ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩ ಅಧ್ಯಾ, fo.] ದಶಮಸ್ಕಂಧವು. ರಗಳನ್ನು ಕೊಟ್ಟು ಸಂತೋಷಪಡಿಸಿದರು. ಹೀಗೆ ಕೃಷ್ಣನೊಡನೆ ಜಲ ಕ್ರೀಡೆಯನ್ನಾ ಡಿದಮೇಲೆ, ಆ ಸ್ತ್ರೀಯರೆಲ್ಲರಿಗೂ,ಅವನ ನಡೆನುಡಿ, ನೋಟ, ನಗೆ, ಮುಂತಾದ ಚೇಷ್ಟೆಗಳನ್ನೂ, ಅವನ ದೇಹಾಲಿಂಗನಸೌಖ್ಯವನ್ನೂ, ಅವನು ತಮ್ಮಲ್ಲಿ ತೋರಿಸಿದ ಸರಸವಿನೋದಗಳನ್ನೂ ನೆನೆಸಿಕೊಂಡು, ಬುದ್ದಿಯು ಪರವಶವಾಯಿತು, ಅವರ ಮನಸ್ಸು ಸಂತತಧ್ಯಾನದಿಂದ ಕೃಷ್ಣನಲ್ಲಿಯೇ ನೆಲೆಗೊಂಡಿತು, ಬೇರೆ ಯಾವ ವಿಷಯವೂ, ಅವರ ಮನ ಸ್ಸಿಗೆ ತೋರದಂತಾಯಿತು. ಆ ಕೃಷ್ಣನನ್ನೇ ಹಂಬಲಿಸುತ್ತ ಹುಚ್ಚ ರಂತೆಯೂ, ಮಂಕರಂತೆಯೂ, ತಮ್ಮೊಳಗೆ ತಾವು ಹೀಗೆಂದು ಮಾತಾಡ ತೊಡಗಿದರು. ಅವರಲ್ಲಿ ಒಬ್ಬಳು ಓ ! ಕುರರಪಕ್ಷಿ ! ನಿದ್ರೆಯಿಲ್ಲದೆ ಹೀಗೇಕೆ ಅರಚುತ್ತಿರುವೆ. ಸುಮ್ಮನೆ ಕೂಗದೆ ಸುಖವಾಗಿ ಮಲಗು. ಈ ರಾತ್ರಿಯಲ್ಲಿ ಸಲ್ವೇಶ್ವರನಾದ ಕೃಷ್ಣನು, ಬಾಹ್ಯ ವಿಷಯಗಳಲ್ಲಿ ಗಮನವನ್ನು ಬಿಟ್ಟು, ನಿದ್ರಿಸುತ್ತಿರುವನಲ್ಲವೆ? ಅವನಿಗೆ ನೀನು ಹೀಗೆ ನಿದ್ರಾಭಂಗವನ್ನು ಮಾಡ ಬಹುದೆ ? ಅಥವಾ ! ಇದು ನಿನ್ನ ತಪ್ಪಲ್ಲ! ನೀನೂ ನಮ್ಮಂತೆ ಆ ಕೃಷ್ಣನ ನಗೆನೋಟಗಳನ್ನೂ, ಅವನ ವಿಲಾಸಗಳನ್ನೂ ನೋಡಿ ಮೋಹಪರವಶ ಯಾಗಿರಬಹುದು, ಆ ವಿರಹಸಂಕಟದಿಂದಲೇ ನೀನೂ ಅಳುತ್ತಿರಬಹುದು” ಎಂದಳು. ಮತ್ತೊಬ್ಬಳು"ಎಲೆ ಚಕ್ರವಾಕಿ!ಏನಿದು?ಈ ರಾತ್ರಿಯಲ್ಲಿ ನೀನು ನಿನ್ನ ಪ್ರಿಯನನ್ನು ಕಾಣದುದಕ್ಕಾಗಿ ಕಣ್ಣು ಮುಚ್ಚಿ ಕೊಂಡಿರುವೆಯೇನು ? ಆದ ಕ್ಯಾಗಿಯೇ ಇಷ್ಟು ದೈನ್ಯದಿಂದ ಅಳುವ ಹಾಗಿದೆ ! ಆಥವಾ ನನ್ನಂತೆ ನೀನೂ ಆ ಕೃಷ್ಣನ ಪಾದಸೇವೆಯನ್ನೇ ಬಯಸಿ ದುಃಖಿಸುವೆಯಾ ? ಆತನ ಪಾದಾರವಿಂದಗಳಲ್ಲಿ ಸಮರ್ಪಿಸಿದ ಪುಷ್ಪಮಾಲಿಕೆಯನ್ನು ತಿರಸ್ಸಿನಲ್ಲಿ ನಮ್ಮಂತೆ ನೀನೂ ಧರಿಸಬೇಕೆಂಬ ತವಕದಿಂದ ಮರುಗುವೆಯೇನು ? " ಎಂದಳು. ಇನ್ನೊಬ್ಬಳು « ಎಲೈ ಸಮದ್ರವೆ ! ನೀನು ಹಗಲುರಾತ್ರಿಯೂ ನಿದ್ರೆಯಿಲ್ಲದೆ ಯಾವಾಗಲೂ ಹೀಗೆ ಭಯಂಕರವಾಗಿ ಮೊರೆದು ಕೂಗು