ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೨೮ ಶ್ರೀಮದ್ಭಾಗವತವು [ಅಧ್ಯಾ, ೫೪. ಅವನವನ ಕರ್ಮಾನುಸಾರವಾಗಿ ಬಂದು ಸೇರುವುದೇಕೊರತ್ತು, ಅದಕ್ಕೆ ಮ ತೊಬ್ಬರನ್ನು ಕಾರಣವಾಗಿ ತಿಳಿಯಬಾರದು, ಕೃಷ್ಣಾ ! ಬಂಧುವಾದವನು ಕೊಲೆಗೆ ಅರ್ಹನಾಗಿದ್ದರೂ ಅವನನ್ನು ಕೊಲ್ಲುವುದು ಸರಿಯಲ್ಲ. ಅವರ ವರ ತಪ್ಪಿನಿಂದಲೇ ಅವರು ಹತಪ್ರಾಯರಾಗುವರು, ಅದಕ್ಕಾಗಿ ಬೇರೆ ಬ್ಬರು ಶಿಕ್ಷಿಸಬೇಕಾದುದಿಲ್ಲ, ಅಪರಾಧಿಗಳನ್ನು ಮನ್ನಿಸಿ ಕಳುಹಿಸಬೇಕಾ ದುದೇ ಸಜ್ಜನರ ಧರ್ಮವು, ತಮ್ಮ ದೋಷದಿಂದಲೇ ಹತಪ್ರಾಯರಾಗಿರು ವ ಇಂತವರನ್ನು ಕೊಲ್ಲುವುದಕ್ಕೆ ಯತ್ನಿ ಸುವುದು, ಸತ್ತವರನ್ನು ಕೊಲ್ಲುವು ದಕ್ಕೆ ಹೋದಂತಾಗುವುದಿಲ್ಲವೆ ?” ಎಂದು ಹೇಳಿ, ತಿರುಗಿ ರುಕ್ಷ್ಮಿಣಿಯನ್ನು ನೋಡಿ (ಓ ಕುಮಾರೀ! ಲೋಕದಲ್ಲಿ ಕ್ಷತ್ರಿಯರಿಗೆ ಬ್ರಹ್ಮನಿಂದ ನಿಯಮಿತ ವಾದ ಧರ್ಮವೇ ಇದು! ಅವರು ಒಡಹುಟ್ಟಿದವರನ್ನಾ ದರೂ ಸಮಯಬಂ ದಾಗ ಕೊಲ್ಲದೆ ಬಿಡುವವರಲ್ಲ!ನಮ್ಮ ಕ್ಷತ್ರಿಯಕುಲಕ್ಕೆ ಈ ಭಯಂಕರವಾದ ಧರ್ಮವು ದೈವವಿಹಿತವಾಗಿರುವಾಗ, ಇದರಲ್ಲಿ ನಮ್ಮ ತಪ್ಪೇನಿರುವುದು ? ಐಶ್ವರಮದಾಂಧರಾದ ಕ್ಷತ್ರಿಯರು, ರಾಜ್ಯಕ್ಕಾಗಿಯೂ, ಭೂಮಿಗಾ ಗಿಯೂ, ಧನಕ್ಕಾಗಿಯೂ,ಐಶ್ವಠ್ಯಕ್ಕಾಗಿಯೂ ತಾವೇ ವೀರರೆಂಬ ಅಭಿಮಾನ ಕ್ಯಾಗಿಯೂ, ತಮ್ಮ ಪರಾಕ್ರಮವನ್ನು ತೋರಿಸುವುದಕ್ಕಾಗಿಯೂ, ಅಥವಾ ಬೇರೆ ಯಾವ ಅಲ್ಪ ಕಾರಣಕ್ಕಾಗಿಯೂಕೂಡ, ತಮ್ಮ ಬಂಧುಗಳನ್ನು ಪರಾ ಭವಿಸುವರು. ಆದರೆ ನಾವು ಆರೀತಿಯಾಗಿ ಪ್ರವರ್ತಿಸಬಾರದಾಗಿತ್ತು ಓ! ರುಕ್ಕಿಣಿ ! ನಡೆದುಹೋದುದಕ್ಕಾಗಿ ನೀನು ಚಿಂತಿಸಬಾರದು, ದೇಹಾ ತ್ಮಾಭಿಮಾನವುಳ್ಳ, ಅಜ್ಞರಿಗಾದರೋ, ತಮ್ಮ ಇಷ್ಟಜನರಿಗೆ ಕ್ಷೇಮವನ್ನೂ, ಇತರರಿಗೆ ಆಕ್ಷೇಮವನ್ನೂ ಬಯಸುವುದು ಸ್ವಭಾವಧರ್ಮವು, ಭಗವನ್ನಾಯೆ ಯಿಂದ ಮನುಷ್ಯರಿಗೆ ದೇಹಾಭಿ ಮಾನವು ಹುಟ್ಟಿ, ಅದರಿಂದ ತನಗೆ ಕೆಲ ವರು ಶತ್ರುಗಳೆಂದೂ, ಕೆಲವರು ಮಿತ್ರರೆಂದೂ, ಕೆಲವರು ಉದಾಸೀನ ರೆಂದೂ ಭೇದಬುದ್ಧಿಯು ಜನಿಸುವುದು, ನೀನೂ ಅದೇರೀತಿಯಾಗಿ ನಿನ್ನ ಸಹೋದರನ ಅವಮಾನಕ್ಕಾಗಿ ಚಿಂತಿಸಿದಪಕ್ಷದಲ್ಲಿ, ನಿನ್ನಲ್ಲಿ ವಿಶೇಷವೇ ನಾಯಿತು? ನೀನೂ ಆ ಅಜ್ರಂತೆಯೇ ಆಗುವೆಯಲ್ಲವೆ ? ಮನುಷ್ಯನಿಗೆ ಇತರರಲ್ಲಿ ಶತ್ರು ಮಿತ್ರರೆಂಬ ಭೇದಬುದ್ಧಿಯು, ಭಗವನ್ನಾಯೆಯಿಂದ ಕಲ್ಪಿ