ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೫೨. | ದಶಮಸ್ಕಂಧವು. ೨೦೧೧ ನಿಗೆ ಕೆಲವುಮಾತುಗಳನ್ನು ಹೇಳಿ ಕಳುಹಿಸಿದಳು, ಒಡನೆಯೇ ಆ ಬ್ರಾಹ್ಮ ಇನು ದ್ವಾರಕಾಪುರಿಗೆ ಬಂದು, ಕೃಷ್ಣನ ಅರಮನೆಯ ದ್ವಾರಪಾಲಕರಿಗೆ ತನ್ನ ಪೂರೋತ್ತರಗಳನ್ನು ತಿಳಿಸಿದಮೇಲೆ, ಅವರು ಅಡ್ಡಿ ಮಾಡದೆ ಅವನನ್ನು ಒಳಕ್ಕೆ ಕಳುಹಿಸಿಕೊಟ್ಟರು. ಆ ಬ್ರಾಹ್ಮಣನು ಸುವರ್ಣಪೀಠದಮೇಲೆ ಕುಳಿತಿದ್ದ ಪುರಾಣಪುರುಷನಾದ ಶ್ರೀ ಕೃಷ್ಣನನ್ನು ಕಂಡೊಡನೆ, ಶ್ರೀ ಕೃ. ಏನು, ಥಟ್ಟನೆ ತನ್ನ ಸಿಂಹಾಸನದಿಂದ ಇದಿರೆದ್ದು ಬಂದು, ಅವನನ್ನು ಕೈಹಿಡಿದು ಕರೆದು, ತನ್ನ ಆಸನದಲ್ಲಿಯೇ ಕುಳ್ಳಿರಿಸಿ, ದೇವತೆಗಳು ತನ್ನನ್ನು ಪೂಜಿಸುವಂತೆ, ಅವನನ್ನು ಯಥಾವಿಧಿಯಾಗಿ ಸತ್ಕರಿಸಿ, ಅವನಿಗೆ ಮೃ ಪ್ಯಾನ್ನ ಭೋಜನವನ್ನು ಮಾಡಿಸಿದನು. ಆ ಬ್ರಾಹ್ಮಣನು ಭೋಜನವನ್ನು ಮಾಡಿ ಸುಖಾಸೀನನಾಗಿ ಕುಳಿತಿರುವಾಗ, ಕೃಷ್ಣನು, ಅವನ ಕಾಲುಗಳ ಮೈ ತುತ್ತ ಮೆಲ್ಲಗೆ ಹೀಗೆಂದು ಪ್ರಶ್ನೆ ಮಾಡುವನು. ಓ ಬ್ರಾಹ್ಮಣೋ ತಮಾ ! ನಿಮ್ಮಂಥವರು ಅತ್ಯಾಸೆಸಗೊಳಗಾಗದೆ, ವಿಷಯಾಭಿಲಾಷೆ ಯಿಂದ ತೊಳಲದೆ, ಪ್ರಯತ್ನವಿಲ್ಲದೆ ತಾನಾಗಿ ಬಂದುದರಲ್ಲಿ ತೃಪ್ತಿಯ ನ್ನು ಹೊಂದತಕ್ಕವರು ಯಾವಾಗಲೂ ಸಂತೋಷವೃತ್ತಿಯೇ ನಿಮ್ಮ ಧರ್ಮವು, ಲೋಕದಲ್ಲಿ ಸಜ್ಜನಸಮ್ಮತವಾದ ಧರ್ಮವೂ ಇದೇ, ಈ ನಿನ್ನ ಧರ್ಮವು ನಿರಪಾಯವಾಗಿ ನಡೆಯುತ್ತಿರುವುದಲ್ಲವೆ? ಬ್ರಾಹ್ಮಣನು ತನ್ನ ಶರೀರಪೋಷಣಮಾತ್ರಕ್ಕಾಗಿ ತನ್ನ ಪ್ರಯತ್ನವಿಲ್ಲದೆ ದೊರಕಿದುದ ರಲ್ಲಿ ತೃಪ್ತನಾಗಿ, ತನ್ನ ವರ್ಣಾಶ್ರಮಧರ್ಮಗಳನ್ನೂ ಅದರಿಂದಲೇ ನಡೆಸಿ ಕೊಂಡುಬರಬೇಕು. ನಿತ್ಯತೃಪ್ತಿಯೆಂಬ ಈ ಧರ್ಮವನ್ನು ದೃಢವಾಗಿ ಹಿಡಿ ದವಸಿಗೆ, ಸಮಸ್ತ ಪುರುಷಾರ್ಥಗಳೂ ಸಿದ್ಧಿಸಿದಂತೆಯೇಹೊರತು ಬೇರೆ ಯಲ್ಲ. ಆ ಮನಸ್ಸುಷಿಯೊಂದಿದ್ದರೆ ನಮ್ಮ ಪ್ರಯತ್ನವಿಲ್ಲದೆ ಸಮಸ್ಯ ಪುರುಷಾರ್ಥಗಳೂ ತಾನಾಗಿ ಕೈಗೂಡಿಬರುವುವು, ತೃಪ್ತಿಯಿಲ್ಲದಿದ್ದ ಮೇಲೆ ದೇವೇಂದ್ರನಾದರೂ ಇಹಲೋಕದಲ್ಲಿಯಾಗಲಿ, ಪರಲೋಕದಲ್ಲಿಯಾಗಲಿ ಸುಖವನ್ನು ಹೊಂದಲಾರನು. ಮನಸ್ಯಪ್ತಿಯಿದ್ದರೆ ದರಿದ್ರನಾದರೂ ನಿಶ್ಚಿಂತನಾಗಿ ಮಲಗುವನು, ಓ ಬ್ರಾಹ್ಮಣೋತ್ರಮಾ! ಇದ್ದುದರಲ್ಲಿ ತೃಪ್ತಿ ಹೊಂದಿ, ಪರೋಪಕಾರನಿರತರಾಗಿ, ಅಹಂಕಾರಮಮಕಾರಗಳನ್ನು ಬಿಟ್ಟು ,