ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪oo ಶ್ರೀಮದ್ಭಾಗವತವು [ಅಥ್ಯಾ. ೯೦. ಮತ್ತೊಬ್ಬಳು, ಎಲೆ ಕೋಗಿಲೆ ! ನಿನಗೆ ಕಲಕಂಠನೆಂಬ ಹೆಸರು ಯುಕ್ತವೆ? ಆ ಶ್ರೀಕೃಷ್ಣನಾಮದಂತೆ ಮಧುರವಾದ ಶಬ್ದವನ್ನೇ ನೀನು ಯಾವಾಗಲೂ ನುಡಿಯುತ್ತಿರುವೆ. ಸತ್ತವರನ್ನೂ ಬದುಕಿಸುವಷ್ಟು ಕೋ ಮಲವಾದ ನಿನ್ನ ಮಧುರಶ್ವರದಿಂದ, ನಿನಗೆ ನನ್ನಿಂದಾಗಬೇಕಾದ ಪ್ರಿಯವೇ ನೆಂಬುದನ್ನು ಮತ್ತೊಮ್ಮೆ ಹೇಳು !!ಓ ಶುಕರಾಜಾ ! ಯದೂತ್ತಮನಾದ ಆ ಶ್ರೀಕೃಷ್ಣನ ಕಥೆಗಳನ್ನು ಒಂದಾವರ್ತಿ ನಿನ್ನ ಬಾಯಿಂದ ಹಾಡು ! ವಿರಹಾಗ್ನಿ ಯಿಂದ ಬೇಯುತ್ತಿರುವ ನಮ್ಮ ಹೃದಯವನ್ನು ಆ ಶ್ರೀಕೃಷ್ಣನ ಕಥಾಮೃತದಿಂದ ನೀನು ಅಪ್ಯಾಯನಮಾಡುವುದಾದರೆ, ನಿನಗೆ ಹಾಲಿ ನಿಂದಲೇ ಅಭಿಷೇಕವನ್ನು ಮಾಡುವೆವು. ಓ ಪಠ್ಯತರಾಜಾ ! ನೀನು ಬಹಳ ಉದಾರಸ್ವಭಾವವುಳ್ಳವನು, ಇದ್ದ ಕಡೆಯನ್ನು ಬಿಟ್ಟು ಕದಲದೆ, ಬಾಯಿ ಬಿಟ್ಟು ಮಾತಾಡದೆ ನಿಂತಿರುವೆ ? ಏನೋ ದೊಡ್ಡ ವಿಷಯವನ್ನು ಆಲೋ ಚಿಸುವಂತಿದೆ. ನಾವು ನಮ್ಮ ಸನಾಗ್ರಗಳಿಂದ ಆ ನಂದಕುಮಾರನ ಪಾದಾರವಿಂದಗಳನ್ನು ಧರಿಸುವುದಕ್ಕಾಗಿ ಆಸೆಪಡುವಂತೆ, ನೀನೂ ನಿನ್ನ ಶಿಖರಗಳಿಂದ ಅವುಗಳನ್ನು ಧರಿಸಬೇಕೆಂದು ಕೋರುವೆಯಾ? ಓ ಸಮುದ್ರ ಪತ್ನಿ ಗಳಾದ ನದಿಗಳಿರಾ ! ಇದೇನು ? ನೀವು ದಿನದಿನಕ್ಕೆ ನೀರೊಣಗಿ ಕೃತ ರಾಗುತ್ತಿರುವಿರಿ ! ನಿಮ್ಮಲ್ಲಿರುವ ಕಮಲಗಳ ಕಾಂತಿಯ ಕಂದುತ್ತಿರುವುದು. ಇದಕ್ಕೆ ಕಾರಣವೇನು ? ನಾವು ಆ ಶ್ರೀಕೃಷ್ಣನ ಪ್ರಣಯಕಟಾಕ್ಷಕ್ಕೆ ಪಾತ್ರರಾಗದೆ ದುಃಖದಿಂದ ಕೃಶರಾಗುವಂತೆ, ನೀವೂ ನಿಮ್ಮ ಭರ್ತನಾದ ಸಮುದ್ರರಾಜನ ಪ್ರಣಯದೃಷ್ಟಿಯನ್ನು ಪಡೆಯದೆ ದುಃಖಿಸುತ್ತಿರುವಿ ರೇನು ? ಓ ಹಂಸವೆ ! ನಿನಗೆ ಸುಖಾಗಮನವೆ ? ಇಲ್ಲಿ! ಬಾ' ಕುಳ್ಳಿರು ! ಹಾಲೆ ರೆಯುವೆನು! ಕುಡಿ ! ನಿನಗೆ ಕೃಷ್ಣ ವೃತ್ತಾಂತವೇನಾದರೂ ತಿಳಿದಿದ್ದರೆ ಹೇಳು! ನೀನು ಆ ಕೃಷ್ಣನ ಕಡೆಯ ದೂತನೆಂದು ಕೇಳಿಬಲ್ಲೆವು, ಅಜಿತ ನಾದ ಆ ಕೃಷ್ಣನಿಗೆ ಕುಶಲವಷ್ಟೆ? ಅವನು ಹಿಂದೆ ನಮಗೆ ಹೇಳಿಹೋದ ಮಾತನ್ನು ಸ್ಮರಿಸುವನೆ ? ಹಾಗಿರದು!ಅವನ ಪ್ರೇಮವು ಸ್ಥಿರವಲ್ಲ! ಬಹಳಚ೦ ಚಲವಾದುದು. ಹಾಗೆ ಅವನಿಗೆ ನಮ್ಮ ಸ್ಮರಣೆಯಿದ್ದ ಪಕ್ಷದಲ್ಲಿ ನೀನೇ ಅವ ನನ್ನು ಇಲ್ಲಿಗೆ ಕರೆತರಬಹುದಾಗಿತ್ತಲ್ಲವೆ?ಈಗಲೂನೀನು ಅವನನ್ನು ಇಲ್ಲಿಗೆ ಕರೆ