ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧:೦ ಶ್ರೀಮದ್ಭಾಗವತವು [ಅಧ್ಯಾ, ೫೩. ದೇವತಾಸಾನ್ನಿಧ್ಯಕ್ಕೆ ಹೋದಳು. ಆಗ ವೈದ್ಯರಾದ ಬ್ರಾಹ್ಮಣಸುಮಂಗ ಲಿಯರೂ, ಪೂಜಾಸಂಪ್ರದಾಯವನ್ನು ತಿಳಿದ ಮುತ್ತೈದೆಯರೂ ಮುಂದೆ ಬಂದು, ರುದ್ರನೊಡಗೂಡಿರುವ ಭವಾನೀದೇವಿಗೆ ನಮಸ್ಕಾರಮಾಡಿಸಿ, ವರ ಪ್ರಾರ್ಥನೆಯನ್ನು ಮಾಡುವಂತೆ ರುಕ್ಕಿಣಿಗೆ ಹೇಳಿದರು. ಆಗ ರುಕ್ಕಿಣಿಯು ಆದೇವಿ ಯಮುಂದೆ ಕೈಮುಗಿದು ನಿಂತು (t ಓ ದೇವಿ ! ಮಂಗಳಸ್ವರೂಪಿಣಿ! ನಿನಗೂ, ನಿನ್ನ ವಿನಾಯಕಾರಿಗಣಗಳಿಗೂ ನಮಸ್ಕರಿಸುವೆನು.” ಎಂದು ಹೇಳಿ ಮನಸ್ಸಿನಲ್ಲಿ ಓ ಜನನಿ! ನನಗೆ ಭಗವಂತನಾದ ಆ ಕೃಷ್ಣನೇ ಪತಿಯಾಗು ವಂತೆ ಅನುಗ್ರಹಿಸಬೇಕು” ಎಂದು ಪ್ರಾರ್ಥಿಸಿದಳು.ಹೀಗೆ ರುಕ್ಕಿಣಿಯು ಶಿವ ನನ್ನೂ, ಅಂಬಿಕಾದೇವಿಯನ್ನೂ ಪ್ರಾರ್ಥಿಸಿದಮೇಲೆ, ಬ್ರಾಹ್ಮಣಪತಿ ಯರ ನ್ನು ಮುಂದಿಟ್ಟುಕೊಂಡು, ವಿಧ್ಯುಕ್ತವಾದ ಪೂಜೆಗಳನ್ನು ನಡೆಸಿದಳು. ಹಾಗೆಯೇ ಶುದ್ಧ ಜಲದಿಂದ ಪಾಶ್ವತಿಪರಮೇಶ್ವರರಿಗೆ ಅಭಿಷೇಕವನ್ನೂ ನಡೆ ಸಿದಳು, ಧೂಪದೀಪಾದಿಗಳನ್ನು ಸಮರ್ಪಿಸಿದಳು, ಅಕ್ಷತೆ, ಗಂಧ, ವಸ್ತ್ರ, ಪುಷ್ಪಮಾಲಿಕೆ ಮುಂತಾದುವುಗಳಿಂದ ಆ ದೇವತಾಮೂರ್ತಿಯನ್ನು ಅಲಂ ಕರಿಸಿದಳು ನಾನಾಬಗೆಯ ಉಪಚಾರಗಳಿಂದ ಬಲಿಗಳನ್ನು ನಿವೇದನಮಾ ಡಿದಳು, ಮುತ್ತೈದೆಯರನ್ನು ಕರೆಸಿ ಬೇರೆಬೇರೆಯಾಗಿ ಆರತಿಯನ್ನೆ ತಿಸಿ ದಳು, ಆಮೇಲೆ ಅಲ್ಲಿಗೆ ಬಂದಿದ್ದ ಬ್ರಾಹ್ಮಣಸ್ತಿಯರೆಲ್ಲರಿಗೂ ಕ್ರಮವಾಗಿ ಫಲತಾಂಬೂಲಗಳನ್ನೂ, ಕಂಠಸೂತ್ರಗಳನ್ನೂ , ಕಬ್ಬಿನ ತುಂಡುಗಳನ್ನೂ, ಉಪ್ಪಹಾಕಿದ ತೊವ್ವ, ನೀರು, ಮುಂತಾದ ಉಪಹಾರಗಳನ್ನೂ ಕೊಟ್ಟು ಪೂಜಿಸಿದಳು. ಆ ಬ್ರಾಹ್ಮಣಸ್ತಿಯರೂಕೂಡ, ಅಂಬಿಕಾದೇವಿಗೆ ಧರಿಸಿದ. ಪುಷ್ಪಾದಿಗಳನ್ನು ರುಕ್ಷ್ಮಿಣಿಯ ಕೈಗೆ ಕೊಟ್ಟು, ಆಶೇರೂದಿಸಿದರು. ಆಮೇಲೆ ರುಕ್ಕಿಣಿಯು ವೃದ್ಧಸಿಯರಿಗೂ, ಅಂಬಿಕಾದೇವಿಗೂ ನಮಸ್ಕರಿಸಿ, ದೇವ ತಾಪ್ರಸಾದವನ್ನು ಕೈಯಲ್ಲಿಟ್ಟು ಕೊಂಡು, ಮನವ್ರತವನ್ನು ಬಿಟ್ಟು, ತನ್ನ ಗೌಡಿಯರ ಕೈಯನ್ನು ಹಿಡಿದುಕೊಂಡು,ಅಂಬಿಕಾಗೃಹದಿಂದ ಹೊರಗೆ ಬಂದ ಳು. ಆ ರಾಜಕುಮಾರಿಯು ಹಂಸದಂತೆ ಮಂದಗಮನದಿಂದ ನಡೆದು ಬರು ವಾಗ, ಅವಳ ಸೊಬಗನ್ನು ಕೇಳಬೇಕೆ! ದೇಹದ ಭಾರದಿಂದ ಮುರಿದುಬೀಳು ವಂತೆ ಅದಿರುತ್ತಿರುವ ಸಣ್ಣ ನಡು! ಮುಖಕ್ಕೆ ಮತ್ತಷ್ಟು ಕಳೆಯೇರಿಸುವಂತೆ