ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭ್ಯಾ. ೫೪.) ದಶಮಸ್ಕಂಧವು. ೨೧೭೫ ಜರೂ ಕೇಳುತ್ತಿರುವಹಾಗೆ, ಹೀಗೆಂದು ಪ್ರತಿಜ್ಞೆ ಮಾಡುವನು. " ಎಲೈ ರಾಜರೆ ! ಯುದ್ಧದಲ್ಲಿ ಆ ಕೃಷ್ಣನನ್ನು ಕೊಂದು, ನನ್ನ ತಂಗಿಯಾದ ರು ಸ್ಮಿಣಿಯನ್ನು ಹಿಂದಕ್ಕೆ ಕರೆ ತಾರದೆ ನಾನು ತಿರುಗಿ ಈ ಕುಂಡಿನಪುರಕ್ಕೆ ಕಾಲಿಡುವವನಲ್ಲ. ಇದು ಸತ್ಯವು” ಎಂದು ಹೇಳಿ, ರಥದಲ್ಲಿ ಕುಳಿತು, ಸಾರ ಥಿಯನ್ನು ನೋಡಿ 14 ಸೋತಾ! ಬೇಗನೆ ಆ ಕೃಷ್ಣನಿರುವ ಸ್ಥಳಕ್ಕೆ ರಥವ ನ್ನು ಬಿಡು! ಈಗ ನಾನು ಅವನೊಡನೆ ಘೋರಯುದ್ಧವನ್ನು ನಡೆಸಬೇಕಾ ಗಿರುವುದು, ಈಗಲೇ ನಾನು ನನ್ನ ತೀಕ್ಷಬಾಣಗಳಿಂದ ದುಷ್ಟನಾದ ಆ ಗೊಲ್ಲನ ಹೆಮ್ಮೆ ಯನ್ನು ಮುರಿಯದೆ ಬಿಡುವವನಲ್ಲ! ಆ ನೀಚನು ನನ್ನ ತಂಗಿ ಯನ್ನು ಬಲಾತ್ಕಾರದಿಂದ ಅಪಹರಿಸಿಕೊಂಡು ಹೋಗಿರುವುದಕ್ಕೆ ತಕ್ಕ ಫ ಲವನ್ನು ತೋರಿಸುವೆನು"? ಎಂದು ಆತುರಪಡಿಸುತಿದ್ದನು. ಓ ಪರೀಕ್ಷೆ ದ್ರಾಜಾ ! ಅಲ್ಪ ಬುದ್ಧಿಯುಳ್ಳ ಆ ರುಕ್ಕಿಯು, ಸರೋಶ್ವರನಾದ ಶ್ರೀ ಕೃಷ್ಣನ ನಿಜವಾದ ಪ್ರಭಾವವನ್ನು ಹೇಗೆತಾನೇ ಬಲ್ಲನು? ಬಾಯಿಗೆ ಬಂ ದಂತೆ ವೀರವಾದಗಳನ್ನು ಮಾಡುತ್ತ ರಥದಲ್ಲಿ ಕುಳಿತು (t ಎಲಾ ನಿಲ್ಲು ! ನಿಲ್ಲು !” ಎಂದು ಕೂಗುತ್ತ ಬೆನ್ನಟ್ಟಿ ಹೊರಟನು. ಒಡನೆಯೇ ತನ್ನ ದೃಢ ವಾದ ಬಿಲ್ಲನ್ನು ಆ ಕರ್ಣಾಂತವಾಗಿ ಸೆಳೆದು, ಮೂರುಬಾಣಗಳನ್ನು ಏಕ ಕಾಲದಲ್ಲಿ ಕೃಷ್ಣನಮೇಲೆ ಪ್ರಯೋಗಿಸಿ, (ಎಲ ಕಳ್ಳಾ ! ಯಾದವಕುಲ ಪಾಂಸನಾ : ಕಾಗೆಯು ಯಜ್ಞದ ಹವಿಸ್ಸನ್ನು ಕದ್ದೂಡುವಂತೆ, ನೀನು ನನ್ನ ತಂಗಿಯನ್ನು ಬಲಾತ್ಕಾರದಿಂದ ಕದ್ಯೋಡುತ್ತಿರುವೆಯಾ ? ಇರಲಿ ! ಎಲ್ಲಿಗೆ ತಪ್ಪಿಸಿಕೊಂಡು ಹೋಗುವೆಯೋ ನೋಡುವೆನು? ಯುದ್ಧದಲ್ಲಿ ಏ ಕಾಕಿಯಾಗಿ ನಿಲ್ಲುವುದಕ್ಕೆ ಧೈರವಿಲ್ಲದೆ, ಮಾಯಾವಿಯಾಗಿ ಗುಂಪಿನಲ್ಲಿ ನುಗ್ಗಿ ಬಂದು, ಮೋಸದಿಂದ ಶತ್ರುಗಳನ್ನು ಹೊಡೆದು ಪಲಾಯನಮಾಡಿದ ನಿನ್ನ ಕೆಚ್ಚ ನ್ನು ಈಗಲೇ ಮುರಿಯುವೆನು ನೋಡು, ಎಲೆ ಮೂಢಾ ! ಈಗಲೂ ಒಳ್ಳೆಯಮಾತಿನಿಂದ ಹೇಳುವೆನು, ನನ್ನ ಬಾಣದಿಂದ ಹತನಾಗಿ ಈ ರಣರಂ ಗದಲ್ಲಿ ಸತ್ತು ಮಲಗುವುದರೊಳಗಾಗಿಯೇ, ಆ ಕಳ್ಳಿಯನ್ನು ಬಿಟ್ಟುಬಿಡು. ಅನ್ಯಾಯವಾಗಿ ಸಾಯಬೇಡ” ಎಂದನು. ಇದನ್ನು ಕೇಳಿ ಶ್ರೀ ಕೃಷ್ಣನು ಮದಾಂಧನಾದ ಆ ರುಕ್ಕಿಯ ಮಾತಿಗೆ ನಗುತ್ತ, ಒಡನೆಯೇ ಒಂದೇಬಾಣ