ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೨೬ ಶ್ರೀಮದ್ಭಾಗವತವು [ಅಧ್ಯಾ, ೫೪. ದಿಂದ ಆತನ ಕೈಯಲ್ಲಿದ್ದ ಧನುಸ್ಸನ್ನು ಕತ್ತರಿಸಿ, ಬೇರೆ ಆರುಬಾಣಗಳಿಂದ ಆ ರುಕ್ತಿಯನ್ನೂ, ಎಂಟುಬಾಣಗಳಿಂದ ಆತನ ನಾಲ್ಕು ರಾಶ್ವಗಳನ್ನೂ , ಎರಡು ಬಾಣಗಳಿಂದ ಸಾರಥಿಯನ್ನೂ, ಮೂರುಬಾಣಗಳಿಂದ ಧ್ವಜವನ್ನೂ ಪ್ರಹರಿಸಿದನು. ಆದರೇನು ? ರುಕ್ಕಿಯು ಇವೊಂದಕ್ಕೂ ಹಿಂಜರಿಯದೆ ಆಕ್ಷಣವೇ ರಥದಲ್ಲಿದ್ದ ಬೇರೊಂದು ಧನುಸ್ಸನ್ನು ಕೈಗೆ ತೆಗೆದುಕೊಂಡು, ಐದುಬಾಣಗಳನ್ನು ಹೂಡಿದನು. ಇಷ್ಟರಲ್ಲಿಯೇ ಕೃಷ್ಣನು, ಬೇರೊಂದು ಬಾಣವನ್ನು ಪ್ರಯೋಗಿಸಿ, ಆ ಧನುಸ್ಸನೂ ಕತ್ತರಿಸಿಬಿಟ್ಟನು. ಒಡನೆ ಯೇ ರುಕ್ಕಿಯು ಮತ್ತೊಂದು ಬಿಲ್ಲನ್ನು ಕೈಗೆತ್ತಿಕೊಂಡನು. ಕೃಷ್ಣನು ಅದನ್ನೂ ಆಗಲೇ ತನ್ನ ಬಾಣದಿಂದ ಕತ್ತರಿಸಿದನು. ಹೀಗೆಯೇ ರುಕ್ಕಿಯು, ತನ್ನಲ್ಲಿದ್ದ ಪರಿಭು, ಪಟ್ಟಸ, ಶೂಲ, ಫಲಕ, ಖಡ್ಗ, ಶಕ್ತಿ, ತೋಮರಗ ಛೇ ಮೊದಲಾದ ಯಾವಯಾವ ಆಯುಧಗಳನ್ನು ಕೈಗೆತ್ತಿಕೊಂಡರೂ, ಆಗಾಗಲೇ ಕೃಷ್ಣನು ಕತ್ತರಿಸಿ ಕೆಡುಹುತ್ತ ಬಂದನು. ಹೀಗೆ ತನ್ನ ಪ್ರ ಯತ್ನ ವೆಲ್ಲವೂ ವಿಫಲವಾದುದನ್ನು ನೋಡಿ ರುಕ್ಕಿಯು, ಕೊನೆಗೆ ಒಂದು ಕತ್ತಿಯನ್ನೂ, ಗುರಾಣಿಯನ್ನು ಕೈಗೆತ್ತಿಕೊಂಡು, ರಥದಿಂದ ಧಟ್ಟನೆ ಕೆಳಕ್ಕೆ ಧುಮಿಕಿ, ಬೆಂಕಿಯಮೇಲೆ ಬಿಳುವ ಪತಂಗದ ಹುಳುವಿನಂತೆ, ಕೃಷ್ಣನಿಗಿ ಔರಾಗಿ ಹೊರಟನು. ಆದನ್ನು ನೋಡಿ ಕೃಷ್ಣನು, ತನ್ನ ತೀಕ್ಷಬಾಣಗಳಿಂ ದ ಆ ರುಕ್ಕಿಯ ಕೈಯಲ್ಲಿದ್ದ ಕತ್ರಿಗುರಾಣಿಗಳೆರಡನ್ನೂ ತುಂಡುತುಂ ಡಾಗಿ ಕತ್ತರಿಸಿ, ಖಡ್ಡಪಾಣಿಯಾಗಿ ತಾನೂ ರಥದಿಂದಿಳಿದು, ಆ ರು ಕ್ಕಿಯನ್ನು ಒಂದೇಪ್ರಹಾರದಿಂದ ಕೊಂದುಬಿಡಬೇಕೆಂದು ಮುಂದೆ ಬಂ ದನು. ಆಗ ಸಮೀಪದಲ್ಲಿದ್ದ ರುಕ್ಕಿಣೀದೇವಿಯು, ತನ್ನ ಅಣ್ಣನಿಗೆ ಸಂಭವಿ ಸಬಹುದಾದ ಮರಣವನ್ನು ಕುರಿತು ಭಯಗ್ರಸ್ತಳಾಗಿ, ಕೃಷ್ಣನ ಕಾಲ ಮೇಲೆ ಬಿದ್ದು ದೈನ್ಯದಿಂದ ಹೀಗೆಂದು ಪ್ರಾರ್ಥಿಸುವಳು, 14 ಓ ಯೋಗೀ। ಶ್ವರಾ ! ನೀನು ಅಪ್ರಮೇಯಮಹಿಮೆಯುಳ್ಳವನು, ದೇವತೆಗಳಿಗೂ ಪರದೆ ವವು! ಲೋಕನಾಥನು. ಈ ನಿನ್ನ ಮಹಾಮಹಿಮೆಯನ್ನು ತಿಳಿಯದೆ, ಅಜ್ಞ ನಾದ ಈ ನನ್ನ ಸಹೋದರನು ನಿನ್ನನ್ನು ದ್ವೇಷಿಸುತ್ತಿರುವನು, ಯಾವ ವಿಧದಲ್ಲಿಯೂ ಆತನು ನಿನಗೆ ಸಮಾನನಲ್ಲ. ಆದುದರಿಂದ ಅವನು ಆಪ