ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೫೩.] ದಶಮಸ್ಕಂಧವು. ೨೧೩೯ ಡಿಸಿ (ಓ ನಾರಾಯಣಾ ! ನಿನಗೆ ನಮಸ್ಕಾರವು, ಶಂಖಚಕ್ರಗಧಾಧಾರಿ ಯಾದ ಓ ಪರಮಾತ್ಮಾ ! ನಿನಗೆ ವಂದನವು! ಹೇ ದಾಮೋದರಾ ! ಅ ರವಿಂದಾಕ್ಷಾ ! ಗೋವಿಂದಾ ! ನಂದನಂದನಾ ! ನಮ್ಮ ವಿಜ್ಞಾಪನೆಯನ್ನು ಲಾಲಿಸಬೇಕು, ಲೋಕನಾಯಕನಾದ ನಿನ್ನ ದರ್ಶನಕ್ಕಾಗಿ ಸೂಯ್ಯದೇವನೇ ಆಕಾಶದಿಂದಿಳಿದು ಬಂದುಬಿಟ್ಟಿರುವನು, ತನ್ನ ತೀಕ್ಷಕಿರಣಗಳಿಂದ ಇ ಕ್ಲಿನ ಜನರಿಗೆ ಕಣ್ಣೆ ಕಾಣದಂತೆ ಮಾಡಿರುವನು. ಹೀಗಾದರೆ ನಮ್ಮ ಗತಿ ಯೇನು ? ಆದರೆ ಇದು ಅವನ ತಪ್ಪಲ್ಲ ! ದೇವಾದಿದೇವತೆಗಳಾದರೂ ನೀ ನಿರತಕ್ಕ ಸ್ಥಳವನ್ನು ಹುಡುಕಿಕೊಂಡು ಬರುವುದು ಸಹಜವು. ಓ ನಾರಾಯ ಣಾ : ನೀನು ಈ ಯಾದವಕುಲದಲ್ಲಿ ಹುಟ್ಟಿ, ನಿನ್ನ ಪರಸ್ವರೂಪವನ್ನು ಮರೆಸಿಕೊಂಡು ಗೂಢವಾಗಿರುವುದನ್ನು ತಿಳಿದು, ಸೂರನೇ ನಿನ್ನನ್ನು ನೋ ಡುವುದಕ್ಕಾಗಿ ಅದೋ ಬರುತ್ತಿರುವನು.ಅವನ ತೀಕ್ಷಕಿರಣಗಳಿಂದ ನಮ್ಮ ದೃಷ್ಟಿಯು ಇನ್ನೂ ಸಂಪೂರ್ಣವಾಗಿ ಕೆಟ್ಟುಹೋಗುವುದಕ್ಕೆ ಮೊದಲು, ನೀ ನಾಗಿಯೇ ಹೋಗಿ ಅವನಿಗೆ ದರ್ಶನವನ್ನು ಕೊಟ್ಟು ಸಮಾಧಾನಮಾಡಿ ಕಳು ಹಿಸಬೇಕು” ಎಂದರು.ಆಗ ಕೃಷ್ಣನು,ಅಜ್ಞತೆಯಿಂದ ಹೇಳಿದ ಅವರ ಮಾ ತುಗಳನ್ನು ಕೇಳಿ ನಗುತ್ತ, “ ಓ ! ಪುರಜನರೆ ! ಅವನು ಸೂರನಲ್ಲ ! ಸತ್ರಾ ಜಿಂಬವನು ಸೂಕ್ಯಾನುಗ್ರಹದಿಂದ ತನಗೆ ಬಂದ ಒಂದಾನೊಂದು ರತ್ನ ವನ್ನು ಧರಿಸಿಕೊಂಡು ಬರುತ್ತಿರುವನು. ಭಯಪಡಬೇಡಿರಿ” ಎಂದು ಸಮಾ ಧಾನಮಾಡಿ ಕಳುಹಿಸಿಬಿಟ್ಟನು. ಇಷ್ಟರಲ್ಲಿ ಇತ್ತಲಾಗಿ, ಸತ್ರಾಜಿತ್ತು ಹಿಂತಿರುಗಿಬರುವನೆಂಬ ಸಂಗತಿಯನ್ನು ತಿಳಿದು, ಅವನ ಬಂಧುಜನ ರೆಲ್ಲರೂ ತಮ್ಮ ಮನೆಗೆ ಮಂಗಳಾಲಂಕಾರಗಳೆಲ್ಲವನ್ನೂ ಮಾಡಿ ಅತ್ಯಾದರ ದಿಂದ ನಿರೀಕ್ಷಿಸುತಿದ್ದರು. ಸತ್ರಾಜಿತ್ತು ಮಹಾವೈಭವದಿಂದ ತನ್ನ ಮನೆಗೆ ಬಂದು, ತನ್ನ ಕ್ಲಿದ್ದ ಆ ರತ್ನ ವನ್ನು ಬ್ರಾಹ್ಮಣರಮೂಲಕವಾಗಿ ದೇವತಾ ಸಾನ್ನಿಧ್ಯದಲ್ಲಿ ಇಡಿಸಿದನು. ಓ ಪರೀಕ್ಷಿದ್ರಾಜಾ ! ಆ ಸ್ಯಮಂತಕರತ್ನ ದ ಪ್ರಭಾವವು ಅತ್ಯದ್ಭುತವಾದುದು, ಅದು ದಿನದಿನವೂ ಎಂಟೆಂಟು ಭಾರದ ತೂಕದಷ್ಟು ಚಿನ್ನವನ್ನು ಕೊಡುತ್ತಿರುವುದು, ಆ ರತ್ನ ವನ್ನು ಎಲ್ಲಿ ಆರಾಧಿ ಸುತ್ತಿರುವರೋ, ಅಲ್ಲಿ ದುರ್ಭಿಕ್ಷವಾಗಲಿ, ಮಾರಿಕಾದಿರೋಗಗಳಾಗಲಿ, ಅ