ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೫೩.]. ದಶಮಸ್ಕಂಧವು. ೨೧೧೯ ಮಕರಂದವನ್ನು ನೇತ್ರಾಂಜಲಿಗಳಿಂದ ತೃಪ್ತಿಯಿಲ್ಲದೆ ಪಾನಮಾಡುತ್ತ, ತಮ್ಮಲ್ಲಿ ಒಬ್ಬರಿಗೊಬ್ಬರು ನಮ್ಮ ರುಸ್ಮಿಣಿಯು ಈ ಕೃಷ_ನಿಗೇ ತಕ್ಕ ಪ ತ್ರಿ! ಈ ಕೃಷ್ಣನೇ ನಮ್ಮ ರುಕ್ಕಿಣಿಗೆ ತಕ್ಕ ವರನು.ಆದರೇನು?ಈಗ ಅನ್ಯಾಯ ವಾಗಿ ನಮ್ಮ ರಾಜಕನ್ಯಯು ನೀಚನಾದ ಆ ಶಿಶುಪಾಲನ ಕೈಗೆ ಸಿಕ್ಕಿಬೀಳು ವಳು ಮಾಡುವುದೇನು? ಪೂರೈಜನ್ಮದಲ್ಲಿ ನಾವೇನಾದರೂ ಸತ್ಕಾರಗಳ ನ್ನು ನಡೆಸಿದ್ದರೆ,ಅದರಿಂದ ಲೋಕಕರ್ತನಾದ ಭಗವಂತನು ನಮ್ಮಲ್ಲಿ ಸಂತು ವ್ಯನಾಗಿದ್ದರೆ, ಆ ಕೃಷ್ಣನೇ ರುಕ್ಕಿಣಿಯನ್ನು ಕೈಹಿಡಿಯುವಂತೆ ಭಗವಂತ ನು ನಮ್ಮಲ್ಲಿ ಅನುಗ್ರಹವನ್ನು ತೋರಿಸಲಿ” ಎಂದು ಆನಂದಬಾಷ್ಪವನ್ನು ಸುರಿಸುತ್ತ ಗುಸುಗುಟ್ಟುತ್ತಿದ್ದರು. ಹೀಗೆ ಸಕಲಸನ್ನಾ ಹಗಳೂ ಸಿದ್ಧವಾದ ಮೇಲೆ, ಮದುಮಗಳಾದ ರುಕ್ಕಿಣಿಯು ಅಂಬಿಕಾಲಯದಲ್ಲಿ ಪಾಶ್ವತೀಪೂಜೆ ಗಾಗಿ ಅಂತಃಪುರದಿಂದ ಕಾಲುನಡೆಯಾಗಿಯೇ ಕೊರಟಳು, ಅನೇಕರಾಜಭ ಟರು ಖಡ್ಡ ಪಾಣಿಗಳಾಗಿ ಬರುತ್ತಿದ್ದರು, ರುಕ್ಷ್ಮಿಣಿಯು ದಾರಿಯುದ್ದಕ್ಕೂ ಆ ಕೃಷ್ಣನ ಮುಖಸೌಂದಠ್ಯವನ್ನೇ ಧ್ಯಾನಿಸುತ್ತ ಬರುತ್ತಿದ್ದಳು. ಆಕೆ ಯನ್ನು ಮುಂದೆ ಬಿಟ್ಟು ಕೊಂಡು ತಂದೆತಾಯಿಗಳೂ ಹಿಂಬಾಲಿಸುತಿದ್ದ ರು, ಮುಂದೆ ಮೃದಂಗ, ಶಂಖ, ಪಣವ, ತೂಲ್ಯ, ಭೇರಿ, ಮೊದಲಾದ ಮಂಗಳವಾದ್ಯಗಳು ಮೊಳಗುತಿದ್ದುವು. ಮತ್ತು ಬಗೆಬಗೆಯ ನೈ ವೇದ್ಯಗಳನ್ನೂ , ಪೂಜಾಸಾಮಗ್ರಿಗಳನ್ನೂ ಕೈಯಲ್ಲಿ ಹಿಡಿದು, ಕೆಲವು ಮಂ ದಿ ವಾರಾಂಗನೆಯರು ಬರುತಿದ್ದರು. ಅನೇಕಬ್ರಾಹ್ಮಣಸಿಯರು, ಚೆನ್ನಾ ಗಿ ಮೈಯನ್ನಲಂಕರಿಸಿಕೊಂಡು, ಹೂ, ಗಂಧ, ವಸ್ತ್ರ, ಆಭರಣ, ಮೊದಲಾ ದುವುಗಳನ್ನು ತಟ್ಟೆಯಲ್ಲಿಟ್ಟುಕೊಂಡು ಬರುತಿದ್ದರು. ರುಕ್ಷ್ಮಿಣಿಯು ಹೊರ ಟುಬರುವಾಗ,ಅವಳಮುಂದೆ ಗಾಯಕರು ಗಾನಮಾಡುತಿದ್ದರು.ವಂದಿಗಳೂ ಮಾಗಧರೂ, ಸೂತರೂ ಸ್ತುತಿಸುತಿದ್ದರು, ವಾದ್ಯಗಾರರು ವಾದ್ಯಗಳನ್ನು ನುಡಿಸುತಿದ್ದರು. ಇಂತಹ ಸಕಲವೈಭವಗಳೊಡನೆ, ರುಕ್ಕಿಣಿಯು ಊರಹೊ ನಗಿನ ಅಂಬಿಕಾದೇವಾಲಯಕ್ಕೆ ಬಂದು ಸೇರಿದಳು. ಆ ದೇವಾಲಯದ ಬಾಗಿ ಲಲ್ಲಿ ಕೈ ಕಾಲುಗಳನ್ನು ತೊಳೆದುಕೊಂಡು, ಆಚಮನವನ್ನು ಮಾಡಿ ಶುಚಿ ಯಾಗಿ, ಆಪಾಶ್ವತಿದೇವಿಯನ್ನೇ ಮನಸ್ಸಿನಲ್ಲಿ ನಿಶ್ಚಲವಾಗಿ ಧ್ಯಾನಿಸುತ್ತ 134 B.