ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿ ಒ ? ೨೧೪೨ ಶ್ರೀಮದ್ಭಾಗವತವು [ಅಧ್ಯಾ, ೫೬, ದೃಢವಾದ ಶ್ರೀಕೃಷ್ಣನ ಮುಷ್ಠಿಪ್ರಹಾರದಿಂದ ಜಾಂಬವಂತನ ಮೈಕ ಟ್ಟುಗಳೆಲ್ಲವೂ ಸಡಿಲಿಹೋದುವು. ಅವನ ಸತ್ವವು ಕುಂದಿತು. ಅವನ ದೇಹ ವೆಲ್ಲವೂ ಬೆವರಿತು. ಆಗ ಜಾಂಬವಂತನು, ತನ್ನ ಆಪಜಯಕ್ಕಾಗಿ ತಾನೇ ಆ ಶರಪಡುತ್ತ, ಅಲ್ಲಿಗೆ ಬಂದವನು ಸಾಮಾನ್ಯ ಮನುಷ್ಯನಲ್ಲವೆಂದು ನಿಶ್ಚಯಿಸಿ, ಅವನನ್ನು ಕುರಿತು ಹೀಗೆಂದು ಹೇಳುವನು. « ಓ ! ಮಹಾತ್ಮಾ ! ನಿನ್ನನ್ನು ನೋಡಿದರೆ ಮನುಷ್ಯನಂತೆ ತೋರುವುದಿಲ್ಲ. ಸಮಸ್ತಭೂತಗಳಿ ಗೂ ನೀನೇ ಪ್ರಾಣಭೂತನೆಂದು ತೋರುವುದು, ಪ್ರಾಣಿಗಳ ಓಜಸ್ಸು, ಸಹಸ್ಸು, ಬಲ, ಇವೆಲ್ಲವೂ ನೀನೇ ಆಗಿರಬೇಕು, ಮತ್ತು ಜಗತ್ಕಾರಣನಾಗಿ ಯೂ, ಪುರಾಣಪುರುಷನಾಗಿಯೂ, ಜಗದ್ರೂಪದಿಂದ ಸತ್ವವ್ಯಾಪಿಯಾಗಿ ಯೂ, ಸತ್ಯೇಶ್ವರನಾಗಿಯೂ, ಸತ್ಯಾಂತರಾಮಿಯಾಗಿಯೂ ಇರುವ ವಿಷ್ಣುವೇ ನೀನೆಂಬುದರಲ್ಲಿ ಸಂದೇಹವಿರದು, ಮಹತ್ತು ಮೊದಲಾಗಿ ಪೃಥಿವಿ ಯವರೆಗಿನ ತತ್ವಗಳೆಲ್ಲಕ್ಕೂ ನೀನೇ ಸೃಷ್ಟಿಕರ್ತನು ನಿನ್ನಿಂದ ಸೃಷ್ಟಿ ಸಲ್ಪಡತಕ್ಕ ಆ ಮಹದಾರಿಗಳಲ್ಲಿ ಉಪಾದಾನಕಾರಣವಾಗಿರತಕ್ಕವನೂ ನೀನೇ! ಜಗತ್ತನ್ನು ತನ್ನ ವಶವಾಗಿ ಮಾಡಿಕೊಂಡಿರತಕ್ಕ ಬ್ರಹ್ಮಾದಿಗಳೂ ನಿನ್ನ ವಶರಾಗಿರುವರು.ಅವರೆಲ್ಲರನ್ನೂ ಕಟ್ಟಿಡತಕ್ಕ ಕಾಲಪುರುಷನೂ ಸೀನೇ! ಕಾಲವು ನಿನ್ನ ಶರೀರವು, ಜೀವಾತ್ಮರಿಗೆ ಅಂತರಾವಿಯಾಗಿ ನಿಯಾಮಕನಾ ದ ಪರಮಾತ್ಮನೂ ನೀನೇ ಓ! ದೇವಾ ! ಯಾವನ ಕೋಪಸೂಚಕವಾದ ಕಟಾಕ್ಷಮಾತ್ರದಿಂದಲೇ ತಿಮಿತಿಮಿಂಗಿಲಾದಿಗಳಿಗೆಲ್ಲವೂ ಆಶ್ರಯವಾದ ಸಮುದ್ರವೂಕೂಡ ಭಯಪಟ್ಟು ದಾರಿಯನ್ನು ಕೊಟ್ಟಿತೋ, ಯಾವನು ತನ್ನ ಕೀರ್ತಿಮಹಿಮೆಯನ್ನು ತೋರಿಸುವಂತೆ ಆ ಸಮುದ್ರದಮೇಲೆ ಸೇತುವನ್ನು ಕಟ್ಟಿದನೋ,ಯಾವನು ಲಂಕೆಯನ್ನು ಧ್ವಂಸಮಾಡಿದನೋ,ಯಾವನ ತೀಕ್ಷ್ಯ ಬಾಣಗಳಿಂದ ರಾವಣನ ಹತ್ತು ತಲೆಗಳೂ ಕತ್ತರಿಸಿ ನೆಲಕ್ಕೆ ಬಿದ್ದು ವೋ, ಆ ನನ್ನ ಪ್ರಭುವಾದ, ರಘುನಾಥನಾದ ಶ್ರೀರಾಮನೇ ನೀನಾಗಿರಬೇಕು. ಆತನುಹೊರತು ಈ ಲೋಕದಲ್ಲಿ ನನ್ನ ನ್ನು ಜಯಿಸತಕ್ಕವರು ಬೇರೊಬ್ಬರಿಲ್ಲ! ದೇವಾ ! ನಿನ್ನ ನಿಜರೂಪವನ್ನು ತೋರಿಸಿ ನನಗೆ ಪ್ರಸನ್ನ ನಾಗಬೇಕು” ಎಂ ದು ಬದ್ಧಾಂಜಲಿಯಾಗಿ ಮುಂದೆ ನಿಂತಿದ್ದನು. ಹೀಗೆ ಜಾಂಬವಂತನು, ತನ್ನ