ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ. ೫೬.] ದಶಮಸ್ಕಂಧವು. ೨೧೪೩ ನಿಜತತ್ವವನ್ನು ತಿಳಿದುಕೊಂಡು ಭಕ್ತಿಯಿಂದ ನಿಂತಿರುವುದನ್ನು ನೋಡಿ, ದೇವಕೀಪುತ್ರನಾದ ಕೃಷ್ಣನು ಅವನಲ್ಲಿ ಪ್ರಸನ್ನ ನಾಗಿ, ಮಂಗಳಕರವಾದ ತನ್ನ ಹಸ್ತಕಮಲದಿಂದ ಅವನ ಬೆನ್ನನ್ನು ಸವರಿ, ಮೇಘಗಂಭೀರಧ್ವನಿಯಿಂ ದ 'ಹೀಗೆಂದು ಹೇಳುವನು. «ಓ ಭಲ್ಲೂಕರಾಜಾ ! ಈ ಸ್ಯಮಂತಕಮಣಿ ಗಾಗಿಯೇ ನಾನು ಈ ನಿನ್ನ ಬಿಲಕ್ಕೆ ಬರಬೇಕಾಯಿತು, ಆದರೆ ಈ ಮಣಿಗಾ ಗಿ ನಾನು ಆಸೆಪಟ್ಟವನಲ್ಲ. ಈ ರತ್ನ ದಮಲಕವಾಗಿ ನನ್ನ ಮೇಲೆ ಬಿದ್ದ ವೃ ಥಾಪವಾದವನ್ನು ತಪ್ಪಿಸಿಕೊಳ್ಳುವುದಕ್ಕಾಗಿ ನಾನು ಇಷ್ಟು ಪ್ರಯತ್ನವನ್ನು ಮಾಡಬೇಕಾಯಿತು” ಎಂದನು. ಆಗ ಜಾಂಬವಂತನು ಪರಮಸಂತೋಷ ದಿಂದ ಆ ರತ್ನ ದೊಡನೆ ತನ್ನ ಮಗಳಾದ ಜಾಂಬವತಿಯೆಂಬ ಕನ್ವಯನ್ನೂ ಕೂಡ ಆ ಕೃಷ್ಣನಿಗೆ ಕೊಟ್ಟೆನು, ಆಗ ಕೃಷ್ಣನು ಆ ಜಾಂಬವಂತನ ಸತ್ಕಾರಗಳಿಗೆ ಸಂತುಷ್ಟನಾಗಿ, ಪುನರಾವರ್ತಿಯಿಲ್ಲದ ಮುಕ್ತಿಯನ್ನೇ ಆವ ನಿಗೆ ಅನುಗ್ರಹಿಸಿದನು. ಓ ಪರೀಕ್ಷಿದ್ರಾಜಾ ! ಇಷ್ಟರಲ್ಲಿ ಆ ಬಿಲದ್ವಾರದ ಹೊರಗಿದ್ದ ಜನಗಳಿಗೆ ಮನಸ್ಸಿನಲ್ಲಿ ಭಯವು ಹೆಚ್ಚು ತ ಬಂದಿತು. ಅವರು ಹನ್ನೆರಡುದಿನಗಳವರೆಗೆ ಹೊರಗೆ ನಿಂತು ನಿರೀಕ್ಷಿಸುತ್ತಿದ್ದು, ಆಗಲೂ ಕೃಷ್ಣ ನು ಹಿಂತಿರುಗಿ ಬಾರದಿದ್ದುದನ್ನು ನೋಡಿ, ಆತನವಿಷಯದಲ್ಲಿ ನಿರಾಶರಾಗಿ ದುಃಖದಿಂದ ತಮ್ಮ ತಮ್ಮ ಪಟ್ಟಣಗಳಿಗೆ ಹಿಂತಿರುಗಿಬಿಟ್ಟರು. ಈ ವೃತ್ತಾಂ ತವು ಅಲ್ಲಲ್ಲಿ ಹರಡಿಕೊಂಡಿತು. ಬಿಲಕ್ಕೆ ಹೋದ ಕೃಷ್ಣನು ಹಿಂತಿರುಗಿ ಬಾರಲಿಲ್ಲವೆಂಬ ವೃತ್ತಾಂತವನ್ನು ಕೇಳಿ, ದೇವಕೀವಸುದೇವರೂ, ರುಕ್ಕಿ ದೇವಿಯೂ, ಕೃಷ್ಣನ ಇಷ್ಟಮಿತ್ರಬಂಧುಗಳೂ ಸಂಕಟದಿಂದ ಕುಪಿ ಯುತಿದ್ದರು. ಬ್ಯಾರಕಾವಾಸಿಗಳೆಲ್ಲರೂ ಬಾಯಿಗೆ ಬಂದಹಾಗೆ ಸತ್ತಾ ಜಿತನ್ನು ನಿಂದಿಸುತಿದ್ದರು, ಕೊನೆಗೆ ಆ ಜನರೆಲ್ಲರೂ, ತಿರುಗಿ ತಮಗೆ ಕೃಷ್ಣನ ದರ್ಶನವು ಲಭಿಸುವುದಕ್ಕಾಗಿ, ತಮ್ಮ ನಗರದೇವತೆಯಾದ ಮಹಾ ಮಾಯೆಯೆಂಬ ದುರ್ಗಾದೇವಿಗೆ ಹರಕೆಯನ್ನು ಕಟ್ಟಿ, ಉಪಾಸನೆಮಾಡು ತಿದ್ದರು. ಆ ದುರ್ಗಾದೇವಿಯು ಅವರಲ್ಲಿ ಪ್ರಸನ್ನ ಛಾಗಿ ಅನುಗ್ರಹಿಸುತ್ತಿರು ವಲ್ಲಿ, ಕೃಷ್ಣನು ಸ್ಯಮಂತಕರತ್ನ ವನ್ನು ಕೈಯಲ್ಲಿಟ್ಟುಕೊಂಡು, ಜಾಂಬವತಿ ಯೊಡನೆ ಅವರಮುಂದೆ ಗೋಚರಿಸಿದನು.