ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೧೫ ಅಧ್ಯಾ, ೫೩.] ದಶಮಸ್ಕಂಧವು. ವೆನು. ಮುಂದೆ ನಡೆಸಬೇಕಾದ ಕಾಕ್ಯವೇನೆಂಬುದನ್ನು ನಿನೇ ಯೋಚಿಸ ಬೇಕು, ಆದರೆ ನಡೆಸಬೇಕಾದ ಕಾರವನ್ನು ವಿಳಂಬವಿಲ್ಲದೆ ತ್ವರೆಯಿಂದ ನಡೆಸಬೇಕು” ಎಂದನು, ಇದ ++ುಕ್ಕಿಣೇಕಲ್ಯಾಣವು ww ಹೀಗೆ ರುಕ್ಕಿಣಿಯು ಹೇಳಿ ಕಳುಹಿಸಿದ ಸಂದೇಶವನ್ನು ಕೇಳಿದೊಡನೆ, ಕೃಷ್ಣನು ಆ ಬಾಹ್ಮಣನ ಕೈಯನ್ನು ಹಿಡಿದುಕೊಂಡು, ಮಂದಹಾಸದೊಡನೆ ಅವನನ್ನು ಕುರಿತು ಓ ವಿಪ್ರೋತ್ತಮಾ ! ಆ ರುಕ್ಷ್ಮಿಣಿಯು ನನ್ನಲ್ಲಿ ಹೇಗಿ ರುವಳೋ, ಹಾಗೆಯೇ ನಾನೂ ಅವಳಲ್ಲಿ ನಟ್ಟ ಮನಸ್ಸುಳ್ಳವನಾಗಿರುವೆನು. ಅಷ್ಟೇಕೆ ! ಅವಳ ಚಿಂತೆಯಿಂದ ಹಗಲುರಾತ್ರಿಯೂ ನನಗೆ ನಿದ್ರೆ. ಯೂ ಬಾರದು.ಅವಳ ಅಣ್ಣನಾದ ರುಕ್ಕಿಯು ನನ್ನಲ್ಲಿ ದ್ವೇಷವನ್ನಿಟ್ಟು ನನ್ನ ವಿವಾಹಕ್ಕೆ ಅಡ್ಡಿ ಮಾಡುವ ಯತ್ನ ದಲ್ಲಿರುವುದನ್ನೂ ನಾನು ಬಲ್ಲೆನು, ಆದ ರೇನು? ಆರಣಿಯನ್ನು ಭೇದಿಸಿ, ಪವಿತ್ರವಾದ ಆಗಿತಿಖೆಯನ್ನು ಪಡೆಯುವಂತೆ, ಆ ದುಷ್ಪಕ್ಷತ್ರಿಯರನ್ನ ಡಗಿಸಿ ಅವಳನ್ನು ನಾನೇ ಸಾಧಿಸಿಕೊಂಡು ಬರುವೆ. ನು” ಎಂದನು. ಆಗ ಮತ್ತೊಮ್ಮೆ ಕೃಷ್ಣನು ರುಕ್ಕಿಣಿಯ ವಿವಾಹಲಗ್ನವ ನ್ನು ಆ ಬ್ರಾಹ್ಮಣನಿಂದ ನಿರ್ಧರವಾಗಿ ತಿಳಿದುಕೊಂಡು, ಆಗಲೇ ತನ್ನ ಸಾ ರಥಿಯಾದ ದಾರುಕನನ್ನು ಕುರಿತು, ರಥವನ್ನು ಸಿದ್ಧಪಡಿಸುವಂತೆ ಆಜ್ಞೆ ಮಾ. ಡಿದನು. ಒಡನೆಯೇ ಮಾರುಕನು, ಸೈನ್ಯ, ಸುಗ್ರೀವ, ಮೇಘಪುಷ್ಟ, ವಲಾ ಹಕಗಳೆಂಬ ನಾಲ್ಕು ಕುದುರೆಗಳಿಂದ ಕೂಡಿದ ರಥವನ್ನು ಸಿದ್ಧಪಡಿಸಿ ತಂ ದು, ಕೃಷ್ಣನಮುಂದೆ ಕೈಮುಗಿದು ವಿಜ್ಞಾಪಿಸಿದನು. ಆಗ ಕೃಷ್ಣನು ಆ ರಥ ವನ್ನೇರಿ, ಆ ಬ್ರಾಹ್ಮಣನನ್ನೂ ಕರೆದು ಕುಳ್ಳಿರಿಸಿಕೊಂಡು,ಅನರ್ತದೇಶದಿಂದ ಅದೇರಾತ್ರಿ ವಿದರ್ಭನಗರಕ್ಕೆ ಬಂದುಸೇರಿದನು ಅತ್ತಲಾಗಿ ಕುಂಡಿನಪತಿಯಾ ದ ಭೀಷ್ಮಕನೂಕೂಡ, ತನ್ನ ಮಕ್ಕಳಲ್ಲಿರುವ ಮೋಹದಿಂದ ಅವರ ಮಾತ ನ್ನು ಮೀರಲಾರದೆ, ತನಗೆ ಇಷ್ಟವಿಲ್ಲದಿದ್ದರೂ, ತನ್ನ ಮಗಳನ್ನು ಶಿಶುಪಾ ಲನಿಗೇ ಮದಿವೆಮಾಡಿಕೊಡುವುದಾಗಿ ನಿಶ್ಚಯಿಸಿ, ಅದಕ್ಕೆ ತಕ್ಕ ಸನ್ನಾ ಹಗಳ ನ್ನು ಸಿದ್ಧಪಡಿಸಿದ್ದನು. ಆ ಪಟ್ಟಣದ ಬೀದಿಗಳೂ, ರಾಜಮಾರ್ಗಗಳೂ, ಅ೦.