ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ဖဂဂo ಶ್ರೀಮದ್ಭಾಗವತವು [ಅಧ್ಯಾ, ೫೨. ಳಾಗಿಯೂ, ಅಮೃತದಂತೆ ಆಹ್ಲಾದಕರವಾಗಿಯೂ ಇರುವ ಶ್ರೀ ಕೃಷ್ಣನ ಚರಿತ್ರಗಳನ್ನು ಎಷ್ಟು ಕೇಳಿದರೆ ತಾನೇ ತೃಪ್ತಿಯುಂಟಾಗುವುದು ! ಎಂದನು. ಆಗ ಶುಕಮಹರ್ಷಿಯು, “ಓ ಪರೀಕ್ಷಿದ್ರಾಜಾ! ಕೇಳು, ಹಿಂದೆ ವಿದರ್ಭದೇಶಾಧಿಪತಿಯಾದ ಭೀಷ್ಟಕನೆಂಬ ರಾಜನಿದ್ದನು. ಅವನಿಗೆ ಐದು ಮಂದಿ ಗಂಡುಮಕ್ಕಳೂ, ಒಬ್ಬ ಕನೈಯೂ ಹುಟ್ಟಿದರು. ಆ ಐದುಮಂದಿ ಗಂಡುಮಕ್ಕಳಿಗೂ ಜೈಷ್ಣಾನುಕ್ರಮವಾಗಿ,ರುಕ್ಕಿ, ರುಕ್ಕರಥ, ರುಕ್ಕ ಬಾಹು, ರುಕ್ಕ ಕೇಶ, ರುಕ್ಕಮಾಲಿಗಳೆಂದು ಹೆಸರು. ಇವರೆಲ್ಲರಿಗೂ ಕಿರಿಯವಳಾ ಗಿದ್ದ ಹೆಣ್ಣುಮಗಳಿಗೆ ರುಕ್ಕಿಣಿಯೆಂದು ಹೆಸರು. ಈ ರುಕ್ಕಿಣಿಗೆ ಕ್ರಮ ಕ್ರಮವಾಗಿ ವಿವಾಹಯೋಗ್ಯವಾದ ವಯಸ್ಸು ಬಂದಿತು. ಈ ಕತ್ಯೆಯು ಆ ಗಾಗ ತನ್ನ ಮನೆಗೆ ಬಂದು ಹೋಗತಕ್ಕವರ ಮೂಲಕವಾಗಿ ಶ್ರೀ ಕೃಷ್ಣನ ರೂಪವೀರಗುಣಾಧಿಗಳನ್ನು ಕೇಳಿ, ಅವನೇ ತನಗೆ ತಕ್ಕ ಪತಿಯೆಂದು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಿದ್ದಳು. ಇದರಂತೆಯೇ ಅತ್ತಲಾಗಿ ಕೃಷ್ಣ ಕೂಡ, ವಿದರ್ಭನಗರದಿಂದ ಆಗಾಗ ಬರುತ್ತಿದ್ದವರಮೂಲಕವಾಗಿ ಆ ರುಕ್ಕಿ ಣಿಯ ಶೀಲಸ್ವಭಾವಗಳನ್ನೂ, ಶುಭಲಕ್ಷಣಗಳನ್ನೂ, ಬುಟ್ಟಿಚಾತುರವನ್ನೂ, ಔದಾಗ್ಯಾದಿಗಳನ್ನೂ ಕೇಳಿ, ಅವಳೇ ತನಗೆ ತಕ್ಕ ಪತ್ನಿ ಯೆಂದು ನಿಶ್ಚಯಿಸಿ ಕೊಂಡಿದ್ದನು. ಹೀಗೆ ರುಕ್ಕಿಣಿಗೂ, ಕೃಷ್ಣನಿಗೂ ಹುಟ್ಟಿದ ಪರಸ್ಪರಾನು ರಾಗವು, ಆ ರುಕ್ಕಿಣಿಯ ತಂದೆತಾಯಿಗಳಿಗೂ ತಿಳಿದುಬಂದಿತು. ಅವರೆಲ್ಲರೂ ಆಕೆಯನ್ನು ಕೃಷ್ಣನಿಗೇ ಕೊಡುವುದಾಗಿ ನಿಶ್ಚಯಿಸಿಕೊಂಡಿದ್ದರು. ಇಷ್ಯ ರಲ್ಲಿ ಚೇದಿದೇಶಾಧಿಪತಿಯಾದ ಶಿಶುಪಾಲನೆಂಬವನು, ಆ ಉದ್ದೇಶವನ್ನು ತಿಳಿದು, ಹೇಗಾದರೂ ಪ್ರಯತ್ನ ಮಾಡಿ ಆ ರುಸ್ಮಿಣಿಯನ್ನು ತಾನೇ ಮದಿವೆ ಯಾಗಬೇಕೆಂದು ಯತ್ನಿ ಸುತಿದ್ದನು. ರುಕ್ಕಿಣಿಯ ಸಹೋದರರಾದ ರುಕ್ಕಿ ಮೊದಲಾದವರೆಲ್ಲರೂ, ಕೃಷ್ಣನಮೇಲೆ ತಮಗಿದ್ದ ಸಹಜವಾದ ದ್ವೇಷ ದಿಂದ, ಶಿಶುಪಾಲನಿಗೇ ತಮ್ಮ ತಂಗಿಯನ್ನು ಕೊಡಿಸಬೇಕೆಂದು ತಂದೆಗೆ ದುರ್ಬೋಧನೆಯನ್ನು ಮಾಡುತಿದ್ದರು. ರುಕ್ಷ್ಮಿಣಿಯು ಈ ಸಂಗತಿ ಯನ್ನು ತಿಳಿದು, ಮನಸ್ಸಿನಲ್ಲಿ ಬಹಳವಾಗಿ ದುಃಖಿಸುತ್ತ, ತನಗೆ ಆಪ್ತನಾಗಿದ್ದ ಬ್ರಾಹ್ಮಣನೊಬ್ಬನನ್ನು ರಹಸ್ಯವಾಗಿ ಕರೆದು, ಅವನ ಮೂಲಕವಾಗಿ ಕೃಷ್ಣ