ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೪೦ ಶ್ರೀಮದ್ಭಾಗವತವು [ಅಧ್ಯಾ, ೫೬. ನಿಷ್ಟಗಳಾಗಲಿ, ಆಧಿವ್ಯಾಧಿಗಳಾಗಲಿ, ಬೇರೆ ಯಾವವಿಧವಾದ ಆಶುಭಗ ಳಾಗಲಿ ತಲೆದೋರಲಾರವು, ಆ ರತ್ನ ವಿದ್ದ ಕಡೆಯಲ್ಲಿ ಮಾಯೆ, ವಂಚನಾ ದಿಗಳೊಂದೂ ಕೆಂದಲಾರವು. ಹೀಗಿರುವಾಗ ಒಮ್ಮೆ ಶ್ರೀ ಕೃಷ್ಣನು, ಸತ್ರಾಜಿನಬಳಿಗೆ ಬಂದು, ಆ ರತ್ನ ವನ್ನು ತಮ್ಮ ರಾಜನಾದ ಉಗ್ರಸೇನ ನಿಗೆ ಕೊಡುವಂತೆ ಕೇಳಿದನು. ದೇವದೇವನಾದ ಸಾಕ್ಷಾದ್ಭಗವಂತನೇ ಹೀಗೆ ಯಾಚಿಸುತ್ತಿರುವಾಗಲೂ, ಲೋಭಬುದ್ಧಿಯುಳ್ಳ ಸತ್ರಾಜಿತ್ತು, ಅದನ್ನು ಕೊಡಲಾರದೆ ಕೃಷ್ಣನನ್ನು ನಿರಾಕರಿಸಿಬಿಟ್ಟನು, ಕೆಲವು ದಿನಗಳು ಕಳೆದ ಮೇಲೆ, ಆ ಸತ್ರಾಜಿನ ತಮ್ಮನಾದ ಪ್ರಸೇನನೆಂಬವನು, ಮಹಾತೇಜ ಸ್ಸುಳ್ಳ ಆ ರತ್ನ ವನ್ನು ಕಂಠದಲ್ಲಿ ಧರಿಸಿ, ಬೇಟೆಯಾಡುವುದಕ್ಕಾಗಿ ಕುದುರೆ ಯನ್ನೇರಿ ಕಾಡಿಗೆ ಹೋದನು. ಆ ಕಾಡಿನಲ್ಲಿ ಒಂದಾನೊಂದು ಸಿಂಹವು, ಪ್ರಸೇನನನ್ನು ಕೊಂದು, ಆ ರತ್ನ ವನ್ನು ಬಾಯಲ್ಲಿ ಕಚ್ಚಿಕೊಂಡು ಹೋಗಿ ಒಂದು ಬೆಟ್ಟದ ಗವಿಯನ್ನು ಪ್ರವೇಶಿಸಿತು. ಇಷ್ಟರಲ್ಲಿ ಭಕಶ್ರೇಷ್ಟನಾ ದ ಜಾಂಬವಂತನು, ಆ ಸಿಂಹವನ್ನು ಕೊಂದು, ಆ ರತ್ನ ವನ್ನು ತನ್ನ ಗುಹೆಗೆ ತೆಗೆ ದುಕೊಂಡುಹೋಗಿ, ಅದನ್ನು ತನ್ನ ಮಗನಿಗೆ ಆಡುವುದಕ್ಕಾಗಿ ಕೊಟ್ಟುಬಿ ಟ್ಯನು.ಹೀಗೆ ಕೆಲವು ದಿನಗಳು ಕಳೆದುವು.ಇತ್ತಲಾಗಿ ಸತ್ರಾಜಿತ್ತು ಬೇಟೆಗಾಗಿ ಕಾಡಿಗೆಹೋದ ತನ್ನ ತಮ್ಮನು ಹಿಂತಿರುಗಿಬಾರದಿದ್ದುದನ್ನು ನೋಡಿ, ಅಲ್ಲಲ್ಲಿ ಅವನನ್ನು ಹುಡುಕಿಸುತಿದ್ದನು. ತನ್ನ ತಮ್ಮನಿಗಾಗಿಯೂ, ಆ ರತ್ನ ಕ್ಕಾಗಿ ಯೂ, ಅನವರತವೂ ಕೊರಗಿ ಸಂಕಟಪಡುತಿದ್ದನು. ಕೊನೆಕೊನೆಗೆ ಆತನಿಗೆ ಕೃಷ್ಣನಮೇಲೆ ಅನುಮಾನವು ಹುಟ್ಟಿತು. ತನ್ನ ತಮ್ಮನು ಆ ರತ್ನವನ್ನು ಕಂಠದಲ್ಲಿ ಧರಿಸಿ ಕಾಡಿಗೆ ಹೋದಾಗ, ಆ ರತ್ನದ ಆಸೆಗಾಗಿ ಕೃಷ್ಣನೇ ಅವ ನನ್ನು ಕೊಂದಿರಬೇಕೆಂದು ಅಲ್ಲಲ್ಲಿ ಆಡಿಕೊಳ್ಳುತಿದ್ದನು. ಕರ್ಣಾಕರ್ಣಿಕೆ ಯಾಗಿ ಇದು ಆ ಊರಿನ ಜನರೆಲ್ಲರ ಕಿವಿಗೂ ಬಿದ್ದು, ಕೊನೆಗೆ ಕೃಷ್ಣನ ಕಿವಿಗೂ ಮುಟ್ಟಿತು. ಆಗ ಕೃಷ್ಣನು, ತನ್ನ ಮೇಲಿನ ಅಪವಾದವನ್ನು ಹೇಗಾದರೂ ತಪ್ಪಿಸಿಕೊಳ್ಳುವುದಕ್ಕಾಗಿ, ಕೆಲವು ಪುರಜನರನ್ನು ತನ್ನೊಡನೆ ಕರೆದುಕೊಂಡು, ತಾನೇ ಆ ಪ್ರಸೇನನನ್ನು ಹುಡುಕುವುದಕ್ಕಾಗಿ ಹೊರಟನು. ಆ ಪ್ರಸೇನನು ಹೋದ ದಾರಿಯನ್ನೇ ಹಿಂಬಾಲಿಸಿ ಹೋದಾಗ ಅಲ್ಲಿ