ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೧೨ ಶ್ರೀಮದ್ಭಾಗವತವು [ಅಧ್ಯಾ, ೫೨. ಸಮಸ್ತಭೂತಗಳಲ್ಲಿಯೂ ಸೌಹಾರ್ದವನ್ನು ತೋರಿಸತಕ್ಕ ನಿನ್ನಂತಹ ಸಾಧುಗಳನ್ನೇ ನಾನು ಪರದೈವವೆಂದು ಭಾವಿಸುವೆನು, ನಾನು ಅವರ ಪಾದಗಳನ್ನು ಹಿಡಿದು ಬಾರಿಬಾರಿಗೂ ನಮಸ್ಕರಿಸುವೆನು, ಓ ಸಾಧುತಿರೋ ಮಣೀ ! ನಿನಗೆ ಕ್ಷೇಮವನ್ನೈ ? ನಿಮ್ಮ ರಾಜನು ನಿಮ್ಮನ್ನು ಸುಖವಾಗಿ ಪೋ ಷಿಸುವನಷ್ಮೆ ? ಯಾವ ರಾಜನು ಧರ್ಮಪರಿಪಾಲನದಿಂದ ತನ್ನ ದೇಶದ ಪ್ರಜೆಗಳೆಲ್ಲರನ್ನೂ ಕೇಮದಿಂದ ನೋಡುತ್ತಿರುವನೋ, ಅಂಥವನೇ ನನಗೆ ಪರಮಪ್ರಿಯನು. ಅದು ಹಾಗಿರಲಿ! ನಿನ್ನ ದೇಶವಾವುದು? ಯಾವ ಉದ್ದೇಶ ದಿಂದ ಈ ಸಮುದ್ರದುರ್ಗವನ್ನು ದಾಟಿ ಇಲ್ಲಿಗೆ ಬಂದಿರುವೆ ? ನನಗೆ ತಿಳಿಸ ಬಹುದಾದಪಕ್ಷದಲ್ಲಿ, ಮುಚ್ಚುಮರೆಯಿಲ್ಲದೆ ನಿನ್ನ ಉದ್ದೇಶವನ್ನು ನಿಸ್ಸಂ ಕೋಚವಾಗಿ ತಿಳಿಸು. ನನ್ನನ್ನು ನಿನ್ನ ಕಿಂಕರನನ್ನಾಗಿ ತಿಳಿದು ನನ್ನಿಂದಾಗ ಬೇಕಾದ ಕಾವ್ಯವನ್ನು ಹೇಳು” ಎಂದನು. ಲೀಲಾಮಾನುಷರೂಪಿಯಾದ ಕೃಷ್ಣನು ಹೀಗೆ ವಿನಯದಿಂದ ಪ್ರಶ್ನೆ ಮಾಡಲು, ಆ ಬ್ರಾಹ್ಮಣನು ತಾನು ಬಂದ ಉದ್ದೇಶವೆಲ್ಲವನ್ನೂ ಅವನಿಗೆ ತಿಳಿಸತೋಡಗಿ,«ಓ ಪುರುಷೋತ್ತಮಾ! ರುಕ್ಕಿಣೀದೇವಿಯು ನಿನಗೆ ಕೆಲವು ಮಾತುಗಳನ್ನು ಹೇಳಿಬರುವಂತೆ ನನ್ನನ್ನು ಕಳುಹಿಸಿರುವಳು. ಅದನ್ನು ಕೇಳಿ ನೀನು ಉಚಿತರೀತಿಯಲ್ಲಿ ನಡೆಸಬಹುದು. ಇದೋ!ಅವಳು ಈ ಪತ್ರಿಕೆಯನ್ನು ಬರೆದು ಕಳುಹಿಸಿರುವಳು"ಎಂದು ಹೇಳಿ, ತನ್ನ ಕೈಯಲ್ಲಿದ್ದ ಪತ್ರವನ್ನು ಕೃಷ್ಣನ ಪಾದಗಳ ಮೇಲಿಟ್ಟು ನಮಸ್ಕರಿಸಿ ದನು. ಕೃಷ್ಣನು ಸಂತೋಷದಿಂದ ಆ ಪತ್ರವನ್ನು ಕೈಗೆ ತೆಗೆದುಕೊಂಡು, ಅದನ್ನೋದಿ ಹೇಳುವಂತೆ ಆ ಬ್ರಾಹ್ಮಣನ ಕೈಯಲ್ಲಿಯೇ ಕೊಟ್ಟು, ತಾನು ಆತ್ಯಾದರದಿಂದ ಅದನ್ನು ಕಿವಿಗೊಟ್ಟು ಕೇಳುತ್ತಿದ್ದನು. ಆಗ ಬ್ರಾಹ್ಮಣನು ಆ ಪತ್ರವನ್ನು ಹೀಗೆಂದು ವಾಚಿಸುವನು. «ಓ ಲೋಕಸುಂದರಾ! ನಿನ್ನ ಗುಣಗಳು, ಆದರದಿಂದ ಕೇಳತಕ್ಕವರ ಕರ್ಣರಂಧ್ರಗಳಮೂಲಕವಾಗಿ ಹೃದಯದಲ್ಲಿ ಪ್ರವೇಶಿಸಿ, ಅವರ ಆಧ್ಯಾತ್ಮಿ ಕಾದಿತಾಪಗಳೆಲ್ಲವನ್ನೂ ಪರಿಹರಿಸುವುದು, ಅಂತಹ ನಿನ್ನ ಸುಗುಣಗಳನ್ನೂ, ನೋಡತಕ್ಕವರ ಕಣ್ಣುಗಳಿಗೆ ಸಾರ್ಥಪ್ರದವಾದ ನಿನ್ನ ರೂಪಸಂಪತ್ತಿ ಯನ್ನೂ ಕೇಳಿ, ನನ್ನ ಮನಸ್ಸು ನಾಚಿಕೆಯಿಲ್ಲದೆ ನಿನ್ನನ್ನು ಬಯಸುತ್ತಿರುವು