ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'ಅಧ್ಯಾ. ೮೯. ದಶಮಸ್ಕಂಧವು. ೨೩೯೩ ತನ್ನ ಸುದರ್ಶನಚಕ್ರವನ್ನು ಮುಂದೆ ಹೋಗುವಂತೆ ಪ್ರೇರಿಸಿದನು. ಎಂತವರಿಗೂ ದುರ್ಗಮವಾಗಿ, ಮಹಾಭಯಂಕರವಾದ ಆ ಮಹಾತಮ ಸ್ಪನ್ನೂ ಕೂಡ, ಸುದರ್ಶನಚಕ್ರವು, ತನ್ನ ಕಾಂತಿಯಿಂದ ಭೇದಿಸತ್ಯ, ರಾಮ ಬಾಣವು ಶತ್ರುಸೈನ್ಯದಲ್ಲಿ ಪ್ರವೇಶಿಸುವಂತೆ, ಮನೋವೇಗದಿಂದ ಮುಂದೆ ಹೋಯಿತು, ಆಗ ಚಕ್ರದ ಹಿಂದೆ ಹೋಗುತ್ತಿದ್ದಲ್ಲಿ ಅರ್ಜುನನು, ಆ ಮಹಾಂ ಧಕಾರದನಡುವೆ ಅಪಾರತೇಜಸ್ಸಿನಿಂದ ಜ್ವಲಿಸುತಿದ್ದ ಚಕ್ರಾಯುಧವನ್ನು ನೋಡಲಾರದೆ, ತನ್ನ ಕಣ್ಣುಗಳನ್ನು ಮುಚ್ಚಿ ಬಿಟ್ಟನು. ಹಾಗೆಯೇ ಆ ರಥವು ಆ ಅಂಧಕಾರವನ್ನು ದಾಟಿ, ಅದರಿಂದಾಚೆಗಿರುವ ಸಮುದ್ರವನ್ನೂ ಪ್ರವೇತಿ ಸಿತು, ಅಲ್ಲಿ ಪ್ರಚಂಡವಾದ ಬಿರುಗಾಳಿಯಿಂದ ದೊಡ್ಡದೊಡ್ಡ ಅಲೆಗಳು ಹೊರಟು, ಈ ತಮಗಿಂತಲೂ ಭಯಂಕರವಾಗಿ ತೋರುತ್ತಿತ್ತು. ಆ ಜಲ ಮಧ್ಯದಲ್ಲಿ ಅದ್ಭುತವಾದ ಒಂದಾನೊಂದು ದಿವ್ಯಭವನವು ಕಾಣಿಸಿತು. ಅದರ ವೈಭವವನ್ನು ಕೇಳಬೇಕೆ ? ಆ ದಿವ್ಯಭವನದಲ್ಲಿ ಸಾವಿರಾರು ರತ್ನ ಸ್ತಂಭಗಳು ಶೋಭಿಸುತ್ತಿದ್ದುವು. ಆ ಭವನಮಧ್ಯದಲ್ಲಿ ಭಯಂಕರಾಕಾರ ವುಳ್ಳ ಅದ್ಭುತಸ್ವರೂಪನಾದ ಆದಿಶೇಷನಿದ್ದನು. ಅವನಿಗೆ ಝಗಝಗಿಸು ತಿರುವ ಸಹಸ್ರಫಣಾಮಣಿಗಳು! ಎರಡು ಸಾವಿರಕಣ್ಣುಗಳು! ಸ್ಪಟಿಕ ಮೃತದಂತೆ ಶುಭ್ರವಾದ ಆಕೃತಿ, ಕಪ್ಪಾದ ಕಂಠದಿಂದಲೂ, ಎರಡೆರಡು ನಾಲಗೆಗಳಿಂದಲೂ ಪ್ರಕಾಶಿಸುವ ತಿರಸ್ಸುಗಳು! ಇಂತಹ ಆದಿಶೇಷನ ಶರೀ ರದಮೇಲೆ, ನೀಲಮೇಘಶ್ಯಾಮನಾಗಿ, ಪೀತಾಂಬರದಧಾರಿಯಾಗಿದ್ದ ಪುರುಷೋತ್ತಮನು, ಪ್ರಸನ್ನ ವಾದ ಮುಖದಿಂದಲೂ, ವಿಶಾಲವಾದ ಕಣ್ಣುಗಳಿಂದಲೂ ಶೋಭಿಸುತ್ತ ಕುಳಿತಿದ್ದನು. ಆತನ ಕಿರೀಟಕುಂಡಲಗ ಭಲ್ಲಿರುವ ರತ್ನಗಳ ಕಾಂತಿಯು, ಮುಂಗುರುಳುಗಳಮೇಲೆ ಬಿದ್ದು, ಅದಕ್ಕೆ ಮತ್ತಷ್ಟು ಶೋಭಾತಿಶಯವನ್ನುಂಟು ಮಾಡುತ್ತಿರುವುದು, ಅವನಿಗೆ ನೀಡಿದ ಎಂಟುಭುಜಗಳು ! ಎದೆ'ಯಲ್ಲಿ ಕೌಸ್ತುಭಮಣಿ ! ಕಂಠದಲ್ಲಿ ವನಮಾಲಿಕೆ! ವಕ್ಷಸ್ಥಲದಲ್ಲಿ ಶ್ರೀವತ್ಸವೆಂಬ ಮಚ್ಚೆ ! ಅವನ ಸುತ್ತಲೂ ಸುನಂದ, ನಂದ, ಮೊದಲಾದ ಪಾರ್ಷದರೂ, ಪುರುಷಾಕಾರದಿಂದಿರುವ ಚಕ್ರಾಧ್ಯಾ ಯುಧ ಗಳೂ, ಸೇವಾನಿರತರಾಗಿ ಕಾದಿರುವರು. ಪಮ್ಮಿ, ಶ್ರೀ ಕೀರ್ತಿ ಮೊದಲಾದ