ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦.೩೩ ಅಧ್ಯಾ, ೫೪.] ದಶಮಸ್ಕಂಧವು. ಆ ಮಾಯಾವತಿಯೆಂಬವಳೇ ಹಿಂದೆ ಮನ್ಮಥಪತ್ತಿ ಯಾಗಿದ್ಯ ರತಿದೇವಿ ! ಶಂಬರನು ಅವಳನ್ನು ಸೆರೆಹಿಡಿದುತಂದು, ತನ್ನ ಅಡಿಗೆಯ ಮನೆಯಲ್ಲಿ ಗೌಡಿ ಯನ್ನಾಗಿ ನಿಯಮಿಸಿದ್ದನು, ಆಗ ಮಾಯಾವತಿಯು, ಆ ಮಗುವನ್ನು ನೋಡಿ ಆಶ್ಚರದಿಂದ (ಏನಿದು? ಈ ಶಿಶುವಿನಲ್ಲಿ ನನ್ನ ಪತಿಯ ಲಕ್ಷಣಗಳೆಲ್ಲವೂ ಕಾಣು ತಿರುವುದಲ್ಲಾ ! ಹಿಂದೆ ರುದ್ರನ ಫಾಲನೇತ್ರದಿಂದ ದಗ್ಗನಾದ ನನ್ನ ಪತಿ ಯೇ ಹೀಗೆ ಹುಟ್ಟಿರಬಹುದೆ” ಎಂದು ಮನಸ್ಸಿನಲ್ಲಿ ಶಂಕಿಸುತ್ತಿರುವಾಗ, ನಾರದನು ಬಂದು, ಆ ಶಿಶುವಿನ ಪೂರೊತ್ಸರಗಳೆಲ್ಲವನ್ನೂ ತಿಳಿಸಿ, ಈಗ ಆ ಶಿಶುವು ಆಮೀನಿನ ಗರ್ಭದಲ್ಲಿ ಸಿಕ್ಕುವುದಕ್ಕೆ ಕಾರಣವನ್ನೂ ವಿವರಿಸಿದನು. ಆಕೆಯು ನಾರದನಿಂದ ಆ ಶಿಶುವಿನ ಪೂರೈವೃತ್ತಾಂತವನ್ನು ಕೇಳಿದಮೇಲೆ, ಅವನೇ ಪೂರಜನ್ಮದಲ್ಲಿ ತನ್ನ ಪತಿಯೆಂದು ತಿಳಿದು, ಅತಿ ಪ್ರೀತಿಯಿಂದ ಪೋಷಿಸುತಿದ್ದಳು. ಕ್ರಮಕ್ರಮವಾಗಿ ಆ ಶಿಶುವಿಗೆ ಯೌವನವುಂಟಾಯಿತು. ಅವನ ರೂಪವು ನೋಡಿದ ಸಿಯರೆಲ್ಲರಿಗೂ ಮೋಹಕರವಾಗಿತ್ತು. ಕಮಲದಳದಂತಿರುವ ಕಣ್ಣುಗಳಿಂದಲೂ,ಅಜಾನುಬಾಹುಗಳಿಂದಲೂ, ಲೋ ಕೈಕಸುಂದರನಾದ ಆ ತರುಣನನ್ನು ನೋಡಿ, ಮಾಯಾವತಿಯು, ಅವನಲ್ಲಿಯೇ ಪತಿಭಾವವನ್ನಿಟ್ಟು, ಲಜ್ಞಾವಿಶಿಷ್ಟವಾದ ಮಂದಹಾಸದಿಂದಲೂ, ಪ್ರೀತಿಸೂಚಕವಾದ ಹುಬ್ಬಿನಾಟಗಳಿಂದಲೂ ಅವನಲ್ಲಿ ಮೋಹವನ್ನು ತೋರಿಸುತ್ತ, ಅವನೊಡನೆ ದೇಹಾಲಿಂಗನಸೌಖ್ಯನನ್ನು ಬಯಸುತಿದ್ದಳು. ಆಗ ತರುಣನಾದ ಆ ಪ್ರದ್ಯುಮ್ನನು, ಆಕೆಯನ್ನು ಕುರಿತು, (ಅಮ್ಮಾ ! ಇದೇನಿದು? ನಿನ್ನ ಬುದ್ದಿಯು ಹೀಗೆ ವಿಪರೀತವಾಗಿ ಪರಿಣಮಿ ನಿರುವುದು? ಬಾಲ್ಯದಿಂದಲೂ ನೀನು ನನ್ನನ್ನು ತಾಯಿಯಂತೆ ಪೋಷಿಸಿದವ ಇಲ್ಲವೆ. ಈಗ ಆ ಮಾತೃಭಾವವನ್ನು ಬಿಟ್ಟು, ಕಾಮಾತುರರಾದ ಸೀಯ ರಂತೆ ನಡೆಯುತ್ತಿರುವೆಯಲ್ಲಾ ! " ಎಂದನು. ಅದಕ್ಕಾ ರತಿಯು « ಓ ಸೌಮ್ಯಾ ! ನೀನು ಸಾಕ್ಷಾನ್ನಾರಾಯಣನ ಪತ್ರನು, ನೀನು ಹುಟ್ಟಿದ ಹತ್ತು ದಿನಗಳೊಳಗಾಗಿಯೇ ಶಂಬರನು ನಿನ್ನನ್ನು ಸಮುದ್ರದಲ್ಲಿ ಬಿಸುಟನು.ಅಲ್ಲಿದ್ದ ಒಂದಾನೊಂದು ಮತ್ತ್ವವು ನಿನ್ನನ್ನು ನುಂಗಿತು, ಆ ಮತ್ತ್ವವನ್ನು ಬೆಸ್ತರು ಈ ಶಂಬರನಿಗೆ ತಂದೊಪ್ಪಿಸಿದರು, ಅದರ ಗರ್ಭದಿಂದ ನೀನು ಸಿಕ್ಕಿದೆ.