ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೧೮ ಶ್ರೀಮದ್ಭಾಗವತವು - [ಅಥಾ, ೫೩. ಲವಾಗಿಲ್ಲವೋ! ಆ ಪಾಶ್ವತೀದೇವಿಯು ನನ್ನಲ್ಲಿ ವಿಮುಖಳಾಗಿರುವಳೋ!ನಿಜ ಸ್ಥಿತಿಯೇನೋ ತಿಳಿಯಲಿಲ್ಲವಲ್ಲಾ” ಎಂದು ಧಾರೆಧಾರೆಯಾಗಿ ಕಣ್ಣೀ ರುಸುರಿಸಿ ಅಳುವುದಕ್ಕೂ ತೊಡಗಿದಳು. ಇಷ್ಟರಲ್ಲಿ ಅವಳ ಇಷ್ಟಸಿದ್ಧಿಯ ನ್ನು ಸೂಚಿಸುವಂತೆ, ಆಕೆಯ ಎಡದ ಭುಜವೂ, ಎಡದ ತೊಡೆಯೂ ಅದಿರಿತು. ಆಸಮಯಕ್ಕೆ ಸರಿಯಾಗಿ, ಅವಳು ಕಳುಹಿಸಿದ್ದ ಬ್ರಾಹ್ಮಣನೂ ಬಂದುಸೇರಿ ದನು. ಇಂಗಿತಜ್ಞಳಾದ ರುಕ್ಕಿಣಿಯ ಉಲ್ಲಾಸಗೊಂಡ ಅವನ ಮುಖಲಕ್ಷ ಣದಿಂದಲೇ ತನ್ನ ಕಾಠ್ಯಸಿದ್ಧಿಯಾಗಿರಬಹುದೆಂದು ತಿಳಿದು,ಸಂತೋಷದಿಂದ ಮುಖದಲ್ಲಿ ಮಂದಹಾಸವನ್ನು ಬೀರುತ್ತ, ಅವನು ಹೋಗಿ ಬಂದ ವೃತ್ತಾಂ ತಗಳೆಲ್ಲವನ್ನೂ ಕೇಳಿದಳು. ಆ ಬ್ರಾಹ್ಮಣನೂಕೂಡ ಕೃಷ್ಣನಿಗೂ, ತನಗೂ ನಡೆದಸಂಭಾಷಣೆಗಳನ್ನೆಲ್ಲಾ ಆಮೂಲಾಗ್ರವಾಗಿ ತಿಳಿಸಿ,ರಾಮಕೃಷ್ಣರಿಬ್ಬರೂ ಸಿದ್ಧರಾಗಿ ಬಂದಿರುವುದನ್ನೂ ,ಕೃಷ್ಣನು ಆಕೆಯನ್ನ ಪಹರಿಸಿಕೊಂಡು ಹೋ ಗುವುದಾಗಿ ಸಂಕಲ್ಪಿಸಿರುವುದನ್ನೂ ಸೂಚಿಸಿದನು. ಈ ಪ್ರಿಯವಾಕ್ಯವನ್ನು ಕೇಳಿದೊಡನೆ ರುಕ್ಕಿಣಿಗೆ ಮೈಯೆಲ್ಲವೂ ಪುಳುಕಿತವಾಗಿ,ಇಂತಹಪ್ರಿಯವಾಕ್ಯ ವನ್ನು ತಂದ ಬ್ರಾಹ್ಮಣನಿಗೆ ತಕ್ಕ ಬಹುಮಾನವೇನೆಂದು ತಿಳಿಯದೆ, ಅವನಿಗೆ ಸುಮ್ಮನೆ ಕೈಮುಗಿದು ನಮಸ್ಕರಿಸಿ ಬಿಟ್ಟಳು. ಇಷ್ಟರಲ್ಲಿ ಭೀಘ್ರಕನಿಗೂ, ರಾಮಕೃಷ್ಣರು ಬಂದಿರುವರೆಂಬ ವೃತ್ತಾಂತವು ತಿಳಿಯಿತು. ಆತನು ಬಹಳ ಸರಳಹೃದಯನಾದುದರಿಂದ, ಅವರೂ ತನ್ನ ಮಗಳ ಮದಿವೆಯನ್ನು ನೋಡು ವುದಕ್ಕಾಗಿ, ಬಂದಿರುವರೆಂದೆಣಿಸಿ, ಅನೇಕವಾದ್ಯ ಘೋಷದೊಡನೆ ಅವರ ದಿರುಗೊಂಡು, ತಕ್ಕಸತ್ಕಾರಗಳಿಂದ ಪೂಜಿಸಿ,ಮಧುಪರ್ಕವನ್ನೂ, ವಸ್ತಾಭ ರಣಗಳನ್ನೂ ,ಅವರಿಗೆ ಇಷ್ಟವಾದ ಇತರವಸ್ತುಗಳನ್ನೂ ಒಪ್ಪಿಸಿ ಸತ್ಕರಿಸಿದ ನು, ರಾಮಕೃಷ್ಣರಿಗೂ, ಅವರ ಸೈನ್ಯಗಳಿಗೂ, ಅವರ ಅನುಚರರಿಗೂ, ಸಕಲವಸ್ತುಸಮೃದ್ಧವಾದ ಬಿಡದಿಗಳನ್ನು ಮಾಡಿಕೊಟ್ಟನು. ಹೀಗೆಯೇ ತನ್ನ ಮಗಳ ವಿವಾಹಕ್ಕಾಗಿ ಬಂದಸಮಸ್ತರಾಜರಿಗೂ, ಆವರವರ ಪರಾಕ್ರಮ ಕ್ಯೂ, ವಯಸ್ಸಿಗೂ, ಸೇನಾಬಲಕ್ಕೂ, ಅವರವರ ಯೋಗ್ಯತೆಗಳಿಗೂ ತಕ್ಕ ಸಾಮಗ್ರಿಗಳನ್ನೊದಗಿಸಿಕೊಟ್ಟು ಪೂಜಿಸಿದನು. ಕೃಷ್ಣಾಗಮನವನ್ನು ಕೇಳಿದೊಡನೆ, ಆವಿದರ್ಭಪುರದ ಸಮಸ್ತ ಜನರೂ, ಆತನ ಮುಖಾರವಿಂದ