ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Faܬܦܢ ಅಥ್ಯಾ. ೯೦.] ದಶಮಸ್ಕಂಧವು. ಕೊಂಡನು. ಓ ! ಪರೀಕ್ಷಿದ್ರಾಜಾ! ಹೀಗೆ ಅಖಿಲೇಶ್ವರನಾದ ಭಗವಂತನು, ಕೃಷ್ಣಾವತಾರದಲ್ಲಿ ದೇವತೆಗಳಿಗೂ, ಮನುಷ್ಯರಿಗೂ ಸಾಧ್ಯವಲ್ಲದ ಇನ್ನೂ ಅನೇಕ ಅದ್ಭುತಕಾರಗಳನ್ನು ನಡೆಸುತ್ತ, ಸಾಮಾನ್ಯ ಜನರಂತೆ ಗ್ರಾಮ್ಯ ಭೋಗಗಳನ್ನೂ ಅನುಭವಿಸುತ್ತಿದ್ದನು. ಭೂರಿದಕ್ಷಿಣೆಗಳುಳ್ಳ ಅನೇಕಯಾಗ ಗಳನ್ನೂ ನಡೆಸಿದನು, ಮತ್ತು ಇಂದ್ರನು ಕಾಲಕಾಲಕ್ಕೆ ಮಳೆಯನ್ನು ಸುರಿಸುವಂತೆ, ಬ್ರಾಹ್ಮಣಾದಿಪ್ರಜೆಗಳೆಲ್ಲರಿಗೂ, ಕಾಲಾನುಗುಣವಾಗಿ ಅವರವರ ಅಭೀಷ್ಟಗಳನ್ನು ಈಡೇರಿಸುತ್ತಿದ್ದನು. ಆಧಾಕರಾದ ಕ್ಷತ್ರಿಯ ರಲ್ಲಿ ಕೆಲವರನ್ನು ತನ್ನ ಕೈಯಿಂದಲೇ ಕೊಂದು, ಅರ್ಜುನಾದಿಗಳಿಂದ ಕೆಲವರನ್ನು ಕೊಲ್ಲಿಸಿದನು. ಧಮ್ಮರಾಜಾದಿಗಳಿಂದ ಲೋಕದಲ್ಲಿ ವರ್ಣಾಶ್ರ ಮಧರ್ಮಗಳನ್ನು ಪ್ರವರ್ತಿಸುವಹಾಗೆ ಮಾಡುತ್ತಿದ್ದನು. ಇದು ಎಂಬತ್ತೊಂಬತ್ತನೆಯ ಅಧ್ಯಾಯವು. wಮ ಹಿ ಹೀ ಗೀತೆ ಗಳು.•wಓ ಪರೀಕ್ಷಿದ್ರಾಜಾ ! ಸಾಕ್ಷಾಷ್ಟ್ರೀಯಃಪತಿಯಾದ ಕೃಷ್ಣನು, ದ್ವಾರಕೆಯಲ್ಲಿದ್ದಾಗ, ಅದು ಸಕಲಸಂಪತ್ನ ಮೃವಾಗಿ ಶೋಭಿಸುತಿತ್ತು. ಅನೇಕಯಾದವಶ್ರೇಷ್ಠರಿಂದ ತುಂಬಿದ್ದಿತು. ನವಯೌವನವುಳ್ಳ ಸೀಯ ರು ಉತ್ತಮಾಲಂ ಕಾರಭೂಷಿತರಾಗಿ, ಮಿಂಚಿನಂತೆ ಶೋಭಿಸುತ್ತ, ತಮ್ಮ ತಮ್ಮ ಮನೆಯ ಉಪ್ಪರಿಗೆಗಳ ಮೇಲೆ ಚಂಡಾಟ ಮೊದಲಾದ ವಿನೋದಗ ಳಿಂದ ವಿಹರಿಸುತ್ತಿರುವರು. ಅಲ್ಲಿನ ರಾಜಮಾರ್ಗಗಳೆಲ್ಲವೂ ಮದಜಲವನ್ನು ಸುರಿಸುತ್ತಿರುವ ಮದದಾನೆಗಳಿಂದ ಯಾವಾಗಲೂ ನಿಬಿಡವಾಗಿರುವುವು. ಮತ್ತು ಅಲ್ಲಿನ ಬೀದಿಗಳೆಲ್ಲವೂ, ಅಲಂಕೃತರಾದ ಸುಭಟರಿಂದಲೂ, ಕುದು ರೆಗಳಿಂದಲೂ, ಸುವರ್ಣರಥಗಳಿಂದಲೂ ಶೋಭಿತಗಳಾಗಿರುವುವು, ಎಲ್ಲಿ ನೋಡಿದರೂ ಉದ್ಯಾನಗಳೂ, ಉಪವನಗಳೂ ಕಂಗೊಳಿಸುತ್ತಿರುವುವು. ಅಲ್ಲಿನ ಗಿಡುಮರಗಳೆಲ್ಲವೂ ಫಲಪುಷ್ಪಗಳಿಂದ ತುಂಬಿ, ಯಾವಾಗಲೂ ಭಮರಝಂಕಾರಗಳಿಂದ ಕೂಡಿರುವುದು, ಇಂತಹ ದ್ವಾರಕಾನಗರಿ ಯಲ್ಲಿ ಕೃಷ್ಣನು, ಹದಿನಾರುಸಾವಿರಮಂದಿ ರಾಜಕುಮಾರಿಯರಿಗೂ