ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೫೫.] ದಶಮಸ್ಕಂಧವು. ೨೧೩೬ ಆ ಭಗವಂತನಿಗೆ ಇಲ್ಲಿ ನಡೆದ ಅಂಶಗಳೆಲ್ಲವೂ ಜ್ಞಾನಗೋಚರವಾಗಿ ತಿಳಿದಿ ದ್ವರೂಕೂಡ, ಅಲ್ಲಿ ಕೃಷ್ಣನು ಏನೂ ತಿಳಿಯದವನಂತೆ ಸುಮ್ಮನೆ ನಿಂತಿ ದನು. ಈ ಕಾಲಕ್ಕೆ ಸರಿಯಾಗಿ ಅಲ್ಲಿಗೆ ಬಂದಿದ್ದ ನಾರದಮುನಿಯು, ಶಂ ಬರವೃತ್ತಾಂತವೇ ಮೊದಲಾದ ಪೂರೊತ್ಸರಗಳೆಲ್ಲವನ್ನೂ ಆ ಅಂತಃಪುರ ಸಿಯರ ಮುಂದೆ ವಿವರವಾಗಿ ಹೇಳಿದನು. ಆಗ ಸಿಯರೆಲ್ಲರೂ ಅದನ್ನು ಕೇಳಿ ಆಶ್ವ ರಭರಿತರಾದರು. ಸತ್ಯವನು ಬದುಕಿಬಂದಂತೆ, ಬಹುಕಾಲದಿಂದ ನಷ್ಯನಾಗಿದ್ದ ಕುಮಾರನು ತಮಗೆ ತಿರುಗಿ ಲಭಿಸಿದುದಕ್ಕಾಗಿ ಅಪಾರಸಂ ತೋಷದಿಂದ ಹಿಗ್ಗುತಿದ್ದರು. ಆಮೇಲೆ ಕ್ರಮವಾಗಿ ದೇವಕೀವಸುದೇವ ರೂ, ಬಲರಾಮಕೃಷ್ಣರೂ, ಅಂತಃಪುರಸ್ತಿಯರೂ, ರುಕ್ಕಿಣೀದೇವಿ ಯ., ಪತ್ರೀಸಮೇತನಾದ ತನ್ನ ಕುಮಾರನನ್ನು ಪ್ರೇಮದಿಂದ ಆಲಿಂಗಿಸಿ. ಸಂತೋಷಸಲ್ಲಾಪಗಳನ್ನು ನಡೆಸುತ್ತಿದ್ದರು. ದ್ವಾರಕಾವಾಸಿಗಳೆಲ್ಲರೂ ಈ ವೃತ್ತಾಂತವನ್ನು ಕೇಳಿ ಒಬ್ಬರಿಗೊಬ್ಬರು, ( ಆಹಾ! ದೈವವ್ಯಾಪಾರವು ಆ ತಿವಿಚಿತ್ರವಾದುವು! ಸತ್ಯವನ್ನು ಇಷ್ಟು ದಿನಗಳಮೇಲೆ ಬದುಕಿ ಬಂದನಲ್ಲವೆ? ಎಂದು ಸಂತೋಷದಿಂದಲೂ, ಆಶ್ಚರದಿಂದಲೂ ಸ್ತಬ್ಬರಾಗಿದ್ದರು. ಓ ಪ ರೀಕ್ಷಿದ್ರಾಜಾ! ಆ ಅ೦ತಪುರದಲ್ಲಿದ್ದ ಸ್ತ್ರೀಯರೆಲ್ಲರೂ ಮೊದಲು ಪ್ರದ್ಯು ಮೃನ ರೂಪವನ್ನು ನೋಡಿ ಮೋಹಿತರಾದುದೇನೂ ಆಶ್ರವಲ್ಲ! ಆ ಪ್ರ ದ್ಯುಮ್ಮನು ಸವಿಧದಲ್ಲಿಯೂ ಶ್ರೀಕೃಷ್ಣನನ್ನೇ ಹೋಲುತ್ತಿರು ವನು, ಅವನನ್ನು ನೋಡಿದಾಗ ಎಂತವರಿಗಾದರೂ ಸಾಕ್ಷಾತ್ಕಾಗಿ ಕೃಷ್ಣ ವೇ ಅವನೆಂಬ ಭ್ರಾಂತಿಯು ಹುಟ್ಟುವುದು, ಹೀಗಿರುವಾಗ ಆ ಸ್ತ್ರೀಯರು ಅವನನ್ನು ಕಂಡು ಮೋಹಿಸಿದುದೇನಾಶ ಗ್ಯವು ? ಇದಲ್ಲದೆ ಸ್ಮರಿಸಿದಮಾ ತ್ರಕ್ಕೆ ಮನಸ್ಸನ್ನು ಕಲಗಿಸುತ್ತಿರುವ ಆ ಕಾಮದೇವನು, ಸಾಕ್ಷಾತ್ತಾಗಿ ಮುಂದೆ ಬಂದುನಿಂತು,ಶ್ರೀಕೃಷ್ಣನ ಪ್ರತಿಬಿಂಬವೋ ಎಂಬಂತೆ ಮೋಹನಾ ಕೃತಿಯಿಂದೊಪ್ಪತಿರುವಾಗ, ಅವನನ್ನು ನೋಡಿ ಯಾರ ಮನಸ್ಸು ತಾನೇ ಚಲಿಸದು? ಕೃಷ್ಣನ ಪತ್ನಿಯರಿಗೇ ಈ ಸ್ಥಿತಿಯುಂಟಾದಮೇಲೆ ಇನ್ನು ಸಾಮಾನ್ಯಸ್ತ್ರೀಯರ ಮಾತೇನು ? ಇದು ಐವತ್ತೈದನೆಯ ಅಧ್ಯಾಯವು.