ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪o೩. ಅಧ್ಯಾ. ೯೦] ದಶಮಸ್ಕಂಧನ. ಹೊಂದಿದವರೆಷ್ಟು ಮಂದಿಯೆಂಬುದನ್ನು ಲೆಕ್ಕಿಸಿಕೊಡಬೇಕೆಂದರೆ, ಸಾವಿ ರಾರುವರ್ಷಗಳ ಕಾಲವಾದರೂ ತೀರದು, ಆ ಯಾದವಕುಮಾರರಿಗೆ ಪಾಠ' ಹೇಳತಕ್ಕ ಆಚಾರರಾಗಿದ್ದವರಸಂಖ್ಯೆಯುಮಾತ್ರವೇಮೂರುಕೋಟೆಯೂ ಎಂಬತ್ತೆಂಟುಸಾವಿರದನೂರೆಂದು ನಾನು ಕೇಳಿರುವೆನು.ಅನೇಕಬಾಲಕರನ್ನು ಸೇರಿಸಿ ಅಧ್ಯಯನಮಾಡಿಸತಕ್ಕ ಆಚಾರರ ಸಂಖ್ಯೆಯೇ ಇಷ್ಟಿರುವಾಗ, ಇನ್ನು ಆ ಯಾದವಕುಮಾರರ ಸಂಖ್ಯೆಯಿಸ್ಕಿರಬಹುದು!ಅಷ್ಟೇಕೆ?! ಯದು ಗಳಲ್ಲಿ ಸಹದೇವನೊಬ್ಬನಿಗೆ ಮಾತ್ರವೇ ಲಕ್ಷೇಪಲಕ್ಷ ಪುತ್ರರು ಹುಟ್ಟಿರು ವರು, ದೇವಾಸುರಯುದ್ಧದಲ್ಲಿ ಹತರಾದ ಅನೇಕದೈತ್ಯರು, ಭೂಲೋಕದಲ್ಲಿ ಮನುಷ್ಯರಾಗಿ ಹುಟ್ಟಿ ಪ್ರಜೆಗಳನ್ನು ಬಾಧಿಸುತಿದ್ದಾಗ, ಅವರನ್ನು ನಿಗ್ರ ಹಿಸುವುದಕ್ಕಾಗಿಯೇ, ಭಗವದಾಜ್ಞೆಯಿಂದ ದೇವತೆಗಳು ಯಾದವರಾಗಿ ಹುಟ್ಟಿದರು. ಈ ಯಾದವರಲ್ಲಿ ವೃಷ್ಠಿಗಳು, ಆಂಧಕರು ಮೊದಲಾಗಿ ಬೇರೆಬೇರೆ ನೂರೊಂದು ಕುಲದವರಾದರು. ಸರದೇವೋತ್ತಮನಾದ ಶ್ರೀಹರಿಯು, ಈ ಭೂಮಿಯಲ್ಲಿಯೂ ಅವರಿಗೆ ಪ್ರಭುವೆನಿಸಿ ನಿಯಮಿಸುವು ದಕಾಗಿ, ತಾನೇ ಕೃಷ್ಣರೂಪದಿಂದವತರಿಸಿದನು. ಈ ಯಾದವರೆಲ್ಲರೂ ಕೃಷ್ಣನು ಶಯನಿಸುವಾಗಲೂ, ಕುಳ್ಳಿರುವಾಗಲೂ, ಸಂಚರಿಸುವಾ ಗಲೂ, ಸಂಭಾಷಿಸುವಾಗಲೂ, ವಿಹರಿಸುವಾಗಲೂ, ಸ್ವಾನಪಾನಗಳನ್ನು ಮಾಡುವಾಗಲೂ, ಬೇರೆ ಕಾಕ್ಯಗಳನ್ನು ನಡೆಸುವಾಗಲೂ, ಅವನೊಡನೆ ಸಮಾನಸ್ಕಂಧರಾಗಿ ಕಲೆತು,ಸ್ನೇಹಭಾವದಿಂದ ನೋಡುತಿದ್ದರೇ ಹೊರತು, ಅವನೇ ತಮಗೆ ಅಂತರಾತ್ಮನಾದ ಪರಮಪುರುಷನೆಂದು ತಿಳಿಯದಿದ್ದರು. ಓ ಪರೀಕ್ಷಿದ್ರಾಜಾ ! ಕೃಷ್ಣಾವತಾರಕ್ಕೆ ಮೊದಲು, ದೇವನದಿಯಾದ ಗಂಗೆಯೇ ಲೋಕದಲ್ಲಿ ಸರೊತ್ತಮವಾದ ಪುಣ್ಯತಿರವೆನಿಸಿಕೊಂಡಿ ದ್ವಿತು, ಈಗ ಶ್ರೀಕೃಷ್ಣನ ಕೀರ್ತಿರೂಪವಾದ ತೀರವು ಆತನ ಪಾದ ತೀರವಾದ ಗಂಗೆಯ ಪ್ರಭಾವವನ್ನೂ ತಗ್ಗಿಸಿತು.ಆ ಕೃಷ್ಣನ ಕೀರ್ತಿಯೇ ಸಮಸ್ತ ತೀರಗಳಿಗೂ ಮೇಲೆನಿಸಿರುವುದು.ಆ ಕೃಷ್ಣನನ್ನು ದ್ವೇಷಿಸಿದವರೂ ಪ್ರೇಮಿಸಿದವರೂ ಸಮಕಕ್ಷೆಯಲ್ಲಿ ಅವನ ಸಾಧಠ್ಯವನ್ನು ಹೊಂದಿರು ವರು.ಯಾವಳ ಕಟಾಕ್ಷಾಲೇಶಕ್ಕೆ ಪಾತ್ರರಾಗುವುದಕ್ಕಾಗಿ,ಬ್ರಹ್ಮಾದಿದೇವತೆ