ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೮೬ ಅಧ್ಯಾ, ೫೩.] ದಶಮಸ್ಕಂಧವು. ಲಾದ ಶಿಶುಪಾಲನ ಪಕ್ಷವನ್ನು ವಹಿಸಿದ್ದ ರಾಜರೆಲ್ಲರೂ, ಅಪಾರವಾದ ತಮ್ಮ ತಮ್ಮ ಸೈನ್ಯಗಳನ್ನು ಸೇರಿಸಿಕೊಂಡು, ಕೃಷ್ಣನಮೇಲೆ ಬದ್ಧದ್ವೇಷವುಳ್ಳವ ರಾಗಿ, ಆ ಶಿಶುಪಾಲನಿಗೆ ಬೆಂಬಲವಾಗಿ ನಿಂತಿದ್ದರು. ಈ ರಾಜರೆಲ್ಲರೂ ರುಕ್ಕಿ ಣಿಯನ್ನು ಹೇಗಾದರೂ ಶಿಶುಪಾಲನಿಗೇ ವಿವಾಹಮಾಡಿಸಬೇಕೆಂಬ ದೃ ಢಪ್ರಯತ್ನವುಳ್ಳವರಾಗಿ, ಎಲ್ಲರೂ ಒಂದುಕಡೆಯಲ್ಲಿ ಸೇರಿಹೀಗೆಂದು ಮಂತ್ರಾ ಲೋಚನೆಯನ್ನು ಮಾಡಿದರು. « ಓ ಮಿತ್ರರೇ! ಈ ಸಮಯದಲ್ಲಿ ಕೃಷ್ಣ ನು, ಬಲರಾಮನೇ ಮೊದಲಾದ ಯದುವೀರರೊಡನೆ ಬಂದು, ಬಲಾತ್ಕಾರ ದಿಂದ ರುಕ್ಕಿಣಿಯನ್ನು ಅಪಹರಿಸಿಕೊಂಡುಹೋದರೂ ಹೋಗಬಹುದು. ಆಗ ನಾವೆಲ್ಲರೂ ಬಹಳ ಎಚ್ಚರಿಕೆಯಿಂದ ಅವರೊಡನೆಯುದ್ಧಮಾಡಬೇಕು.” ಎಂದು ನಿಶ್ಚಯಿಸಿ ಸಿದ್ಧರಾಗಿದ್ದರು. ಇದರಂತೆಯೇ ಇನ್ನೂ ಅನೇಕರಾಜ ರು ತಮ್ಮ ಸೈನ್ಯಗಳೊಡನೆ ಸಿದ್ಧರಾಗಿ ಬಂದಿದ್ದರು, ಇಷ್ಟರಲ್ಲಿ ಬಲರಾಮನಿ ಗೂ ಈ ಸಂಗತಿಯು ತಿಳಿಯಿತು. ಆ ಕನೈಯನ್ನು ಸಾಧಿಸಿ ತರುವುದಕ್ಕಾಗಿ ಕೃಷ್ಣನು ತಾನೊಬ್ಬನೇ ಹೋಗಿರುವನೆಂಬ ಸಂಗತಿಯೂ ಅವನ ಕಿವಿಗೆ ಬಿದ್ದಿ ತು. ಹೇಗಿದ್ದರೂ ಅಲ್ಲಿ ದೊಡ್ಡ ಯುದ್ಧವು ನಡೆಯುವುದೆಂದು ಶಂಕಿಸಿ, ಕೈ ಹೃನಲ್ಲಿ ತನಗಿರುವ ಸ್ನೇಹದಿಂದ ಉದಾಸೀನನಾಗಿರಲಾರದೆ, ದೊಡ್ಡ ಚತು ರಂಗಸೈನ್ಯವನ್ನು ಸೇರಿಸಿಕೊಂಡು ಕುಂಡಿನಪುರಕ್ಕೆ ಹೋದನು. ಇಷ್ಟರಲ್ಲಿ ಅತ್ತಲಾಗಿ ರುಕ್ಕಿಣಿಗಾದರೋ ಕ್ಷಣಕ್ಷಣಕ್ಕೂ ಮನಸ್ಸಿನಲ್ಲಿ ಆತುರವು ಹೆಚ್ಚು ಇಬಂದಿತು. ವಿವಾಹಕಾಲವು ಸಮೀಪಿಸಿತು. ಕೃಷ್ಣನಾಗಲಿ, ತಾ ನು ಕಳುಹಿಸಿದ ಬ್ರಾಹ್ಮಣನಾಗಲಿ ಅದುವರೆಗೆ ಬಾರದಿದ್ದದನ್ನು ನೋಡಿ, ತನ್ನಲ್ಲಿ ತಾನು ಅಕಟಾ! ಇನ್ನೇನು ಗತಿ! ಮಂದಭಾಗ್ಯಯಾದ ನನಗೆ ನಾಳೆ ವಿವಾಹವು ನಿಶ್ಚಿತವಾಗಿರುವುದು.ನಡುವೆ ಒಂದೇರಾತ್ರಿಯು ಉಳಿದಿರುವುದು. ಆ ಪುಂಡರೀಕಾಕ್ಷನು ಇದುವರೆಗೆ ಬಾರದಿರುವುದಕ್ಕೆ ಕಾರಣವೇನೋ ತಿಳಿ ಯದಲ್ಲಾ ! ನಾನು ಕಳುಹಿಸಿದ ಬ್ರಾಹ್ಮಣನೂ ಇನ್ನೂ ಹಿಂತಿರುಗಿಬರಲಿಲ್ಲ. ವಲ್ಲಾ! ಈಗ ನಾನೇನುಮಾಡಲಿ! ನಿರ್ದುಷ್ಟಹೃದಯನಾದ ಆ ಕೃಷ್ಣನು ನನ್ನಲ್ಲಿ ಯಾವುದಾದರೂ ದೋಷವನ್ನು ಕಂಡು ನನ್ನನ್ನು ವರಿಸುವುದಕ್ಕೆ ಇ ಹ್ಯವಿಲ್ಲದಿರುವನೋ!ಅಥವಾ ದುರ್ಭಾಗಿನಿಯಾದ ನನಗೆ ದೈವವು ಅನುಕೂ