ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, fo.] ದಶಮಸ್ಕಂಧವು. ೨೩೪೯ ಇಲ್ಲಿ ನೀನು ಹೂಗಳನ್ನು ಕುಯ್ಯುವುದಕ್ಕಾಗಿ ಬಂದೆಯಾ? ಅದೋ ! ಅಲ್ಲಿ ಈಗಲೇ ಅರಳುತ್ತಿರುವ ಕುಂದಪುಷ್ಪಗಳು ಕಾಣುತ್ತಿರುವುವಲ್ಲವೆ ? ಅವುಗ ಳನ್ನು ತೆಗೆದುಕೊಳ್ಳಬಹುದಲ್ಲಾ ” ಎಂದು ಕೇಳಲು, ಅದಕ್ಕವಳು «ಸಖೀ! * ಈ (ಮುವರ್ಣವಿಲ್ಲದ) ಕುಂದದಿಂದ ನನಗೇನಾಗಬೇಕಾಗಿದೆ ? ಇದು ನನಗೆ ಬೇಡ !” ಎಂದಳು. ಆಗ ಮೊದಲನೆಯವಳು 11 ಹಾಗಿದ್ದರೆ ನಿನಗೆ ಯಾವ ಪುಷ್ಪದಲ್ಲಿ ಆಸೆಯುಂಟು”? ಎಂದು ಕೇಳಲು; ಎರಡನೆಯವಳು 44ಸಖಿ! + ಕಿವಿಗೂ, ತಲೆಗೂ ಅಲಂಕಾರಯೋಗ್ಯವಾದ ಪುನ್ನಾಗಪುಷ್ಟ ವನ್ನು (ವೇದಾಂತಗೋಚರನಾದ ಪುರುಷೋತ್ತಮನನ್ನು ಎಂದರೆ ಶ್ರೀ ಕೃಷ್ಣನನ್ನು ಹುಡುಕುತ್ತಿರುವೆನು, ಪುಷ್ಪಸಮೃದ್ಧವಾದ ಆ ಗಿಡದ ಸುವಾ ಸನೆಗಲ್ಲವೇ ಅಜ್ಜಂತುಗಳಾದ # ಗೋವುಗಳೂ ಉನ್ಮುಖವಾಗಿ ಹುಡುಕು ತಿರುವುವು, (ಜನ್ಮರಹಿತನಾದ ಆ ಪುರುಷೋತ್ತಮನನ್ನು ಶ್ರುತಿವಾಕ್ಯ ಗಳೂ ಹುಡುಕುತ್ತಿರುವುವು) ಇನ್ನು ನಮಗೆ ಅದರಲ್ಲಿ ಆಸೆಯು ಹುಟ್ಟುವುದೇ ನಾಶ್ಚರವು” ಎಂದಳು. " ಮತ್ತೊಬ್ಬಳು ಮೇಘವನ್ನು ನೋಡಿ ಓ ಮೇಘುವೆ ! ನೀನೇ ಭಾಗ್ಯವಂತರು! ಆ ಶ್ರೀಷ್ಮನ ಮೈಮೇಲೆ ಬಿಸಿಲು ಬೀಳದಂತೆ ನೀನು ಮರೆ ಯಾಗಿ, ಅವನಿಗೆ ಆಗಾಗ ಪ್ರಿಯವನ್ನುಂಟುಮಾಡಿರುವೆ ? ನಮ್ಮಂತೆ ನೀನೂ ಈಗ ಆತನನ್ನೇ ನಿಶ್ಚಲವಾಗಿ ಧ್ಯಾನಿಸುವೆಯೇನು ? ಆದರಿಂದಲೇ ನೀನೂ ನಮ್ಮಂತೆ ಜಲಾದ್ರ್ರ ಹೃದಯನಾಗಿರುವುದು ನ್ಯಾಯವೇ ? ಆ ಕೃ ಪನ ಪ್ರಸಂಗವು ಎಂತವರಿಗಾದರೂ ದುಃಖಹೇತುವು.” ಎಂದಳು.

  • ಇದಕ್ಕೆ 'ಅಮುನಾ ಕುಂದೇನ ಮಮಕಿಂ” ಎಂಬುದು ಮೂಲವಾಕ್ಯವು, ಮು ವರ್ಗವಿಲ್ಲದ ಕುಂದದಿಂದ ನನಗೇನು ? ಎಂದರೆ, ಮುಕಾರ ವಿಶಿಷ್ಟವಾದ ಕುಂದವೇ (ಮುಕುಂದನೇ ತನಗೆ ಪ್ರಿಯವೆಂದು ಭಾವವು.

↑ “ಪನ್ನಾಗಂ” ಪುರುಷಶ್ರೇಷ್ಠನನ್ನು 'ಶ್ರುತಿಶಿರೋಭೂಷಾವಿಶೇಷಾಯಿ ತಂ” ವೇದಾಂತಗಳಿಗೆ ಭೂಷಕಪ್ರಾಯನನ್ನು ಎಂದು ಶೇಷಾರವು. { ಇಲ್ಲಿ ಗಾವಃ ಉಜ್ಜಿತಸನಂ” ಎಂಬೀಪದಗಳಿಗೆ, ವೇದಗಳೂ ಕೂಡ ಜನ್ಮರಹಿತನಾದ ಯಾವನನ್ನು ಹುಡುಕುವವೋ ಅವನನ್ನೇ ನಾನು ಹುಡುಕುವ ನೆಂದು ಅರ್ಥಾಂತರನ.