮುಕರಾಗಿಯೂ ಇರುವ ಇಂತಹ ರಾಜರ ಕೈಕೆ ಳಗೆ ಬದುಕುವ ಪ್ರಜೆಗಳಿಗೆ, ದುಃಖವೂ ದಾರಿದ್ರವೂ ಎಂದಿಗೂ ತಪ್ಪಿದು ದಲ್ಲ ! " ಎಂದು ಬಾಯಿಗೆ ಬಂದಹಾಗೆ ರಾಜನನ್ನು ನಿಂದಿಸಿ ಹೊರಟು ಹೋದನು. ಆಮೇಲೆ ಅದೇ ಬ್ರಾಹ್ಮಣನಿಗೆ ಮತ್ತೊಂದು ಶಿಶುವು ಜನಿಸಿ, ಅದೂ ಭೂಸ್ಪರ್ಶವಾದೊಡನೆ ಮೃತಿ ಹೊಂದಿತು. ಆಗಲೂ ಹಿಂದಿನಂತೆಯೇ ಆ ಬ್ರಾಹ್ಮಣನು ಆ ಮಗುವನ್ನು ತಂದು, ಅರಮನೆಯ ಬಾಗಿಲಲ್ಲಿಟ್ಟು ಹಿಂದಿನ ಹಾಡುಗಳನ್ನೇ ಹಾಡಿ ಹೊರಟುಹೋದನು. ಇದೇವಿಧವಾಗಿ ಆ ಬ್ರಾಹ್ಮಣ ನಿಗೆ ಎಂಟುಶಿಶುಗಳು ಹುಟ್ಟಿ ಸತ್ತವು.ಒಂದೊಂದನ್ನೂ ಅವನು ರಾಜವ್ಯಾರ ದಲ್ಲಿ ತಂದಿಟ್ಟು, ಅದೇ ಮಾತುಗಳನ್ನು ಹೇಳಿಹೋಗುತ್ತಿದ್ದನು. ಒಂಭತ್ಯ ನೆಯ ಶಿಶುವು ಹುಟ್ಟಿ, ಅದೂ ಸತ್ತಿತು. ಮೊದಲಿನಂತೆ ಆ ಬ್ರಾಹ್ಮಣನು ಆ ಶಿಶುವನ್ನು ತಂದು,ಅರಮನೆಯ ಬಾಗಿಲಲ್ಲಿಟ್ಟು, ಹಿಂದಿನಮಾತುಗಳನ್ನೇ ಹೇ ಳುತ್ತಿರುವಾಗ,ಕೃಷ್ಣಾರ್ಜುನರಿಬ್ಬರೂ ಅದನ್ನು ಕೇಳುತಿದ್ದರು. ಆಗ ಅರ್ಜು ನನು ಆ ಬ್ರಾಹ್ಮಣನನ್ನು ಕುರಿತು « ಓ ಬ್ರಾಹ್ಮಣೋತ್ರಮಾ : ಏನಿದು ! ನಿಮ್ಮ ಊರಿನಲ್ಲಿ ಧನುರ್ಧಾರಿಗಳಾದ ಕ್ಷತ್ರಿಯರೊಬ್ಬರಾದರೂ ಇಲ್ಲವೇನು? ನಿಮ್ಮ ರಾಜನಿಗೆ ನಿಮ್ಮಂತಹ ಬ್ರಾಹ್ಮಣರಲ್ಲಿ ಕರುಣೆಯಿಲ್ಲದಿದ್ದರೂ ಹೋ