ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೧೪ ಶ್ರೀಮದ್ಭಾಗವತವು [ಅಧ್ಯಾ, ೫೨. ಕೃಷ್ಣಾ! ಈಗಲೂ ಕಾರವು ಮಿಂಚಿ ಹೋಯಿತೆಂದು ತಿಳಿಯಬೇಡ! ನನ್ನ ಬಂಧುಗಳು ನನ್ನನ್ನು ಶಿಶುಪಾಲನಿಗೆ ಕೊಡುವುದಾಗಿಯೇ ನಿಶ್ಚಯಿ ಸಿದ್ದರೂ, ಆ ಕಾರವು ನಾಳೆ ನಡೆಯಬೇಕಾಗಿರುವುದು, ಅಷ್ಟರೊಳಗಾಗಿ ನೀನು ನಿನ್ನ ಸೇನಾಬಲದೊಡನೆ, ಇಲ್ಲಿಗೆ ರಹಸ್ಯವಾಗಿ ಬಂದು, ನಿನ್ನ ಪರಾ ಕ್ರಮವನ್ನೇ ಕನ್ಯಾಶುಲ್ಕವನ್ನಾಗಿಟ್ಟು, ರಾಕ್ಷಸವಿವಾಹವಿಧಿಯಿಂದ ನನ್ನನ್ನು ಕರೆದುಕೊಂಡು ಹೋಗಿ, ಇದೇನೆವದಲ್ಲಿ ಆ ಶಿಶುಪಾಲಾದಿಗಳ ಬಲವನ್ನೂ ಮುರಿಯಬಹುದು. (ಅಂತಃಪುರದಲ್ಲಿ ಬಂಧುಗಳನಡುವೆ ಇರುವ ನಿನ್ನನ್ನು ಸಾಗಿಸಬೇಕಾ. ದರೆ, ನಿನ್ನ ತಂದೆತಾಯಿಗಳೊಡನೆಯೇ ನಾನು ಮೊದಲು ಯುದ್ಧಕ್ಕೆ ನಿಲ್ಲ ಬೇಕಾಗುವುದಲ್ಲವೆ?” ಎಂದು ನೀನು ಶಂಕಿಸಬೇಡ. ಅದಕ್ಕೆ ತಕ್ಕ ಉಪಾಯ ವನ್ನೂ ತಿಳಿಸುವೆನು. ವಿವಾಹಕ್ಕೆ ಮೊದಲು ದಿನದಲ್ಲಿ ಮದವಣಗಿತ್ತಿಯನ್ನು ಕುಲದೇವತಾಸಾನ್ನಿಧ್ಯಕ್ಕೆ ಪೂಜಾರ್ಥವಾಗಿ ಕರೆದುಕೊಂಡು ಹೋಗುವುದು ನಮ್ಮಲ್ಲಿ ಪೂರಾಚಾರದಿಂದ ಬಂದ ಪದ್ಧತಿಯಾಗಿರುವುದು, ಅದಕ್ಕಾಗಿ ನಾನು ನಮ್ಮ ಪಟ್ಟಣದ ಹೊರಗಿರುವ ಅಂಬಿಕಾದೇವಿಯ ದರ್ಶನಕ್ಕಾಗಿ ಹೊರಡುವೆನು. ಆ ಅಂಬಿಕಾಲಯದಿಂದಲೇ, ನೀನು ನನ್ನನ್ನು ಸುಲಭವಾಗಿ ಕರೆದುಕೊಂಡು ಹೋಗಬಹುದು. ಕೃಷ್ಣಾ ! ಇನ್ನು ಹೆಚ್ಚು ಮಾತಿನಿಂದೇನು ? ಪರಮೇಶ್ವರನಾದ ರುದ್ರನು ಮೊದಲುಗೊಂಡು, ಮಹಾತ್ಮರೆಲ್ಲರೂ ತಮ್ಮ ಅಜ್ಞಾನನಿವೃತ್ತಿ ಗಾಗಿ ಯಾವನ ಪಾದಧೂಳಿಯನ್ನು ಶಿರಸಾಧಾರಣಮಾಡಬೇಕೆಂದು ಬಯ ಸುವರೋ, ಅಂತಹ ಮಹಾಮಹಿಮೆಯುಳ್ಳ ನೀನು ಈ ವಿಷಯದಲ್ಲಿ ನನ್ನನ್ನು ಅನುಗ್ರಹಿಸದಿದ್ದರೆ, ನಾನು ಉಪವಾಸಾದಿವ್ರತಗಳಿಂದ ಈ ದೇ ಹವನ್ನು ದಂಡಿಸಿ, ಪ್ರಾಣತ್ಯಾಗವನ್ನು ಮಾಡುವುದೇ ನಿಜವು, ಹಾಗೆಯೇ ನೂರಾರುಜನ್ಮಗಳನ್ನೆತ್ತಿದಮೇಲೆಯಾದರೂ ನಿನ್ನನ್ನೇ ಮದುವೆಯಾಗು ವೆನು”, ಮೇಲೆ ಹೇಳಿದ ಈ ಲೇಖನವನ್ನೋದಿದಮೇಲೆ ಆ ಬ್ರಾಹ್ಮಣನು ಕೃಷ್ಣನನ್ನು ಕುರಿತು, ಓ ಯದುನಾಥಾ!ರುಕ್ಕಿಣಿಯು ನಿನಗೆ ರಹಸ್ಯವಾಗಿ ಹೇಳಿ ಕಳುಹಿಸಿರುವ ಮಾತುಗಳೂ ಇಷ್ಟೆ?ಇವುಗಳನ್ನು ನಿನಗೆ ತಿಳಿಸಿರು