ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪os ಅಧ್ಯಾ, ೯೦.] ದಶಮಸ್ಕಂಧವು. ಸಂಧ್ಯೆಯಲ್ಲಿಯ ಆ ಮುಕುಂದನ ಸತ್ಕಥಾಶ್ರವಣಕೀರ್ತನಗಳಿಂದ, ಆ ಪರಮಾತ್ಮನಲ್ಲಿ ಮೇಲೆಮೇಲೆ ಆಸಕ್ತಿಯು ಹೆಚ್ಚು ತ ಬರುವುದು.ಆದರಿಂದ ಭಕ್ತಿಯೋಗವು ಹುಟ್ಟುವುದು. ಆ ಭಕ್ತಿಬಲದಿಂದ ಎಂತವರಿಗೂ ಜಯಿಸ ಬಾರದ ಮೃತ್ಯುವನ್ನು ಜಯಿಸಿ, ನಿತ್ಯಸುಖಾಸ್ಪದವಾದ ಭಗವಂತನ ಸಾನ್ನಿ ಧ್ಯವನ್ನು ಸೇರಬಹುದು. ಆ ಭಗವದಾಸ್ಥಾನವೋ ಸಾಧಾರಣವಾದುದಲ್ಲ ! ಏಕಛತ್ರಾಧಿಪತ್ಯದಲ್ಲಿರುವ ರಾಜರೂ ಕೂಡ, ಆ ಸ್ಥಾನವನ್ನು ಪಡೆಯಬೇ ಕೆಂಬ ಉದ್ದೇಶದಿಂದ,ತಮ್ಮ ರಾಜ್ಯ ಕೋಶ ಭೋಗಗಳಲ್ಲಿಯೂ ಆಸೆಯನ್ನು ಬಿಟ್ಟು, ಅಡವಿಯಲ್ಲಿ ತಪಸ್ಸಿಗಾಗಿ ಹೋಗುವರು.” ಎಂದು ಶುಕಮುನಿ ಯು ಪರೀಕ್ಷಿದ್ರಾಜನಿಗೆ ತಿಳಿಸಿದ ಶ್ರೀ ಕೃಷ್ಣಚರಿತ್ರವನ್ನು , ಸೂತಪ ರಾ ಣಿಕನು ನೈಮಿಶಾರಣ್ಯವಾಸಿಗಳಾದ ಋಷಿಗಳಿಗೆ ಹೇಳಿದನು. ಇದು ತೊಂ ಭತ್ತನೆಯ ಅಧ್ಯಾಯವು. ದಶಮಸ್ಕಂಧವು ಸಮಾಪ್ತವು. ಶ್ರೀಕೃಷ್ಣಾಯ ಪರಬ್ರಹ್ಮಣೇ ನಮಃ ಶ್ರೀ ಶ್ರೀ ಶ್ರೀ ಶ್ರೀ PRINT'S AT THE ANANDA PRESS, MADRA8-1919.