ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೨೨ ಶ್ರೀಮದ್ಭಾಗವತವು [ಅಧ್ಯಾ, ೫೪. ಸಿಂಹವು ಎತ್ತಿಕೊಂಡು ಹೋಗುವಂತೆ, ಆ ರುಕ್ಕಿಣಿಯನ್ನು ಕರೆದುಕೊಂ ಡು, ಬಲರಾಮಸಹಿತನಾಗಿ ತಾನೂ ಆರಥದಮೇಲೆ ಕುಳಿತು ವೇಗದಿಂದ ಹೊರಟುಬಿಟ್ಟನು. ಮೊದಲೇ ದುರಹಂಕಾರದಿಂದ ಬೀಗಿ ಬೆರೆಯುತಿದ್ದ ಜ ರಾಸಂಧಾದಿಗಳೆಲ್ಲರೂ, ತಮಗುಂಟಾದ ತಿರಸ್ಕಾರವನ್ನೂ, ರಾಜಕವೈಯು ತಮ್ಮ ಕೈತಪ್ಪಿಹೋದುದನ್ನೂ ನೋಡಿ ಸಹಿಸಲಾರದೆ, ದುಃಖಾಕೋಶಗ ಳಿಂದ ಒಬ್ಬರಿಗೊಬ್ಬರು ('ಆಹಾ! ಏನಾಶ್ ರೈವು! ಮಹಾಧನುರ್ಧಾರಿಗಳಾದ ನಮ್ಮ ಕೀರ್ತಿಯೆಲ್ಲವೂ ನಿಮಿಷಮಾತ್ರದಲ್ಲಿ ನಿರ್ನಾಮವಾಯಿತು? ಸಿಂಹಗ ಳ ನಡುವೆ ನರಿಯು ನುಗ್ಗಿದಂತೆ, ಮಹಾವೀರರಾದ ನಮ್ಮ ಕೀರ್ತಿಯನ್ನು . ಒಬ್ಬ ಗೊಲ್ಲನು ಕೆಡಿಸಿ ಬಿಟ್ಟನಲ್ಲವೆ ? ಛೇ ! ಇನ್ನು ನಾವು ಬದುಕಿ ಫಲವೇ ನು ?” ಎಂದು ಕೋಪದಿಂದ ಹಲ್ಲುಕಡಿದು ಬುಸುಗುಟ್ಟುತ್ತಿದ್ದರು, ಇದು ಐವತ್ತು ಮೂರನೆಯ ಅಧ್ಯಾಮವು. -+ ರುಕ್ಕಣೀಯ ಪರಾಜಯವು,++ ಹೀಗೆ ಆ ರಾಜರೆಲ್ಲರೂ ಅತಿಕುಪಿತರಾಗಿ, ಯುದ್ಧಕವಚವನ್ನು ಧರಿಸಿ, ಧನುಸ್ಸನ್ನು ಹಿಡಿದು, ತಮ್ಮ ತಮ್ಮ ವಾಹನಗಳನ್ನೇರಿ, ಸೇನಾಸಮೇತರಾಗಿ ಕೃಷ್ಣನನ್ನು ಬೆನ್ನಟ್ಟಿದರು. ಇತ್ತಲಾಗಿ ಕೆಲವು ಯಾದವಸೈನ್ಯಾಧಿಪತಿ ಗಳೂ ಧನುಷ್ಂಕಾರಮಾಡುತ್ತ ಅವರನ್ನು ತಡೆದರು.ಆನೆಗಳನ್ನೂ , ಕುದು ರೆಗಳನ್ನೂ , ರಥಗಳನ್ನೂ ಏರಿ ಯುದ್ಧಮಾಡುವುದರಲ್ಲಿ ಸಮರ್ಥರಾದ ಜರಾ ಸಂಧಾದಿರಾಜರೆಲ್ಲರೂ, ಮೇಫುಗಳು ಪಕ್ವತದಮೇಲೆ ಮಳೆಯನ್ನು ಕರೆಯು ವಂತೆ, ಯಾದವಸೈನ್ಯದಮೇಲೆ ಅವರಿಮಿತವಾಗಿ ಬಾಣವರ್ಷವನ್ನು ಕರೆ ದರು. ಆಗ ರುಸ್ಮಿಣಿಯು, ತನ್ನ ಪತಿಯಾದ ಕೃಷ್ಣನ ಸೈನ್ಯವೆಲ್ಲವೂ ಬಾಣವರ್ಷದಲ್ಲಿ ಮರೆಸಿಹೋಗುತ್ತಿರುವುದನ್ನು ನೋಡಿ, ಭಯದಿಂದ ತತ್ತಳಿ ಸುತ್ತ, ಲಜ್ಜೆಯೊಡನೆ ತನ್ನ ಪ್ರಾಣಪ್ರಿಯನಾದ ಕೃಷ್ಣನ ಮುಖವನ್ನು ನೋಡಿದಳು. ಆಗ ಕೃಷ್ಣನು ಅವಳ ಭಯವನ್ನು ನೋಡಿ ನಗುತ್ತ “ ಓ ಸುಂದರೀ! ಹೆದರಬೇಡ ! ಇದೋ! ಒಂದು ಕ್ಷಣಮಾತ್ರದಲ್ಲಿ ಈ ನಮ್ಮ ಸೈನ್ಯಗಳಿಂದ ಆ ಶತ್ರುಸೈನ್ಯವೆಲ್ಲವೂ ಧ್ವಂಸವಾಗುವುದನ್ನು ನೀನೇ ನೋ