ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೪೪ d, U 3 ಶ್ರೀಮದ್ಭಾಗವತವು [ಅಧ್ಯಾ ೫೩. ಆಗ ಆ ಜನಗಳ ಸಂತೋಷವನ್ನು ಕೇಳಬೇಕೆ ? ಸತ್ತವನು ಎದ್ದು ಬಂದಂತೆ ಬಹುದಿನಗಳವರೆಗೆ ಕಾಣದಿದ್ದ ಕೃಷ್ಣನು, ಈಗ ಹೊಸಪತ್ನಿ ಯೊ ಡಗೂಡಿ, ಸ್ಯಮಂತಕರತ್ನ ವನ್ನು ಧರಿಸಿ ಬಂದುದನ್ನು ನೋಡಿ ಎಲ್ಲರೂ ಪರಮಸಂತೋಷದಿಂದ ಅವನನ್ನು ಆಲಿಂಗಿಸಿದರು, ಆಮೇಲೆ ಕೃಷ್ಣನು ರಾಜನಾದ ಉಗ್ರಸೇನನ ಬಳಿಗೆ ಬಂದು, ಅಲ್ಲಿ ದೊಡ್ಡ ಸಭೆಯನ್ನು ಸೇರಿಸಿ, ಅಲ್ಲಿ ಗೆ ಸತ್ರಾಜಿತನ್ನು ಕರೆಸಿ, ಆ ರತ್ನವು ತನಗೆ ಸಿಕ್ಕಿದ ಪೂರೋತ್ತರಗಳೆಲ್ಲವ ನ್ಯೂ ವಿವರವಾಗಿ ತಿಳಿಸಿ, ಅದನ್ನು ಅವನ ಕೈಗೆ ಕೊಟ್ಟುಬಿಟ್ಟನು. ಕೃಷ್ಣನ ಮೇಲೆ ವ್ಯರ್ಥವಾಗಿ ಅಪವಾದವನ್ನು ಹೇಳುತಿದ್ದ ಸತ್ರಾಜಿತ್ತು, ನಾಚಿಕೆ ಯಿಂದ ತಲೆಯೆತ್ತಲಾರದೆ, ತನ್ನ ತಪ್ಪಿಗಾಗಿ ತಾನೇ ಪಶ್ಚಾತ್ತಾಪದಿಂದ ಕು ದಿಯುತ್ತ ಮನೆಗೆ ಹೊರಟುಹೋದನು. ಅವನಿಗೆ ಯಾವಯಾವ ವಿಧ ದಿಂದಲೂ ಮನಸ್ಸಿಗೆ ಸಮಾಧಾನವಾಗಲಿಲ್ಲ. ಅನವರತವೂ ತನ್ನಲ್ಲಿ ತಾನು (ಅಯ್ಯೋ ! ಮೂಢನಾದ ನಾನು ಅನ್ಯಾಯವಾಗಿ ಕೃಷ್ಣನಮೇಲೆ ಇಲ್ಲದ ದೂರನ್ನು ಹೇಳಿದೆನಲ್ಲಾ ! ಸಯ್ಯಲೋಕಪ್ರಿಯನಾಗಿಯೂ, ಬಲಾಢನಾಗಿ | ಯೂ ಇರುವ ಆ ಕೃಷ್ಣನೊಡನೆ ವಿರೋಧವನ್ನು ಕಟ್ಟಿಕೊಂಡಮೇಲೆ, ನಾ ನು ಬದುಕುವುದು ಹೇಗೆ? ನಾನು ಮಾಡಿದ ತಪ್ಪನ್ನು ಹೇಗೆ ಕಳೆದುಕೊಳ್ಳಲಿ? ಯಾವ ರೀತಿಯಿಂದ ಆ ಕೃಷ್ಣನು ನನ್ನಲ್ಲಿ ಪ್ರಸನ್ನ ನಾಗುವಂತೆ ಮಾಡಿಕೊ ಕೃಲಿ ! ಮುಂದೆ ಯಾವ ಉಪಾಯದಿಂದ ನನಗೆ ಕ್ಷೇಮವುಂಟಾಗುವುದು? ಜನಗಳು ನನ್ನನ್ನು ನಿಂದಿಸದಹಾಗೆ ಏನುಪಾಯವನ್ನು ಮಾಡಲಿ ! ಮುಂದಾಲೋಚನೆಯಿಲ್ಲದೆ ಹಣದಾಸೆಯಿಂದ ಆ ಕೃಷ್ಣನಲ್ಲಿ ಮಹಾಪರಾ ಧವನ್ನು ಮಾಡಿದ ನನ್ನ ಜನ್ಮವನ್ನು ಸುಡಬೇಕಲ್ಲವೆ ?” ಎಂದು ಯೋಚಿಸಿ, ಕೊನೆಗೆ « ಇದಕ್ಕೆ ಬೇರೆ ಉಪಾಯವೇನೂ ತೋರಲಿಲ್ಲ. ಈಗ ನಾನಾಗಿ ಯೇ ಆ ಕೃಷ್ಣನಬಳಿಗೆ ಹೋಗಿ, ನನ್ನ ಮಗಳಾದ ಸತ್ಯಭಾಮೆಯೆಂಬ ಕನ್ಯಾ ರತ್ನ ವನ್ನೂ , ಈ ಸ್ಯಮಂತಕರತ್ನ ವನ್ನೂ ಅವನಿಗೇ ಒಪ್ಪಿಸಿಬರುವೆನು. ಇದೇ ಕಾಲೋಚಿತವಾದ ಉಪಾಯವು! ಇದುಹೊರತು ನನ್ನ ಅಪರಾಧಕ್ಕೆ ಬೇರೆ ವಿಧವಾದ ಪ್ರತೀಕಾರವಿಲ್ಲ.”ಎಂದು ನಿಶ್ಚಯಿಸಿಕೊಂಡನು, ಒಡನೆಯೇ ತನ್ನ ಮಗಳನ್ನೂ , ಆಸ್ಯಮಂತಕರತ್ನ ವನ್ನೂ ತಾನಾಗಿಯೇ ಕೃಷ್ಣನಿಗೆ ತಂದೆ